ಕ್ರೀಡಾಸಂಕೀರ್ಣಕ್ಕೆ ಗುರುತಿಸಲಾಗಿರುವ ವಿ. ಬಾಡಗದಲ್ಲಿರುವ ಜಾಗಕ್ಕೆ ಭೇಟಿ ನೀಡಿ ಪರೀಶೀಲಿಸಿದ ಶಾಸಕ ಎ.ಎಸ್. ಪೊನ್ನಣ್ಣ 
ಕೊಡಗು

ಕೊಡಗಿಗೆ ಸುಸಜ್ಜಿತ ಕ್ರೀಡಾ ಸಂಕೀರ್ಣ

ಸುನಿಲ್ ಪೊನ್ನೇಟಿ

ಪ್ರಮುಖ ಮುಖ್ಯಾಂಶಗಳು

  • 11.5 ಎಕರೆ ಪ್ರದೇಶದಲ್ಲಿ ನಿರ್ಮಾಣ
  • ಪೂರ್ವಭಾವಿ ಕೆಲಸಗಳು ಆರಂಭ
  • 40 ಕೋಟಿ ರೂ. ವೆಚ್ಚದ ಯೋಜನೆ
ಮಡಿಕೇರಿ:
ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣವೊAದರ ನಿರ್ಮಾಣಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆದಿದ್ದು, ಉದ್ದೇಶಿತ ಜಾಗದಲ್ಲಿ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 11.5 ಎಕರೆ ಪ್ರದೇಶದಲ್ಲಿ ಈ ಮಹತ್ವದ ಯೋಜನೆ ರೂಪುಗೊಳ್ಳಲಿದೆ. ಈ ಕ್ರೀಡಾಸಂಕೀರ್ಣಕ್ಕೆ ಸುಮಾರು 40 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ.
ಕೊಡಗು ಎಂದ ಕೂಡಲೇ ಸೇನಾ ಪರಂಪರೆಯ ಜತೆಗೆ ದೊಡ್ಡ ದೊಡ್ಡ ಕ್ರೀಡಾ ತಾರೆಗಳೂ ನೆನಪಿಗೆ ಬರುತ್ತಾರೆ. ಭೌಗೋಳಿಕವಾಗಿ ವಿಶಿಷ್ಟ ಜಿಲ್ಲೆಯಾಗಿರುವ ಕೊಡಗಿನಿಂದ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಕ್ಕಿದ್ದು, ಜಿಲ್ಲೆಯಲ್ಲಿನ ಸೀಮಿತ ಮೂಲಭೂತ ಸವಲತ್ತುಗಳ ನಡುವೆಯೇ ಸ್ಥಳೀಯ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟಿçÃಯ ಮಟ್ಟದಲ್ಲೂ ಮಿಂಚುತ್ತಿವೆ. ಕ್ರೀಡೆಗೆ ಸಂಬAಧಿಸಿದAತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಮತ್ತಷ್ಟು ಪ್ರತಿಭೆಗಳು ದೇಶಕ್ಕೆ ಕೊಡುಗೆಯಾಗಿ ಸಿಗಲಿವೆ.
ಸದ್ಯಕ್ಕೆ ಕೊಡಗಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಹಾಕಿ ಕೇಂದ್ರೀಕೃತವಾಗಿ ಬೆರಳೆಣಿಕೆಯಷ್ಟು ಸುಸಜ್ಜಿತ ಕ್ರೀಡಾಂಗಣಗಳು ಇವೆ. ಬಹುತೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳ ಆಟದ ಮೈದಾನವೇ ಕ್ರೀಡಾಪಟುಗಳ ಪಾಲಿನ ಅಭ್ಯಾಸದ ಜಾಗಗಳಾಗಿದೆ. ಪ್ರತಿ ವರ್ಷ ಕೌಟುಂಬಿಕ ಕ್ರೀಡಾಕೂಟಗಳ ಮೂಲಕವೂ ಸದ್ದು ಮಾಡುವ ಜಿಲ್ಲೆಯಲ್ಲಿ ಹಾಕಿ ಅಥವಾ ಕ್ರಿಕೆಟ್ ಆಡಲು ಸೂಕ್ತ ಮೈದಾನದ ಕೊರತೆ ಇದೆ. ಹಾಗಾಗಿ ಜಿಲ್ಲೆಯ ಪ್ರಮುಖ ಊರುಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಬೇಕು ಎನ್ನುವ ಬೇಡಿಕೆಯನ್ನು ಕ್ರೀಡಾಪ್ರೇಮಿಗಳು ಪ್ರಸ್ತಾಪಿಸುತ್ತಲೇ ಬರುತ್ತಿದ್ದಾರೆ.
ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕ್ರೀಡಾ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಕ್ರೀಡಾಪ್ರೇಮಿಗಳ ಒತ್ತಾಸೆಯ ಫಲ ಮತ್ತು ಪೊನ್ನಣ್ಣ ಅವರ ಪ್ರಯತ್ನದಿಂದಾಗಿ ವಿರಾಜಪೇಟೆ ತಾಲೂಕು ವಿ.ಬಾಡಗ ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ವಿವಿಧ ಕ್ರೀಡೆಗಳ ತರಬೇತಿ ಕೇಂದ್ರ ತಲೆ ಎತ್ತಲಿದೆ. ಇದಕ್ಕಾಗಿ 11.5 ಎಕರೆ ಜಾಗ ಗುರುತಿಸಲಾಗಿದ್ದು, ಕ್ರೀಡಾಂಗಣ ನಿರ್ಮಾಣ ಕಾಮಗಾರಿಯ ಪೂರ್ವಭಾವಿ ಕೆಲಸಗಳನ್ನು ಮಾಡಲಾಗಿದೆ. ಮೊದಲು ಕಾನೂರಿನಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಇದು ಸಾಧ್ಯವಾಗಿಲಿಲ್ಲ. ಇದೀಗ ವಿ. ಬಾಡಗ ಗ್ರಾಮದದ ಜಾಗವೇ ಅಂತಿಮವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಅಜಯ್ ಮಕಾನ್ ಅವರ ಬಹು ದೊಡ್ಡ ಪಾತ್ರ ಕೂಡ ಈ ಉದ್ದೇಶಿತ ಕ್ರೀಡಾಸಂಕೀರ್ಣ ನಿರ್ಮಾಣದ ಹಿಂದೆ ಇದೆ. ರಾಜ್ಯಸಭಾ ಕಲಾಪದ ವೇಳೆ ಕೊಡಗಿನ ಕ್ರೀಡಾ ಚಟುವಟಿಕೆ, ಕೊಡವ ಕೌಟುಂಬಿಕ ಹಾಕಿ ವಿಶ್ವದಾಖಲೆ ಬಗ್ಗೆ ಶ್ಲಾಘಿಸಿ ಅವರು ಮಾತನಾಡಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಕ್ರೀಡಾ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಲಾಪದಲ್ಲಿ ಅವರು ಕೊಡಗಿನ ಕ್ರೀಡಾ ಹಿರಿಮೆ ಪ್ರಸ್ತಾಪಿಸಿದ ನಂತರ ಅವರ ಆಸಕ್ತಿ ತಿಳಿದು ಸಂಪರ್ಕಿಸಿದಾಗ ಕ್ರೀಡಾ ಸಂಕೀರ್ಣ, ತರಬೇತಿ ಕೇಂದ್ರ ನಿರ್ಮಾಣಕ್ಕೆ ಅಜಯ್ ಮಕಾನ್ ಅವರ 6 ವರ್ಷದ ಎಲ್ಲಾ ಸಂಸದರ ನಿಧಿ ಅನುದಾನ ನೀಡುವ ಭರವಸೆ ನೀಡಿದ್ದರು.
ವಿ. ಬಾಡಗದ 11.5 ಎಕರೆ ಜಾಗವನ್ನು ಜಿಲ್ಲಾಡಳಿತದಿಂದ ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಿದೆ. ಈ ಕ್ರೀಡಾಂಗಣ ಜಿಲ್ಲೆಯ ಎಲ್ಲಾ ಬಗೆಯ ಕ್ರೀಡಾಪಟುಗಳ ಬಳಕೆಗೆ ಯೋಗ್ಯವಾಗುವಂತೆ ರೂಪಿಸುವ ನಿಟ್ಟಿನಲ್ಲಿ ನೀಲನಕಾಶೆ ಸಿದ್ಧಪಡಿಸಿಕೊಳ್ಳಲಾಗಿದೆ. ಹೊರಾಂಗಣ ಆಟಕ್ಕೆ ಅವಕಾಶ ಕೊಡುವುದರ ಜತೆಯಲ್ಲಿ ಒಳಾಂಗಣ ಆಟಗಳಿಗೂ ಸಮಾನ ಪ್ರಾಮುಖ್ಯತೆ ಕೊಟ್ಟು ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
ಕ್ರೀಡಾ ತರಬೇತಿ ಕೇಂದ್ರಕ್ಕೆ ಸುಮಾರು 40 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯಸಭಾ ಸದಸ್ಯರಿಂದ 25 ಕೋಟಿ ರೂ. ದೊರೆಯುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದಿಂದ 15 ಕೋಟಿ ರೂ. ಪಡೆಯುವ ಸಂಬAಧ ಪ್ರಯತ್ನ ನಡೆದಿದೆ. ಈ ವರ್ಷದ ಬಜೆಟ್‌ನಲ್ಲೂ ಈ ಯೋಜನೆ ಘೋಷಣೆಯಾಗುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊAಡAತೆ ಆದಲ್ಲಿ ಮುಖ್ಯಮಂತ್ರಿ ಆಹ್ವಾನಿಸಿ ಭೂಮಿಪೂಜೆ ನೆರವೇರಿಸುವ ಚಿಂತನೆಯೂ ಇದೆ ಎಂದು ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.
ವಿ.ಬಾಡಗ ಗ್ರಾಮದ 11.5 ಎಕರೆ ವಿಸ್ತೀರ್ಣದ ಕ್ರೀಡಾ ಸಂಕೀರ್ಣದಲ್ಲಿ ಅಥ್ಲೆಟಿಕ್ ಟ್ರಾö್ಯಕ್, ಹಾಕಿ ಟರ್ಫ್, ವಾಲಿಬಾಲ್, ಟೆನ್ನಿಸ್, ಒಲಿಂಪಿಕ್ ಅಳತೆಯ ಸ್ವಿಮ್ಮಿಂಗ್ ಪೂಲ್, ಶೂಟಿಂಗ್ ರೇಂಜ್ ಹೀಗೆ ವಿವಿಧ ಕ್ರೀಡೆಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತದೆ. ಹಾಕಿ ಆಟದ ರೀತಿಯಲ್ಲಿ ಕೊಡಗಿನಲ್ಲಿ ಇತ್ತೀಚೆಗೆ ಶೂಟಿಂಗ್ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಆದರೆ ಶೂಟಿಂಗ್ ಅಭ್ಯಾಸಕ್ಕೆ ಸಾರ್ವಜನಿಕ ಬಳಕೆಗೆ ಜಿಲ್ಲೆಯಲ್ಲಿ ಎಲ್ಲೂ ಕ್ರೀಡಾಂಗಣ ಇಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಬಿ. ಶೆಟ್ಟಿಗೇರಿ ಬಾಡಗ ಗ್ರಾಮದ ಉದ್ದೇಶಿತ ಕ್ರೀಡಾಂಗಣದಲ್ಲಿ ಶೂಟಿಂಗ್ ರೇಂಜ್ ನಿರ್ಮಣವೂ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದರ ಜತೆಗೆ ಬಿಲ್ಲುಗಾರಿಗೆ ಕ್ರೀಡೆಯ ಅಭ್ಯಾಸಕ್ಕೂ ಇಲ್ಲಿ ಅವಕಾಶ ಮಾಡಿಕೊಡುವ ಚಿಂತನೆ ಇದೆ.
"

ವಿ. ಬಾಡಗ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯರಿಂದ ಅನುದಾನ ದೊರೆಯುತ್ತದೆ. ವೈಯಕ್ತಿಕವಾಗಿ ಹಣ ನೀಡಿದ್ದೇನೆ. ಇಲ್ಲಿ ವಸತಿ ನಿಲಯ ನಿರ್ಮಿಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು 3 ವರ್ಷ ಸಮಯ ಬೇಕಾಗಿದೆ. ಹಂತಹAತವಾಗಿ ನಿರ್ಮಾಣ ಕಾರ್ಯ ನಡೆಯಲಿದೆ. ಮುಖ್ಯಮಂತ್ರಿ ಜತೆ ಈ ವಿಚಾರವಾಗಿ ಚರ್ಚಿಸಲಾಗಿದೆ. ಅನುದಾನ ನೀಡಲು ಬೇಡಿಕೆ ಸಲ್ಲಿಸಿದ್ದೇನೆ. ಕೇಂದ್ರದ ಸಹಾಯವನ್ನೂ ಪಡೆಯಲಾಗುವುದು. ಇದಕ್ಕೆ ಅಜಯ್ ಮಕಾನ್ ನೆರವು ನೀಡಲಿದ್ದಾರೆ.

"

ಕೊಡಗು ಕ್ರೀಡೆಯ ತವರೂರು. ವಿರಾಜಪೇಟೆ ಎ.ಎಸ್. ಪೊನ್ನಣ್ಣ ಪ್ರಯತ್ನದಿಂದ ವಿ. ಬಾಡಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಮತ್ತು ವಿವಿಧ ಕ್ರೀಡೆಗಳ ತರಬೇತಿ ಕೇಂದ್ರವನ್ನು ಮಾದರಿಯಾಗಿ ನಿರ್ಮಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ನೀಡಲಾಗಿದೆ. ಇಲ್ಲಿ ಕ್ರೀಡಾಸಂಕೀರ್ಣ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯ ಎಲ್ಲಾ ಬಗೆಯ ಕ್ರೀಡಾಪಟುಗಳ ಪ್ರತಿಭೆ ಬೆಳಕಿಗೆ ತರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.