ಗಾಳಿ ಮಳೆಗೆ ಸುಂಟಿಕೊಪ್ಪ ಜನತಾ ಕಾಲನಿಯಲ್ಲಿ ಮನೆ ಗೋಡೆ ಕುಸಿದಿರುವುದು.
ಸುಂಟಿಕೊಪ್ಪ: ಗಾಳಿ, ಮಳೆಗೆ ಪಟ್ಟಣದ ಜನತಾ ಕಾಲನಿಯಲ್ಲಿ ಮನೆ ಛಾವಣಿ ಹಾಗೂ ಗೋಡೆ ಕುಸಿದಿದ್ದು, ಎರಡು ವರ್ಷದ ಮಗು ಸೇರಿ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಕಾಲನಿ ನಿವಾಸಿ ಎಲಿಜಬೆತ್ ಅವರ ಮನೆ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಎಲಿಜಬೆತ್, ಪುತ್ರ ಜಾನ್ಸನ್, ಸೊಸೆ ಪ್ರೀತಿ ಹಾಗೂ ಎರಡು ವರ್ಷದ ಮಗು ಇತ್ತು. ಕುಸಿದಾಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಮನೆಗೆ ಉಪ ತಹಸೀಲ್ದಾರ್ ದೀಪಿಕಾ, ಗ್ರಾಮ ಆಡಳಿತಾಧಿಕಾರಿ ಉಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.