ಪಾಲಿಬೆಟ್ಟದ ಚೆಫ್ ನೈಫ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಿವೃತ್ತ ತಹಸೀಲ್ದಾರ್ ಸಿ.ಯು.ರಾಧಾಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ್ ಕುಮಾರ್, ಟಿ.ವೈ.ಮುರಳಿ, ಮನೋಜ್ ಬಂಡೆ, ಮಧುಸೂದನ್, ವಿ.ಬಿ.ರಿನೀಶ್ ಇದ್ದರು. 
ಕೊಡಗು

ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿ

ಸಿದ್ದಾಪುರ: ಸಮಾಜದ ಸದಸ್ಯರು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಹೇಳಿದರು.
ಪಾಲಿಬೆಟ್ಟದ ಚೆಫ್ ನೈಫ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಾಲಿಬೆಟ್ಟ ಶಾಖೆಯ ಹಿಂದೂ ಮಲಯಾಳಿ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ವೈ.ಮುರಳಿ ನೇತೃತ್ವದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಸದಸ್ಯರು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಸಮಾಜದ ಮೂಲಕ ಇನ್ನಷ್ಟು ಉತ್ತಮ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದರು.
ನೂತನ ಅಧ್ಯಕ್ಷ ಟಿ.ವೈ.ಮುರಳಿ ಮಾತನಾಡಿ, ಸಮಾಜದ ಸದಸ್ಯರು ಒಗ್ಗೂಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸದಸ್ಯರ ಕುಟುಂಬಗಳಿಗೆ ಯಾವುದೇ ತೊಂದರೆ ಎದುರಾದಲ್ಲಿ ತಕ್ಷಣ ಸ್ಪಂದಿಸುವುದು ನಮ್ಮ ಪ್ರಮುಖ ಗುರಿಯಾಗಿದ್ದು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಬಂಡೆ, ಖಜಾಂಚಿಯಾಗಿ ಮಧುಸೂದನ್, ಗೌರವ ಅಧ್ಯಕ್ಷರಾಗಿ ವಿ.ಬಿ.ರಿನೀಶ್, ಉಪಾಧ್ಯಕ್ಷರಾಗಿ ಸಾಯುಜ್, ಮಂಜುಳಾ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ನಿರ್ದೇಶಕರಾಗಿ ಎಂ.ಎಸ್.ಶಶಿ, ಪ್ರಿಯಾ ಚಂದ್ರನ್, ಶೀಲಾ ಅನಿಲ್, ಸುರೇಂದ್ರ, ಎಂ.ಎ.ಅಖಿಲ್, ಪಿ.ಕೆ.ಗಂಗಾಧರ್, ನಳಿನಿ ದುರ್ಗಾ, ವಿ.ಪಿ.ಅಭಿನಂದನ್ ಆಯ್ಕೆಯಾಗಿದ್ದಾರೆ.
ಸುಶಾ ಮೋಹನ್ ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಿವೃತ್ತ ತಹಸೀಲ್ದಾರ್ ಸಿ.ಯು.ರಾಧಾಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷ ಶರತ್ ಕಾಂತ್, ಖಜಾಂಚಿ ಶಾಜಿ ಅಚ್ಯುತ್ತನ್, ಉಪಾಧ್ಯಕ್ಷೆ ಪುಷ್ಪಾ ಮನೋಜ್ ಉಪಸ್ಥಿತರಿದ್ದರು.