ಸೋಮವಾರಪೇಟೆ ತಾಲೂಕು ಐಗೂರು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಧ್ವನಿ ವರ್ಧಕವನ್ನು ಹಸ್ತಾಂತರಿಸಲಾಯಿತು. ಕೀರ್ತಿ, ರಾಯ್, ಮನೋಜ್ ಇದ್ದರು. 
ಕೊಡಗು

ಐಗೂರು ಕಸಾಪಗೆ ಧ್ವನಿ ವರ್ಧಕ ಕೊಡುಗೆ

ಸೋಮವಾರಪೇಟೆ:

ತಾಲೂಕಿನ ಐಗೂರು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿಯಿಂದ ಧ್ವನಿ ವರ್ಧಕವನ್ನು ಕೊಡುಗೆ ನೀಡಲಾಯಿತು.

ಇತ್ತೀಚೆಗೆ ಕಾಜೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನ ಸಂದರ್ಭ ಸಾರ್ವಜನಿಕರಿಂದ ಸಂಗ್ರಹಿಸಲಾದ ದೇಣಿಗೆಯಲ್ಲಿ ಉಳಿದ 15,500 ರೂ.ಹಣದಲ್ಲಿ ಪರಿಷತ್ತಿಗೆ ಧ್ವನಿ ವರ್ಧಕ ನೀಡಲಾಯಿತು.
ಐಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಗೌರವ ಕಾರ್ಯದರ್ಶಿ ಎಂ.ಟಿ.ಸರಳಕುಮಾರಿ, 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಕೆ.ಪಿ.ರಾಯ್, ಸಂಚಾಲಕ ಮನೋಜ್ ಮುತ್ತಪ್ಪ, ಕಾರ್ಯದರ್ಶಿ ಡಿ.ಡಿ.ಬೆಳ್ಳಿಯಪ್ಪ, ಸ್ಮರಣ ಸಂಚಿಕೆ ಸಮಿತಿ ಸಂಪಾದಕ ಎಸ್.ಎಂ.ಚಂಗಪ್ಪ ಇದ್ದರು.