ಗುಮ್ಮನಕೊಲ್ಲಿ ಗ್ರಾಮದ ಗ್ರಾಮದೇವತೆ ಶ್ರೀ ಮಾರಮ್ಮ ಹಾಗೂ ಹುಚ್ಚಮ್ಮ ದೇವತಾ ಮೂರ್ತಿಗಳ ವಾರ್ಷಿಕ ಪೂಜೋತ್ಸವ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. 
ಕೊಡಗು

ಗ್ರಾಮದೇವತೆ ಶ್ರೀ ಮಾರಮ್ಮ, ಹುಚ್ಚಮ್ಮ ದೇವತಾ ಉತ್ಸವ

ಮಡಿಕೇರಿ:
ಕುಶಾಲನಗರ ತಾಲೂಕು ಗುಮ್ಮನಕೊಲ್ಲಿ ಗ್ರಾಮದ ಗ್ರಾಮದೇವತೆ ಶ್ರೀ ಮಾರಮ್ಮ ಹಾಗೂ ಹುಚ್ಚಮ್ಮ ದೇವತಾ ಮೂರ್ತಿಗಳ ವಾರ್ಷಿಕ ಪೂಜೋತ್ಸವ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು. ಗುರುವಾರ ಬೆಳಗ್ಗೆ ನವಕ ಪ್ರಧಾನ ಕಲಶ ಸ್ಥಾಪನೆ, ಬಳಿಕ ಕಲಾತತ್ವಾದಿ ವಾಸ ಹೋಮ, ಪೂರ್ಣಾಹುತಿ, ಶಿಖರಾಭಿಷೇಕ ಮಹಾಮಂಗಳಾರತಿ ನೆರವೇರಿತು.
ಬಳಿಕ ಶುಕ್ರವಾರ ಬೆಳಗ್ಗೆ ಹರಕೆ ಹೊತ್ತ ಭಕ್ತಾಧಿಗಳಿಂದ ದೇವತೆಗೆ ಬಲಿಪೂಜೆ ನೆರವೇರಿತು. ಗ್ರಾಮದೇವತೆ ಹಬ್ವದ ಅಂಗವಾಗಿ ಇಡೀ ಗ್ರಾಮದ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ದೇವಾಲಯದ ಆವರಣವನ್ನು ತಳಿರು ತೋರಣ ಹಾಗೂ ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು.
ಮಧ್ಯಾಹ್ನದ ಮಹಾಮಂಗಳಾರತಿ ಬಳಿಕ ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಮುಳ್ಳುಸೋಗೆಯ ಶಿವಣ್ಣ ಪೂಜಾ ವಿಧಿ ನಡೆಸಿಕೊಟ್ಟರು.
ದೇವಾಲಯ ಸಮಿತಿ ಗೌರವ ಅಧ್ಯಕ್ಷ ಬಿ.ಜಿ. ರವಿಕುಮಾರ್, ಅಧ್ಯಕ್ಷ ವಿಶ್ವನಾಥ, ಕಾರ್ಯದರ್ಶಿ ದಂಡಿನ ನವೀನ, ಉಪಾಧ್ಯಕ್ಷ ಜಯರಾಜ್, ಖಜಾಂಚಿ ಜಿ.ಜೆ. ಗಣಪತಿ, ಪದಾಧಿಕಾರಿಗಳಾದ ಎಂ.ಆರ್. ಗಣೇಶ, ಲೋಕೇಶ್, ಮಂಜುನಾಥ್, ಜಿ.ಟಿ. ಮಹೇಶ್, ಭರತ್, ಸೋಮಣ್ಣ, ನಿಂಗರಾಜು, ಹೆಚ್.ಜಿ.ಮಂಜುನಾಥ್, ಮಹೇಶ್, ಜಿ.ಸಿ. ರವಿಕುಮಾರ್ ಮೊದಲಾದವರು ಇದ್ದರು.