ಪೊನ್ನಂಪೇಟೆ ತಾಲೂಕು ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ಅಧ್ಯಕ್ಷರಾಗಿ ಅರಮಣಮಾಡ ಪಿ.ಗಣಪತಿ(ಸುಗುಣ) ಮತ್ತು ಉಪಾಧ್ಯಕ್ಷರಾಗಿ ಮುಕ್ಕಾಟೀರ ಜಾನಕಿ ಕಾವೇರಪ್ಪ (ಪಿ.ಜಿ ಜಾನಕಿ) ಅವಿರೋಧವಾಗಿ ಆಯ್ಕೆ ಆದರು. ಅಳಮೇಂಗಡ ಸುಬ್ಬಯ್ಯ(ಸುರೇಶ್), ಮಾಪಂಗಡ ಜಿ.ಅಯ್ಯಪ್ಪ(ಸಂಪತ್), ಕಾಯಮಾಡ ರಾಜ, ಬಾಚಮಾಡ ವಿಶು, ಮಂದೇಮಾಡ ಯು.ಗಣಪತಿ ಮತ್ತಿತರರು ಇದ್ದರು.
ಪೊನ್ನಂಪೇಟೆ ತಾಲೂಕು ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ಅಧ್ಯಕ್ಷರಾಗಿ ಅರಮಣಮಾಡ ಪಿ.ಗಣಪತಿ(ಸುಗುಣ) ಮತ್ತು ಉಪಾಧ್ಯಕ್ಷರಾಗಿ ಮುಕ್ಕಾಟೀರ ಜಾನಕಿ ಕಾವೇರಪ್ಪ (ಪಿ.ಜಿ ಜಾನಕಿ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಸ್ಥೆಯ 2025-2030ರ ಅವಧಿಗೆ ಬುಧವಾರ ನಡೆದ ಆಡಳಿತಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.
ಆಡಳಿತ ಮಂಡಳಿ ನಿರ್ದೇಶಕರಾದ ಅಳಮೇಂಗಡ ಸುಬ್ಬಯ್ಯ(ಸುರೇಶ್), ಮಾಪಂಗಡ ಜಿ.ಅಯ್ಯಪ್ಪ(ಸಂಪತ್), ಕಾಯಮಾಡ ರಾಜ, ಬಾಚಮಾಡ ವಿಶು, ಮಂದೇಮಾಡ ಯು.ಗಣಪತಿ (ಬೋಸ್), ಅಡ್ಡೇಂಗಡ ಕೆ.ಕಾವೇರಮ್ಮ, ಕಾಡ್ಯಮಾಡ ಆರ್.ಸುಬ್ಬಯ್ಯ, ಹೆಚ್.ಜಿ ವಿಜಯ, ಎ.ಕೆ ದೇವರಾಜು , ಕೆ.ಡಿ.ಸಿ.ಸಿ ಬ್ಯಾಂಕ್ ನಾಮನಿರ್ದೇಶಕ ಗುಮ್ಮಟೀರ ಕಿಲನ್ ಗಣಪತಿ, ಪ್ರಮುಖರಾದ ಪೋಡಮಾಡ ಸುಕೇಶ್ ಭೀಮಯ್ಯ, ಮುಕ್ಕಾಟೀರ ವಾಸು ಕಾವೇರಪ್ಪ, ಅಡ್ಡೇಂಗಡ ಅಜಯ್ ಕುಶಾಲಪ್ಪ, ಕೊಕ್ಕಲೆಮಾಡ ನಾಣಯ್ಯ ಮತ್ತಿತರರು ಈ ಸಂದರ್ಭ ಇದ್ದರು.