ಕುಶಾಲನಗರ ಇನ್ನರ್ ವೀಲ್ ಸಂಸ್ಥೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ಡಾ.ಮಧುಸೂದನ್, ಡಾ.ಶಿವಕುಮಾರ್, ಸೀತಾಲಕ್ಷ್ಮಿ ಇತರರಿದ್ದರು.
- ಮಗುವಿನ ಆರೋಗ್ಯ ಸದೃಢತೆಗೆ ಸ್ತನಪಾನ ಅವಶ್ಯ
ಕುಶಾಲನಗರ: ಯಾವುದೇ ರೀತಿಯ ಹಾರೈಕೆಗಿಂತ ಮಗುವಿನ ಆರೋಗ್ಯ ಸದೃಡತೆಗೆ ಸ್ತನಪಾನ ಅತ್ಯಂತ ಅವಶ್ಯ. ಮಹಿಳೆಯರು ಯಾವುದೇ ಅಂಜಿಕೆಯಿಲ್ಲದೆ ತಮ್ಮ ಮಗುವಿಗೆ ಹಾಲು ಕುಡಿಸಬೇಕು ಎಂದು ಕುಶಾಲನಗರ ಆರೋಗ್ಯ ಕೇಂದ್ರದ ತಾಲೂಕು ವೈದ್ಯಾಧಿಕಾರಿ ಡಾ.ಮಧುಸೂದನ್ ಅಭಿಪ್ರಾಯಪಟ್ಟಿದ್ದಾರೆ.
ದರಿಂದ ಅವರ ಚೆಂದವೂ ಹೆಚ್ಚಾಗುತ್ತೆ. ಈ ರೀತಿಯ ಹಲವು ವಿಚಾರಗಳನ್ನು ಹಾಜರಿದ್ದ ಬಾಣಂತಿಯರಿಗೆ ವಿವರಿಸಿದರು.
ಮಕ್ಕಳ ವೈದ್ಯ ಡಾ.ಶಿವಕುಮಾರ್ ಮಾತನಾಡಿ, ವೈಜ್ಞಾನಿಕವಾಗಿ ಒಬ್ಬ ಬಾಣಂತಿ ಮಗುವಿನೊಂದಿಗಿನ ನಡವಳಿಕೆ ಹೇಗೆ ಇರಬೇಕೆಂದು ಸವಿಸ್ತಾರವಾಗಿ ಮನದಟ್ಟು ಮಾಡಿದರು. ಸ್ತನಪಾನದ ಬಗ್ಗೆ ಗ್ರಾಮೀಣ ಭಾಗದ ತಾಯಂದಿರಿಗೆ ಇರುವ ಮೂಢನಂಬಿಕೆ ಹಾಗೂ ನಗರವಾಸಿ ತಾಯಂದಿರ ಬಗ್ಗೆಯೂ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷೆ ಸೀತಾಲಕ್ಷ್ಮಿ ಮಾತನಾಡಿ, ಸ್ತನಪಾನದಿಂದ ತಾಯಿ ಮಗುವಿನ ಭಾವನಾತ್ಮಕ ಸಂಬಂಧ ದೃಡ ಪಡುವುದಲ್ಲದೆ, ಮಕ್ಕಳು ಭವಿಷ್ಯದಲ್ಲಿ ಸದೃಢ ನಾಗರೀಕರಾಗಿ ರೂಪುಗೊಳ್ಳುವರು ಎಂದು ತಿಳಿಸಿದರು. ಜಿಲ್ಲಾ ಅರೋಗ್ಯ ಅಧಿಕಾರಿ ಶಾಂತಿ ಸ್ತನಪಾನದ ಸಂರಕ್ಷಣೆಯ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಾಲಿನಿ ನರೇಂದ್ರ, ಖಜಾಂಚಿ ಕುಸುಮ ನಟೇಶ್, ಹಿಂದಿನ ಅಧ್ಯಕ್ಷ ಸುನೀತಾ ಮಹೇಶ್, ಶೀನ ಪ್ರಕಾಶ್ ಮತ್ತು ರೂಪ ಗಣೇಶ್, ಚಿತ್ರಾ ರಮೇಶ್ ಮತ್ತಿತರರು ಇದ್ದರು.