ಮರಂದೋಡ ಗ್ರಾಮದ ನೀಡುಮಂಡ ಸೇತುವೆ ಮೇಲೆ ಓಡಾಡಿದ ಕಾಡಾನೆ.
- ಕಾಫಿ ತೋಟದಿಂದ ಓಡಿದ ಕಾರ್ಮಿಕರು
ನಾಪೋಕ್ಲು: ಮರದೋಡ ಗ್ರಾಮದಲ್ಲಿ ಶುಕ್ರವಾರ ಓಡಾಡಿದ ಕಾಡಾನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ನಾಪೋಕ್ಲು, ಕಕ್ಕಬೆ, ವಿರಾಜಪೇಟೆ ಮುಖ್ಯ ರಸ್ತೆಯ ಮರಂದೋಡ ಗ್ರಾಮದ ನೀಡುಮಂಡ ಸೇತುವೆ ಮೇಲೆ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನಲ್ಲಿ ತೊಡಗಿದ್ದ ಕಾರ್ಮಿಕರು ಹಾಗೂ ಗ್ರಾಮಸ್ಥರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.
ಇದರಿಂದಾಗಿ ಗ್ರಾಮದಲ್ಲಿ ಜೀವ ಭಯದ ಕಾರ್ಮೋಡ ಆವರಿಸಿ ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗೆ ಓಡಿಸಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.