ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆೆಂಗಳೂರಿನ ಜಸ್ಟ್ ರೊಬೊಟಿಕ್ಸ್ ಸಂಸ್ಥೆ ಸಿಇಒ ಸಿ.ಎ. ಬ್ರಿಜೇಶ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪಿ.ಎಂ. ದೇವಕಿ ಇದ್ದರು. 
ಕೊಡಗು

ಓಜಸ್ವಿ ಫೌಂಡೇಶನ್‌ನಿoದ ಕಾರ್ಯಾಗಾರ

ಸುನಿಲ್ ಪೊನ್ನೇಟಿ
ಮಡಿಕೇರಿ:
ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಗುರುವಾರ (ಜ.8) ಕ್ರಾö್ಯಫ್ಟ್ ಎ ರೆಸ್ಯೂಮ್ ದಟ್ ಮೇಕ್ಸ್ ಆ್ಯನ್ ಇಂಪ್ಯಾಕ್ಟ್ ಎನ್ನುವ ವಿಷಯಾಧಾರಿತ ಪ್ರೇರಣಾತ್ಮಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಗಳೂರಿನ ಕೊಡಗು ಗೌಡ ಸಮಾಜ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಓಜಸ್ವಿ ಫೌಂಡೇಶನ್‌ನ ಟ್ರಸ್ಟಿಯೂ ಆಗಿರುವ ಬೆಂಗಳೂರಿನ ಜಸ್ಟ್ ರೊಬೊಟಿಕ್ಸ್ ಸಂಸ್ಥೆ ಸಿಇಒ ಸಿ.ಎ. ಬ್ರಿಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ರೆಸ್ಯೂಮ್ ತಯಾರಿಕೆ ಮತ್ತು ವೃತ್ತಿಜೀವನದ ಅಗತ್ಯ ಕೌಶಲ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ವೃತ್ತಿ ನಿರ್ಮಾಣಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂz ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪಿ.ಎಂ. ದೇವಕಿ ಈ ಸಂದರ್ಭ ಮಾತನಾಡಿ ದಾನಿಗಳ ಸಹಕಾರ ಮತ್ತು ಓಜಸ್ವಿ ಫೌಂಡೇಶನ್‌ನ ಶಿಕ್ಷಣಾಭಿವೃದ್ಧಿ ಉಪಕ್ರಮಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ತಮ್ಮ ಕೌಶಲ್ಯಗಳನ್ನು ವಿಸ್ತರಿಸಿಕೊಳ್ಳಬೇಕೆಂದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ. ಕವಿತಾ ಕಾರ್ಯಕ್ರಮದ ಉದ್ದೇಶ ವಿವರಿಸಿ, ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಮತ್ತು ವೃತ್ತಿ ಮಾರ್ಗದರ್ಶನಕ್ಕೆ ಬದ್ಧವಾಗಿರುವ ಓಜಸ್ವಿ ಫೌಂಡೇಶನ್, ಮುಂದಿನ ದಿನಗಳಲ್ಲಿಯೂ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದಾಗಿ ತಿಳಿಸಿದರು.