ಮಾಲ್ದಾರೆ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಗ್ರಾಮಸಭೆಯಲ್ಲಿ ಬೆರಳೆಣಿಕೆಯಷ್ಟು ಸಾರ್ವಜನಿಕರು ಪಾಲ್ಗೊಂಡಿದ್ದರು. 
ಕೊಡಗು

ಸಮಸ್ಯೆಗಳತ್ತ ಗಮನ ಸೆಳೆದ ಗ್ರಾಮಸ್ಥರು

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ವೈದ್ಯರ ಕೊರತೆ ಬಗ್ಗೆ ಸಭೆಯ ಗಮನ ಸೆಳೆದ ಗ್ರಾಮಸ್ಥರು
ಸಿದ್ದಾಪುರ:ಮಾಲ್ದಾರೆ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಗ್ರಾಮಸಭೆ ಶನಿವಾರ ರಂದು ಗ್ರಾಪಂ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಯಲ್ಲಿ ಗ್ರಾಮಿಣ ಭಾಗದ ರಸ್ತೆ, ಕುಡಿಯುವ ನೀರು, ಆಟದ ಮೈದಾನ, ಸ್ವಚ್ಛತೆ, ಬಸ್ ಸಂಚಾರ, ಕಾಡುಪ್ರಾಣಿಗಳ ಹಾವಳಿ, ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು. ಈ ಸಂದರ್ಭ ಆಹಾರ, ಪೊಲೀಸ್, ಅರಣ್ಯ, ಪಶು, ಕೃಷಿ, ಶಿಕ್ಷಣ, ಸೆಸ್ಕ್, ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳು ಇಲಾಖೆಗಳಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಸಭೆಯಲ್ಲಿ ಗ್ರಾಮದಲ್ಲಿ ಬೆಳೆಗಾರು ಹಾಗೂ ಹೆಚ್ಚು ಕಾರ್ಮಿಕರು ಇದ್ದು ಶನಿವಾರವಾಗಿರುವುದರಿದ ಬೆರಳೆಣಿಕೆಯಷ್ಟು ಜನರು ಮಾತ್ರ ಬಂದಿದ್ದರು ಹಾಗೂ ಕೆಲವು ಅಧಿಕಾರಿಗಳ ಗೈರು ಹಾಜರಾತಿ ಸಹ ಸಭೆಯಲ್ಲಿ ಕಂಡುಬಂತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಉಪಾಧ್ಯಕ್ಷ ಕುಂಞಣ್ಣ, ಸದಸ್ಯರಾದ, ಸಮೀರ್, ನಿಯಾಜ್, ಚಂದ್ರ, ಸರಸ್ವತಿ, ಶೋಭಾ, ಇಸ್ಮಾಯಿಲ್, ಮೊಹಮ್ಮದ್ ಅಲಿ, ಹನೀಫ, ಸಾರ್ವಜನಿಕರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.