ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಜರುಗಿದ ಮಕ್ಕಳ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಚಟುವಟಿಕೆ ನಡೆಸುತ್ತಿರುವ ಶಿಬಿರಾಧಿಕಾರಿ. 
ಕೊಡಗು

ಮಕ್ಕಳ ಪ್ರತಿಭೆಗೆ ಹೊಸ ವೇದಿಕೆ ಕಲ್ಪಿಸಿದ ಬೇಸಿಗೆ ಶಿಬಿರ

ವಿರಾಜಪೇಟೆ : ವಿರಾಜಪೇಟೆ ಸಮೀಪದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಸ್ಲಾೃಶ್ ಆ್ಯಂಡ್ ಸ್ಪಾರ್ಕ್ 2026 ಎಂಬ ಧ್ಯೇಯವಾಕ್ಯದಡಿಯಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ನಾಲ್ಕು ವಾರಗಳ ಕಾಲ ಜರುಗಿದ ಈ ಶಿಬಿರಕ್ಕೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಪೂಜಾ ಸಜೇಶ್ ಚಾಲನೆ ನೀಡಿದ್ದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸೃಜನಾತ್ಮಕ ಕಲಿಕೆಯ ಜತೆಗೆ ಮನರಂಜನೆಯನ್ನು ಒದಗಿಸಲಾಯಿತು. ಕಲೆ, ಕ್ರೀಡೆ ಹಾಗೂ ವಿಜ್ಞಾನದ ಕುರಿತಾದ ಚಟುವಟಿಕೆ ಕುರಿತು ಪರಿಚಯಿಸಲಾಯಿತು. ಮಕ್ಕಳಿಗೆ ಕಾರ್ಡ್ ಬೋರ್ಡ್ ಕ್ರಿಯೇಷನ್, ಡೂಡಲ್ ಆರ್ಟ್, ಸ್ಕ್ರಿಬಲ್ ಆರ್ಟ್, ಬಾಟಲ್ ಪೇಂಟಿಂಗ್, ಅಡುಗೆ ತಯಾರಿಸುವ ವಿಧಾನಗಳು, ಪರಿಸರ ವಿಜ್ಞಾನ, ಆಡಿಯೋ ವಿಜುವಲ್ ಕಮ್ಯುನಿಕೇಷನ್, ರೊಬಾಟಿಕ್ಸ್ ಮುಂತಾದ ವಿಷಯದ ಕುರಿತು ತರಬೇತಿಯನ್ನು ನೀಡಲಾಯಿತು.
ಮಕ್ಕಳು ತಮ್ಮ ಕೈ ಚಳಕದಿಂದ ಅನೇಕ ಸುಂದರ ಕಲಾಕೃತಿಗಳನ್ನು ತಯಾರಿಸಿ ಪ್ರತಿಭೆ ಪ್ರದರ್ಶಿಸಿದರು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿ ಪರಸ್ಪರ ಸ್ನೇಹ, ಸಹಕಾರ ಹಾಗೂ ತಂಡದ ನಾಯಕತ್ವದ ಮನೋಭಾವವನ್ನು ಬೆಳೆಸಿಕೊಂಡರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥೆ ಪೂಜಾ ಸಜೇಶ್, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಸೃಜನಾತ್ಮಕ ಕಲಿಕೆಗೆ ಇಂತಹ ಶಿಬಿರಗಳು ಉಪಯುಕ್ತವಾಗಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದಲ್ಲದೆ ಜ್ಞಾನ ಹಾಗೂ ಜೀವನ ಕೌಶಲವನ್ನು ಕಲಿಸುತ್ತವೆ. ಪಾಲಕರು ಮಕ್ಕಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಲ್ಲಿ ಅವರ ಕಲಿಕೆಯು ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು.
ಶಾಲಾ ಕಾರ್ಯದರ್ಶಿ ಪ್ರತಿಮಾ, ಮುಖ್ಯ ಶಿಕ್ಷಕರಾದ ಮೀರಾ ಪೂಣಚ್ಚ, ಕ್ಯಾಂಪಸ್ ನಿರ್ವಹಣೆಗಾರ ರಿಚರ್ಡ್, ತರಬೇತುದಾರರು ಹಾಗೂ ಅಮ್ಮತ್ತಿ ಯ ಲೈಟ್ ಜೂಮ್ ಆಡ್ಸ್‌ನ ಸ್ಥಾಪಕರಾದ ಥೌಸೀಫ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.