ಮುಂಬರುವ ಸ್ವಾತಂತ್ರö್ಯ ದಿನಾಚರಣೆ ಸಂದರ್ಭ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಡಗಿನವರೇ ರಾಷ್ಟçಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ನಂಬಿಕೆ ಕಾಂಗ್ರೆಸ್ ಪಾಳೆಯದಲ್ಲಿ ದಟ್ಟವಾಗಿದೆ. ೨ನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂದು ಮಂತ್ರಿ ಸ್ಥಾನ ಖಂಡಿತ ಜಿಲ್ಲೆಗೆ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇರುವ ಉಭಯ ಶಾಸಕರ ಅಭಿಮಾನಿಗಳು, ಸ್ಥಳೀಯರೇ ಉಸ್ತುವಾರಿ ಸಚಿವ ಆಗುವ ಆಶಯ ಇಟ್ಟುಕೊಂಡಿದ್ದಾರೆ.
ಸಿದ್ದರಾಮಯ್ಯ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಬಂದು ಮುಖ್ಯಮಂತ್ರಿಯಾಗಿ ನೇಮಕ ಆಗುತ್ತಿದ್ದಂತೆಯೇ ಕೊಡಗಿನ ಕಾಂಗ್ರೆಸ್‌ನಲ್ಲಿ ನಿರೀಕ್ಷೆಗಳು ಗರಿಗೆದರಿದ್ದವು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವಾಗ ಅವರ ಜತೆಯಲ್ಲೆ ಕೊಡಗಿನ ಶಾಸಕರೂ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ ಮೊದಲ ಹಂತದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಹಾಗೆಂದು ಅಭಿಮಾನಿಗಳು ನಿರಾಸರಾಗಿಲ್ಲ. ಮುಂದಿನ ಹಂತದಲ್ಲಾದರೂ ಕೊಡಗಿಗೆ ಮನ್ನಣೆ ಸಿಗುತ್ತದೆ ಎನ್ನುವ ಆಶಾಭಾವನೆ ಇಟ್ಟುಕೊಂಡು ಕಾಯುತ್ತಿದ್ದಾರೆ.
ಪ್ರತಿ ಸಲವೂ ಸಚಿವ ಸಂಪುಟ ರಚನೆ, ಪುನರ್‌ರಚನೆ ಅಥವಾ ವಿಸ್ತರಣೆ ಸಂದರ್ಭ ಈ ಬಾರಿಯಾದರೂ ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗಲಿ ಎನ್ನುವ ಬೇಡಿಕೆ ರಾಜಕೀಯ ರಹಿತವಾಗಿ ಕೊಡಗಿನಿಂದ ಕೇಳಿಬರುವುದು ಸಾಮಾನ್ಯ. ಭೌಗೋಳಿಕವಾಗಿ ಪುಟ್ಟ ಜಿಲ್ಲೆಯಾಗಿರುವ ಕೊಡಗನ್ನು ಕಳೆದ ಕೆಲವು ದಶಕಗಳಿಂದ ರಾಜಕೀಯವಾಗಿ ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ ಎನ್ನುವ ಆರೋಪವೇ ಇದಕ್ಕೆ ಕಾರಣ. ಬಿಜೆಪಿಯಿಂದ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚುರಂಜನ್ ೨೦೧೨ರಲ್ಲಿ ಅಲ್ಪಾವಧಿಗೆ ಕ್ರೀಡಾ ಮತ್ತು ಯುವಜನ ಸೇವೆ ಸಚಿವರಾದ ನಂತರ ಇಲ್ಲಿಯ ತನಕ ಕೊಡಗಿನಿಂದ ಗೆದ್ದವರಿಗೆ ಸಚಿವರಾಗುವ ಯೋಗವೇ ಕೂಡಿ ಬಂದಿಲ್ಲ.
ಹಿAದೊಮ್ಮೆ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿಗೆ ಒಬ್ಬ ಮುಖ್ಯಮಂತ್ರಿ, ೨೪ ಸಚಿವರು ಇದ್ದರು. ಆದರೆ ೨೦೦೪ರಿಂದ ಈಚೆಗೆ ಕೊಡಗು ರಾಜಕೀಯ ಪ್ರಾತಿನಿಧ್ಯವನ್ನೇ ಕಳೆದುಕೊಂಡಿದೆ. ೧೯೯೯ರಲ್ಲಿ ಕಾಂಗ್ರೆಸ್‌ನಿAದ ಎಸ್.ಎಂ. ಕÊಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗಿನ ಮೂವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರದ ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳೂ ಈ ವಿಷಯದಲ್ಲಿ ಕೊಡಗನ್ನು ನಿರ್ಲಕ್ಷಿಸುತ್ತಾ ಬಂದಿವೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗಿನಿಂದ ಇಬ್ಬರು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದರು. ೫ ಬಾರಿ ಗೆದ್ದಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ೪ ಸಲ ಗೆದ್ದಿದ್ದ ಕೆ.ಜಿ. ಬೋಪಯ್ಯ ಶಾಸಕರಾಗಿ ಸುದೀರ್ಘ ಕಾಲದ ಅನುಭವ ಪಡೆದುಕೊಂಡಿದ್ದಲ್ಲದೆ ರಾಜಕೀಯವಾಗಿಯೂ ಬಲಾಢ್ಯರಾಗಿದ್ದರು. ಹಾಗಾಗಿ ಇವರಲ್ಲಿ ಒಬ್ಬರು ಸಚಿವರು ಆಗಬಹುದು ಎನ್ನುವ ನಿರೀಕ್ಷೆ ಬಿಜೆಪಿ ಸರ್ಕಾರದ ಕಾಲದಲ್ಲೂ ಈಡೇರಿರಲಿಲ್ಲ.
ಇದೀಗ ಬದಲಾದ ಕಾಲಘಟ್ಟದಲ್ಲಿ ಜಿಲ್ಲೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ನ ಇಬ್ಬರು ಶಾಸಕರು ಇದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಬಾರಿಯಾದರೂ ಸಚಿವ ಸ್ಥಾನದ ಬರ ನೀಗಬಹುದು ಎನ್ನುವ ನಿರೀಕ್ಷೆಗಳು ಇದ್ದವು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರನ್ನಾಗಿ ನೇಮಿಸಿ ಸಂಪುಟ ಸ್ಥಾನ ಕೊಟ್ಟಿದ್ದು ಹೊರತುಪಡಿಸಿದರೆ ಜಿಲ್ಲೆಗೆ ರಾಜಕೀಯವಾಗಿ ಹೆಚ್ಚಿನ ಲಾಭ ಆಗಿರಲಿಲ್ಲ.
ಡಿ.ಕೆ. ಶಿವಕುಮಾರ್ ಅವಧಿಯಲ್ಲಾದರೂ ಕೊಡಗಿಗೆ ಮಂತ್ರಿ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಆರಂಭದಲ್ಲಿ ಹುಸಿ ಆಗಿದ್ದರೂ ಮುಂದಿನ ಹಂತದಲ್ಲಾದರೂ ಸಿಗಬಹುದು ಎನ್ನುವ ಆಸೆ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಜೀವಂತವಾಗಿದೆ. ಅದರಲ್ಲೂ ಈಗಲಾದರೂ ಕೊಡಗಿನವರೇ ಉಸ್ತುವಾರಿ ಸಚಿವರಾಗಲಿ ಎನ್ನುವ ಬೇಡಿಕೆಯನ್ನು ಪಕ್ಷದ ವರಿಷ್ಠರಿಗೆ ಜಿಲ್ಲಾ ಕಾಂಗ್ರೆಸ್ ಮೂಲಕ ತಲುಪಿಸಲಾಗಿದೆ. ೨೦೧೨ರಿಂದ ಈಚೆಗೆ ಹೊರ ಜಿಲ್ಲೆಯಲ್ಲಿ ಆಯ್ಕೆ ಆದ ಜನಪ್ರತಿನಿಧಿಗಳಿಗೇ ಕೊಡಗಿನ ಉಸ್ತುವಾರಿ ಕೊಡುತ್ತಿರುವುದು ಇದಕ್ಕೆ ಕಾರಣ.
ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವ ಕೊಡಗಿಗೆ ಬಯಲು ಸೀಮೆ ಕೋಲಾರದವರು, ಕರಾವಳಿಯ ದಕ್ಷಿಣಕನ್ನಡ, ಉಡುಪಿಯವರು, ಉತ್ತರ ಕರ್ನಾಟಕ ಭಾಗದವರನ್ನು ಉಸ್ತುವಾರಿ ಮಾಡಿದರೆ ಅವರು ಇಲ್ಲಿಯ ಸ್ಥಳೀಯ ವಿಷಯಗಳನ್ನು ಅರ್ಥ ಮಾಡಿಕೊಂಡು ಹೇಗೆ ಸ್ಪಂದಿಸುತ್ತಾರೆ ಎನ್ನುವುದು ಸ್ಥಳೀಯರ ಪ್ರಶ್ನೆ. ಹಾಗಾಗಿ ಈ ಬಾರಿಯಾದರೂ ಸ್ಥಳೀಯರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನೀಡಿದರೆ ಸ್ಥಳೀಯ ಸಮಸ್ಯೆಗಳ ಇತ್ಯರ್ಥಕ್ಕೆ ಅವಕಾಶವಾಗುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಕೊಡಗಿಗೆ ಮಂತ್ರಿ ಸ್ಥಾನ ಸಿಗಬೇಕು ಎನ್ನುವ ಬಗ್ಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಆರಂಭದಿAದಲೇ ತಮ್ಮ ಸಹಮತ ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಕೊಡಗಿಗೆ ಹಲವು ವರ್ಷಗಳಿಂದ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಅಪ್ಪಚ್ಚು ರಂಜನ್ ಅಲ್ಪಾವಧಿಗೆ ಸಚಿವರಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ನಿರ್ಲಕ್ಷö್ಯ ಇರಬಾರದು. ಇದನ್ನು ಮುಂದಿಟ್ಟುಕೊAಡು ಸಚಿವ ಸ್ಥಾನ ಕೇಳಲಾಗುವುದು ಎನ್ನುವ ಮೂಲಕ ಜಿಲ್ಲೆಗೆ ನ್ಯಾಯಯುತವಾಗಿ ಬರಬೇಕಾಗಿರುವ ಹುದ್ದೆಗಾಗಿ ತಮ್ಮ ಹಕ್ಕು ಮಂಡಿಸುತ್ತಾ ಬಂದಿದ್ದಾರೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮೊದಲು ಅಷ್ಟಾಗಿ ಸಚಿವ ಸ್ಥಾನದ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಆದರೆ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಮಂತ್ರಿ ಆಗುವ ತಮ್ಮ ಇಂಗಿತವನ್ನು ಅಲ್ಲಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯುವ ನಾಯಕತ್ವದ ಪರ ಒಲವು ತೋರಿಸಿದ್ದು, ಸಂಪುಟದಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ಕೊಡುವ ಬಗ್ಗೆ ಅಭಿಪ್ರಾಯ ಹಂಚಿಕೊAಡಿರುವುದು ಮಂತರ್ ಅವರ ಆಸೆಗೆ ಮತ್ತಷ್ಟು ಜೀವ ತುಂಬಿದAತಾಗಿದೆ.
೧೯೯೯ರಲ್ಲಿ ಎಸ್.ಎಂ. ಕÊಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಅಬಕಾರಿ ಖಾತೆ ಮಂತ್ರಿಯಾಗಿದ್ದ ಎಂ.ಎA. ನಾಣಯ್ಯ ಕೊಡಗಿನ ಉಸ್ತುವಾರಿ ಜವಾಬ್ದಾರಿ ಪೂರ್ಣಾವಧಿಗೆ ನಿಭಾಯಿಸಿದ್ದರು. ಜಿಲ್ಲೆಯಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರು ಉಸ್ತುವಾರಿ ಸಚಿವರಾಗಿ ಪೂರ್ಣಾವಧಿಗೆ ಕೆಲಸ ಮಾಡಿದ್ದು ಇದೇ ಕೊನೆ. ನಂತರ ೨೦೧೨ರಲ್ಲಿ ಯುವಜನ ಸೇವೆ ಮತ್ತು ಕ್ರೀಡಾಮಂತ್ರಿ ಆಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಜಿಲ್ಲಾ ಉಸ್ತುವಾರಿ ಸಚಿವರಾದರೂ ಅವರಿಗೆ ಸಿಕ್ಕ ಅವಕಾಶ ತುಂಬಾ ಕಡಿಮೆ. ೧೯೯೯ರಲ್ಲಿ ಕ್ರಿಶ್ಚಿಯನ್ ಕೋಟಾದಲ್ಲಿ ಟಿ. ಜಾನ್ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಕೋಟಾದಲ್ಲಿ ಸುಮಾವಸಂತ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದ ಕಾರಣ ಅಂದು ಎಂ.ಎA. ನಾಣಯ್ಯ ಸೇರಿದಂತೆ ಮೂವರು ಸಚಿವರು ಕೊಡಗಿನಲ್ಲಿ ಇದ್ದರು. ಅಪ್ಪಚ್ಚು ರಂಜನ್ ನಂತರ ಆಲಂಗೂರು ಶ್ರೀನಿವಾಸ್, ರಾಮಚಂದ್ರಗೌಡ, ತನ್ವೀರ್ ಸೇಠ್, ಕೃಷ್ಣ ಪಾಲೇಮಾರ್, ದಿನೇಶ್ ಗುಂಡೂರಾವ್, ಸುರೇಶ್ ಕುಮಾರ್, ವಿ. ಸೋಮಣ್ಣ, ನಾಗೇಶ್, ಡಾ. ಹೆಚ್.ಸಿ. ಮಹದೇವಪ್ಪ, ಎಂ.ಆರ್. ಸೀತಾರಾಮ್, ಕೆ.ಜೆ. ಜಾರ್ಜ್, ಕೊಟ ಶ್ರೀನಿವಾಸ ಪೂಜಾರಿ, ಎನ್.ಎಸ್. ಬೋಸರಾಜು ಹೀಗೆ ಬೇರೆ ಜಿಲ್ಲೆಯವರೇ ಕೊಡಗಿನ ಉಸ್ತುವಾರಿ ಸಚಿವರಾಗಿದ್ದರು.
"
ಎಲ್ಲಾ ಶಾಸಕರಿಗೂ ಮಂತ್ರಿ ಆಗಬೇಕು ಎನ್ನುವ ಆಸೆ ಇರುತ್ತದೆ. ಹಾಗೆಯೇ ನನಗೂ ಆ ಆಸೆ ಇದೆ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ. ಮತ್ತೊಂದು ಕಡೆ ಸಚಿವ ಸಂಪುಟದಲ್ಲಿ ಕೊಡಗಿಗೆ ಪ್ರಾತಿನಿಧ್ಯ ಬೇಕು ಎನ್ನುವುದು ಕೂಡ ನ್ಯಾಯಯುತ ಬೇಡಿಕೆ ಆಗಿದೆ. ಕೊಡಗಿನವರು ಒಬ್ಬರು ಮಂತ್ರಿ ಆಗಬೇಕಿದೆ. ಈ ಬಗ್ಗೆ ಉತ್ತಮ ಬೆಳವಣಿಗೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
"
ಕೋಟ್: ಜಿಲ್ಲೆಗೆ ಸಚಿವ ಸ್ಥಾನ ಬೇಕು ಎನ್ನುವುದರ ಬಗ್ಗೆ ಕೊಡಗಿನಲ್ಲಿ ಹಿಂದೆAದೂ ಕೇಳಿಬರದ ರೀತಿಯಲ್ಲಿ ಅಭಿಪ್ರಾಯಗಳು ಕೇಳಿಬರುತ್ತಿವೆ. ಮೊದಲ ಹಂತದಲ್ಲಿ ಸಚಿವ ಸಂಪುಟದಲ್ಲಿ ಹಿರಿಯರಿಗೆ ಅವಕಾಶ ಕೊಡಲಾಗಿದೆ. ೨ನೇ ಹಂತದಲ್ಲಿ ಖಂಡಿತವಾಗಿಯೂ ಕೊಡಗಿಗೆ ಅವಕಾಶ ಸಿಗುತ್ತದೆ. ಜಿಲ್ಲೆಯ ಇಬ್ಬರೂ ಶಾಸಕರು ಕೂಡ ಪ್ರತಿಭಾವಂತರಿದ್ದು, ಸಚಿವರಾಗುವ ಅರ್ಹತೆ ಪಡೆದುಕೊಂಡಿದ್ದಾರೆ.
— ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಡಿಕೆ೦೨)