ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಟ ನಡೆಸಲು ಯತ್ನಿಸಿದ್ದ ಲಾರಿಯಲ್ಲಿದ್ದ ದನ ಕರುಗಳು.
- ಅಕ್ರಮವಾಗಿ ಕೇರಳ ರಾಜ್ಯದ ಖಾಸಾಯಿಕಾನೆಗೆ ಸಾಗಾಟ
- ವಿರಾಜಪೇಟೆ, ಅಕ್ರಮವಾಗಿ ಕೇರಳ ರಾಜ್ಯದ ಖಾಸಾಯಿಕಾನೆಗೆ ಸಾಗಾಟ, ಜಾನುವಾರುಗಳ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
ವಿರಾಜಪೇಟೆ : ಗೋವುಗಳನ್ನು ಸಾಕಣೆಗಾಗಿ ಖರೀದಿಸಿ ಅಕ್ರಮವಾಗಿ ಕೇರಳ ರಾಜ್ಯದ ಖಾಸಾಯಿಕಾನೆಗೆ ಸಾಗಾಟ ಮಾಡಲು ಯತ್ನಿಸಿದ್ದ ಇಬ್ಬರನ್ನು ಶನಿವಾರ ವಿರಾಜಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಇರ‌್ಕೂರು ತಳಿಪರಂಬಾ ನಿವಾಸಿಗಳಾದ ಪಿ.ಪಿ.ಸಾಧಿಕ್(38) ಮತ್ತು ಅಬ್ದುಲ್ ಅಹಮ್ಮದ್ ತಂಙಳ್(34)ಬಂದಿತ ಆರೋಪಿಗಳು.
ಬಂಧಿತರು ತಳಿಪರಂಬಾದಿಂದ ಬಂದು ಮೈಸೂರು ಜಿಲ್ಲೆಯ ಪಿರಿಯಪಟ್ಟಣ ತಾಲೂಕಿನ ವಿವಿಧೆಡೆ ದನ ಕರುಗಳನ್ನು ಖರೀದಿಸಿ ಶುಕ್ರವಾರ ರಾತ್ರಿ 12.10 ಗಂಟೆಗೆ ರಾಸುಗಳನ್ನು ತುಂಬಿಸಿಕೊಂಡು ಅನುಮಾನ ಬರದಂತೆ ಆಲೂಗಡ್ಡೆ ಮೂಟೆಗಳನ್ನು ತುಂಬಿಸಿದ್ದರು. ಗೋವುಗಳನ್ನು ತುಂಬಿಸಿದ್ದ ಲಾರಿ ಹೊರಡುತ್ತಿದ್ದ ವಿಷಯ ತಿಳಿದ ಗೋರಕ್ಷಕರು ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಕಾಯುತಿದ್ದರು. ಶನಿವಾರ ಮುಂಜಾನೆ ಲಾರಿ ತಪಾಸಣೆ ಕೇಂದ್ರದ ಬಳಿ ಬರುತ್ತಿದ್ದಂತೆ ಲಾರಿ ಪರಿಶೀಲಿಸಿದ್ದಾರೆ. ಈ ವೇಳೆ 10ಕ್ಕು ಹೆಚ್ಚು ಗೋವುಗಳು ಪತ್ತೆಯಾಗಿವೆ. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನು ವಶಕ್ಕೆ ಪಡೆದು ಪಿಂಜರಾಪೋಲ್‌ಗೆ ರವಾನೆ ಮಾಡಿದರು. ಜಾನುವರುಗಳ ರಕ್ಷಣೆ ಸಂಧರ್ಭಲ್ಲಿ ಗೋರಕ್ಷಕರಾದ ರಾಜೇಶ್, ಧನು ವಿವೇಕ್ ರೈ, ಕಿಶೋರ್ ಕುಮಾರ್ ಹಾಜರಿದ್ದರು.