ವಿರಾಜಪೇಟೆಯಲ್ಲಿ ಆಯೋಜಿಸಿದ್ದ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಮಹಮ್ಮದ್ ರಾಫಿ ಮಾತನಾಡಿದರು. ಇಸ್ಮಾಯಿಲ್, ನಾಯಜ್, ವಿಶಾಲಾಕ್ಷಿ, ಶ್ರೇಯಸ್ ಭಟ್, ಸಾದಿಕ್ ಹಂಸ ಇದ್ದರು. 
ಕೊಡಗು

ಮಕ್ಕಳ ಪ್ರತಿಭೆ ಗುರುತಿಸುವುದು ಪಾಲಕರ ಕರ್ತವ್ಯ

ಲಲಾಟಾಕ್ಷ ಎಸ್
ವಿರಾಜಪೇಟೆ: ಮಕ್ಕಳಲ್ಲಿ ಬಹುಮುಖ ಪ್ರತಿಭೆಗಳು ಹುದುಗಿರುತ್ತದೆ. ಪ್ರತಿಭೆ ಗುರುತಿಸುವುದು ಪಾಲಕರ ಕರ್ತವ್ಯ ಎಂದು ಪುರಸಭೆ ಮಾಜಿ ಸದಸ್ಯ ಮೊಹಮ್ಮದ್ ರಾಫಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾದಿಕ್ ಆರ್ಟ್ಸ್ ಲಿಂಕ್ ಸಹಯೋಗದಲ್ಲಿ ಪುರಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲೆಗಳನ್ನು ಗುರುತಿಸಬೇಕು. ಪಾಲಕರು ಮಕ್ಕಳಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ ವೇದಿಕೆಗಳಿಗೆ ಕರೆತರಬೇಕು. ಇದರಿಂದ ಪ್ರತಿಭೆಗಳನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಕಲಾವಿದ ಶ್ರೇಯಸ್ ಭಟ್ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸದಿದ್ದರೆ ಚಿಗುರಿನಲ್ಲೇ ಕೊನೆಯಾಗುತ್ತದೆ. ಗುರುತಿಸಿದಲ್ಲಿ ಮಾತ್ರ ಪ್ರತಿಭೆ ಅನಾವರಣವಾಗಲು ಸಾಧ್ಯ ಎಂದರು.
ಉದ್ಯಮಿ ಇಸ್ಮಾಯಿಲ್. ಪಿ.ಕೆ.ನಾಯಜ್, ವಿಶಾಲಾಕ್ಷಿ, ಕಲಾ ಉತ್ಸವ ಆಯೋಜಕ ಸಾದಿಕ್ ಹಂಸ ಇದ್ದರು. ನಾಟ್ಯ ಮಯೂರಿ ನೃತ್ಯ ಶಾಲೆ, ಇಂಟೋಪಿಯಸ್ ನೃತ್ಯ ಶಾಲೆ, ವಿವಿಧ ಶಾಲೆಗಳು ಮತ್ತು ಕಾಲೇಜು ವಿಧ್ಯಾರ್ಥಿಗಳಿಂದ ಭರತ ನಾಟ್ಯ, ಜನಪದ ಗೀತೆ ಗಾಯನ, ಗುಂಪು ನೃತ್ಯ, ಜನಪದ ನೃತ್ಯ ನಡೆದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ನೀಡಲಾಯಿತು.