ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಾಗಾರವನ್ನು ಎ.ಜೆ.ಲೋಕೇಶ್ ಉದ್ಘಾಟಿಸಿದರು. ಡಾ.ಬಿ.ಎನ್.ಶಿವಪ್ರಸಾದ್, ಡಾ.ಮಂಜುನಾಥ್, ಡಾ.ಪುರುಷೋತ್ತಮ್ ಇತರರಿದ್ದರು. 
ಕೊಡಗು

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರ

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರ
ಮಡಿಕೇರಿ: ಕೊಡಗು ಜಿಲ್ಲೆಯ ವೈದ್ಯಕೀಯ ಶಿಕ್ಷಣ ಅಭಿವೃದ್ಧಿಪಡಿಸುವಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಧಿವಾತ ಶಾಸ್ತ್ರದ ಬಗ್ಗೆ ಉನ್ನತ ಮಟ್ಟದ ಸಿ.ಎಂ.ಇ ಕಾರ್ಯಾಗಾರ ನಡೆಯಿತು.
ಕರ್ನಾಟಕ ರುಮಟಾಲಜಿ ಅಸೋಸಿಯೇಷನ್ ಮತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿಯ ಸಂಯುಕ್ತಾಶ್ರಯದಲ್ಲಿ ಸಂಸ್ಥೆ ನಿರ್ದೇಶಕರು ಹಾಗೂ ಡೀನ್ ಎ.ಜೆ.ಲೋಕೇಶ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ೨೦೧೮ರ ನಂತರ ಈ ವಿಷಯದ ಬಗ್ಗೆ ಜಿಲ್ಲೆಯಲ್ಲಿ ನಡೆದ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಸ್ಥಳೀಯ ವೈದ್ಯಕೀಯ ಸಮುದಾಯದಲ್ಲಿ ಈ ವಿಷಯದ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಯಿತು.
ವಿಚಾರ ಸಂಕಿರಣದಲ್ಲಿ ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸೇರಿದಂತೆ ಇತರೆ ರಾಜ್ಯದ ವೈದ್ಯರುಗಳು, ವಿವಿಧ ಕಾಲೇಜುಗಳ ಪ್ರತಿನಿಧಿಗಳು ಇದರಲ್ಲಿ ನೋಂದಾಯಿಸಿಕೊಂಡಿದ್ದರು.
ಡಾ.ಬಿ.ಎನ್.ಶಿವಪ್ರಸಾದ್, ಡಾ.ಮಂಜುನಾಥ್, ಡಾ.ಪುರುಷೋತ್ತಮ್, ಡಾ.ಸಿಡ್ನಿ ಡಿಸೋಜಾ, ಡಾ.ಸುಧೇಂದ್ರ ರಾವ್ ಮತ್ತು ಡಾ.ಮುಖ್ಯಪ್ರಾಣ ಪ್ರಭು ಅವರ ನೇತೃತ್ವದಲ್ಲಿ ಶೈಕ್ಷಣಿಕ ಕಾರ್ಯಕಲಾಪಗಳು ಸುಗಮವಾಗಿ ನಡೆದವು.
ಡಾ.ಚೆಂಗಪ್ಪ.ಕೆ.ಜಿ ಅವರು ಕೀಲು ನೋವಿನ ವಿವಿಧ ವಿಧಗಳನ್ನು ಗುರುತಿಸುವ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಿದರು. ಡಾ.ಪ್ರಕೃತಿ.ಜೆ ಅವರು ಮಕ್ಕಳಲ್ಲಿ ಕಂಡುಬರುವ ಕೀಲು ನೋವು ಮತ್ತು ಅದಕ್ಕೆ ನೀಡಬೇಕಾದ ಹಂತ ಹಂತದ ಚಿಕಿತ್ಸೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಂಗೀತ.ಕೆ.ಎನ್, ಡಾ.ವಿಕ್ರಮರಾಜ್.ಕೆ.ಜೈನ್, ಡಾ.ನಾಗರಾಜ್.ಎಸ್, ಡಾ.ರಮೇಶ್ ಜೋಯಿಸ್, ಡಾ.ವಿನೋದ್ ರವೀಂದ್ರನ್ ಪಾಲ್ಗೊಂಡಿದ್ದರು. ಕಾರ್ಯಕ್ರಮ ಪ್ರಯುಕ್ತ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಮತ್ತು ಕೇಸ್ ಪ್ರೆಸೆಂಟೇಶನ್ ಸ್ಪರ್ಧೆ ನಡೆಯಿತು. ವಿಜೇತರಿಗೆ ಮತ್ತು ಪ್ರಬಂಧ ಮಂಡಿಸಿದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.