ಕುಶಾಲನಗರಕ್ಕೆ ಆಗಮಿಸಿದ ದೇವಾಂಗ ಜ್ಯೋತಿ ಹೊತ್ತ ವಾಹನವನ್ನು ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಟಿ.ಕೆ. ಪಾಂಡುರAಗ, ಕೆ.ಕೆ. ನಾಗರಾಜಶೆಟ್ಟಿ, ಡಿ.ವಿ. ರಾಜೇಶ್, ಡಿ. ವಿಜಯೇಂದ್ರ, ಡಿ.ವಿ. ಚಂದ್ರು (ರಾಕಿ) ಮತ್ತಿತರರು ಇದ್ದರು. 
ಕೊಡಗು

ಕುಶಾಲನಗರದಲ್ಲಿ ದೇವಾಂಗ ಜ್ಯೋತಿಗೆ ಸ್ವಾಗತ

ಕುಶಾಲನಗರ:
ಬೆಳಗಲೆಮ್ಮ ದೇವಾಂಗ ತತ್ವಮತ ಎಂಬ ನಾಮಕಿಂತದೊAದಿಗೆ ದೇವಾಂಗ ಜ್ಯೋತಿ ಹೊತ್ತ ವಾಹನವನ್ನು ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ವತಿಯಿಂದ ಶನಿವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕುಶಾಲನಗರದ ರಥಬೀದಿಯಲ್ಲಿರುವ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ದೇವಾಂಗ ಜ್ಯೋತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನ ಆವರಣದಲ್ಲಿ ದೇವಾಂಗ ಜ್ಯೋತಿಯ ವಿಷಯದ ಬಗ್ಗೆ ಬನಶಂಕರಿ ಕ್ಷೇತ್ರದ ಪ್ರಮುಖರಾದ ಡಾ. ಯಲ್ಲಪ್ಪ ಸವಿಸ್ತಾರವಾದ ಮಾಹಿತಿ ಒದಗಿಸಿದರು.
ಅಖಿಲ ಭಾರತ ದೇವಾಂಗ (ನೇಕರ)ಜಾಗೃತ ಸಮಾವೇಶ 2026, ಶ್ರೀ ದಯಾನಂದಪುರಿ ಮಹಾ ಸ್ವಾವಿಗಳ 36ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ಜಗದ್ಗುರುಗಳ ತುಲಾಭಾರ ಸಮಾರಂಭ ಮೇ 9 ಮತ್ತು 10ರಂದು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕು ಬನಶಂಕರಿ ಕ್ಷೇತ್ರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಜ್ಯೋತಿ ಕೊಡಗಿಗೆ ಆಗಮಿಸಿದೆ.
ಈ ಸಂದರ್ಭ ಕೊಡಗು ಜಿಲ್ಲೆಯ ನೇಕಾರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ, ಕಾರ್ಯದರ್ಶಿ ಕೆ.ಕೆ. ನಾಗರಾಜಶೆಟ್ಟಿ, ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್, ಗೌರವಾಧ್ಯಕ್ಷ ಡಿ. ವಿಜಯೇಂದ್ರ, ಸಮಿತಿ ಪ್ರಮುಖರಾದ ಡಿ.ವಿ. ಚಂದ್ರು (ರಾಕಿ) ರಾಮಚಂದ್ರ, ಅರುಣ್, ಗಣೇಶ್, ಶಾರದಾ, ಗೀತಾ ಸೋಮಶೇಖರ್, ರೂಪ ಕುಮಾರ್, ಮಂಜಳಾ ಗೋಪಾಲ್, ಶೋಭಾ ಕನಕ ಹಾಗೂ ಸಮಿತಿ ಸದಸ್ಯರು ಇದ್ದರು.