ಹಿರಿಕರ ರವಿ 
ಕೊಡಗು

ವಿಜಯವಾಣಿಗೆ 2 ಪ್ರಶಸ್ತಿ

ಮಡಿಕೇರಿ:
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು ವಿಜಯವಾಣಿಯ ಸೋಮವಾರಪೇಟೆ ವರದಿಗಾರ ಹಿರಿಕರ ರವಿ 2 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಪಂದ್ಯAಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ಹಿರಿಕರ ರವಿ ಅವರ ಸೌಕರ್ಯವಿಲ್ಲದ ಮಲ್ಲಳ್ಳಿ ಗ್ರಾಮ ಅನಾಥ ಎನ್ನುವ ವಿಶೇಷ ವರದಿ ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ಮುತ್ತಜ್ಜಿ ಸಾಕಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಕಾಫಿಗೆ ಸಂಬAಧಿಸಿದ ಅತ್ಯುತ್ತಮ ವರದಿ ಪ್ರಶಸ್ತಿಗೆ ಕಾಫಿ ಬೆಳೆಗೆ ಬರ‍್ರಿ ಬೋರರ್ ಹುಳು ಕಾಟ ಎನ್ನುವ ವರದಿಗಳು ಆಯ್ಕೆ ಆಗಿವೆ.
ಉಳಿದಂತೆ ಪತ್ರಕರ್ತರಾದ ಉದಿಯಂಡ ಜಯಂತಿ ಮಂದಣ್ಣ, ನವೀನ್ ಸುವರ್ಣ, ಜಗದೀಶ್ ಜೋಡುಬೀಟಿ, ಎ.ಎನ್. ವಾಸು, ಅಣ್ಣೀರ ಹರೀಶ್ ಮಾದಪ್ಪ, ವಿಘ್ನೇಶ್ ಭೂತನಕಾಡು, ಲಕ್ಷಿö್ಮಕಾಂತ್ ಕೊಮಾರಪ್ಪ, ಹೆಚ್.ಕೆ. ಜಗದೀಶ್, ಐಮಂಡ ಗೋಪಾಲ್ ಸೋಮಯ್ಯ, ಸ್ಟಾö್ಯನ್ಲಿ ಡೇವಿಡ್, ಸಂತೋಷ್ ರೈ, ಹೆಚ್.ಕೆ. ಜಗದೀಶ್, ಶಶಿಕುಮಾರ್ ರೈ, ಕಾಯಪಂಡ ಶಶಿ ಸೋಮಯ್ಯ, ಆರ್. ಸುಬ್ರಮಣಿ, ಮಲ್ಲಿಕಾರ್ಜುನ್, ಇಸ್ಮಾಯಿಲ್ ಕಂಡಕರೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ಜೂನ್ 14 ರಂದು ಸಂಘದ ವಾರ್ಷಿಕ ಮಹಾಸಭೆಯಂದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.