ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿರಾಜಪೇಟೆ ತಾಲೂಕು ಘಟಕಗಳ ಪದಗ್ರಹಣ ಸಮಾರಂಭ ನಡೆಯಿತು. ರೆ.ಫಾ. ಮರಿಯರಾಜ್ ಜಾರ್ಜ್ , ಜಾನ್ಸನ್ ಪಿಂಟೋ , ಅಂತೋಣಿ ಡಿ.ಸೋಜಾ, ಜೋಕಿಂ ರೋಡ್ರಿಗ್ರಸ್ಸ್, ಮರ್ವಿನ್ ಲೋಬೋ, ಜ್ಯೂಡಿವಾಜ್ ,  
ಕೊಡಗು

ಸಮುದಾಯಗಳು ಸಂಘಟಿತರಾಗಲು ಸಂಘಟನೆ ಮುಖ್ಯ:

ಎ. ಆರ್. ರಘುರಾಮ
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ತಾಲೂಕು ಘಟಕ ಪದಗ್ರಹಣ ಸಮಾರಂಭದಲ್ಲಿ ಹೇಳಿಕೆ:
ವಿರಾಜಪೇಟೆ : : ಸಮುದಾಯ ಬಾಂದವರು ಆಯೋಜಿಸುವ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ರೀತಿಯಲ್ಲಿ ಸಂಘಟಿತರಾಗುತ್ತೇವೆ ಅಲ್ಲದೆ ಉತ್ತಮ ಬಾಂಧವ್ಯ ವೃದ್ದಿಯಾಗುತ್ತದೆ ಎಂದು ಪಾಲಿಬೆಟ್ಟ ಲೂರ್ದು ಮಾತೆ ದೇವಾಲಯದ ಪ್ರಧಾನ ಧರ್ಮಗುರು ಫಾ. ಮರಿಯರಾಜ್ ಜಾರ್ಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನ ಸಭಾಂಗಣದಲ್ಲಿ ತಾಲೂಕು ಘಟಕಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಗುರುಗಳು ಸಂಘಟನೆಯಲ್ಲಿ ಬೇದಭಾವ ಇಲ್ಲದೆ ಹಿರಿಯ ಕಿರಿಯ, ಬಡವಬಲ್ಲಿದ ಎನ್ನದೆ ಸಮಾನವಾಗಿ ಕಾಣುವ ವೇದಿಕೆ ಸೃಷ್ಟಿಯಾಗುತ್ತದೆ. ಸಮುದಾಯಕ್ಕೆ ಸಂಘಟನೆಯೊಂದು ಮುಖ್ಯ. ಕ್ರೈಸ್ತ ಬಾಂಧವರು ಸಂಘಟಿತರಾಗಿ ಮುಂದಾದಲ್ಲಿ ನಮಗೆ ಬೇಕಾದುದನ್ನು ಪಡೆಯಬಹುದಾಗಿದೆ. ತಾಲೂಕು ಘಟಕಗಳ ಪಧಾಧಿಕಾರಿಗಳು ಮತ್ತು ಸದಸ್ಯರು ತಮ್ಮ ಕರ್ತವ್ಯಗಳನ್ನು ಚಾಚುತಪ್ಪದೆ ನಿರ್ವಹಿಸಿ, ಪಾರದರ್ಶಕ ವಸ್ತುನಿಷ್ಟೆಯೊಂದಿಗೆ ಸಂಘಟನೆ ಬೆಳಸಿ ಎಂದು ಹೇಳಿ ಶುಭಹಾರೈಸಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ಕಾರ್ಯಧ್ಯಕ್ಷರಾದ ಲಾರೇನ್ಸ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕು ಘಟಕಗಳ ಪದಗ್ರಹಣ ಸಮಾರಂಭ ನಡೆದು ಪೊನ್ನಂಪೇಟೆ ತಾಲೂಕು ಘಟಕದ ಅದ್ಯಕ್ಷರಾಗಿ ಸುಭಾಷ್ ಮ್ಯಾಥ್ಯೂ ಪ್ರಧಾನ ಕಾರ್ಯಧರ್ಶಿಯಾಗಿ ತೆರೆಸಾ ವಿಕ್ಟರ್ ಆಯ್ಕೆಯಾಗಿದ್ದಾರೆ.ವಿರಾಜಪೇಟೆ ತಾಲೂಕು ಘಟಕದ ಅದ್ಯಕ್ಷರಾಗಿ ಆಗಸ್ಟಿನ್ ಕ್ಸೆವಿಯರ್, ಪ್ರಧಾನ ಕಾರ್ಯದರ್ಶಿಯಾಗಿ ಬ್ಲೇಜ್ಹಿ ಸಿಕ್ವೇರ ಅವರುಗಳು ಆಯ್ಕೆಯಾದರು. ನಂತರ ಇವರೊಂದಿಗೆ ಪದಾಧಿಕಾರಿಗಳು ಹಾಗೂ ಆಯ್ಕೆಯಾದ ಸದಸ್ಯರಿಗೆ
ಪ್ರಮಾಣ ಪತ್ರ ವಿತರಿಸಲಾಯಿತು.
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಜಾನ್ಸನ್ ಪಿಂಟೋ ಅವರು ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯ ಬಲವರ್ಧನೆಗಾಗಿ ತಾಲೂಕು ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಮುಂದೆ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳು ಸಮೂದಾಯದ ಎಳಿಗೆ ಹಾಗೂ ಸಂಘಟನೆಗಳ ಉತ್ತಮವಾಗಿ ಕಾರ್ಯನಿರ್ವಹಿಸಲು ಸಮುಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಅಲ್ಲದೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವಂತಾಗಬೇಕು. ಅಯ್ಕೆಗೊಂಡ ತಾಲೂಕು ಘಟಕಗಳ ಪದಾಧಿಕಾರಿಗಳಿಗೆ ಶುಭಹಾರೈಸಿದರು.ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯಧರ್ಶಿಗಳಾದ ಅಂತೋಣಿ ಡಿ.ಸೋಜಾ, ಉಪದ್ಯಕ್ಷರಾದ ಜೋಕಿಂ ರೋಡ್ರಿಗ್ರಸ್ಸ್, ಜಿಲ್ಲಾ ಸಂಘಟನಾ ಕಾರ್ಯಧರ್ಶಿಗಳಾದ ಮರ್ವಿನ್ ಲೋಬೋ, ಜಿಲ್ಲಾ ಸಂಚಾಲಕ ಜ್ಯೂಡಿವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.