ಪೊನ್ನಂಪೇಟೆ ತಾಲೂಕು ಬಾಳಲೆ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಾಹನ ಮಾಲೀಕರು, ಚಾಲಕರು ಹಾಗೂ ಆಟೋ ಮಾಲೀಕರ ಸಂಘವನ್ನು ಗಣ್ಯರು ಉದ್ಘಾಟಿಸಿದರು. ಅಳಮೆಂಗಡ ಬೋಸ್ ಮಂದಣ್ಣ, ಚಿಮ್ಮಣಮಾಡ ಕೃಷ್ಣ ಗಣಪತಿ, ಮುಕ್ಕಾಟೀರ ಜಾನಕಿ ಕಾವೇರಪ್ಪ, ನೆಲ್ಲಿರ ಚಲನ್, ಪೋಡಮಾಡ ಬಿ. ಸುಕೇಶ್ ಭೀಮಯ್ಯ, ಅದೇಂಗಡ ಎಂ. ವಿನು ಉತ್ತಪ್ಪ ಮತ್ತಿತರರು ಇದ್ದರು.
ಪೊನ್ನಂಪೇಟೆ ತಾಲೂಕು ಬಾಳಲೆ ಗ್ರಾಮದಲ್ಲಿ ವಾಹನ ಮಾಲೀಕರು, ಚಾಲಕರು ಹಾಗೂ ಆಟೋ ಮಾಲೀಕರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಹೊಸದಾಗಿ ರಚನೆಯಾದ ಸಂಘವನ್ನು ಶುಕ್ರವಾರ ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಸಭೆ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಯಾವುದೇ ವೃತ್ತಿ ಮಾಡುವುದಾದರೂ ವೃತ್ತಿಯ ಬಗ್ಗೆ ಹೆಮ್ಮೆ, ದಕ್ಷತೆ, ಪ್ರಾಮಾಣಿಕತೆ ಹೊಂದಿರಬೇಕು. ಆಟೋ ಚಾಲಕರು ಹಾಗೂ ಮಾಲೀಕರಿಗೆ ಯಾವುದೇ ರೀತಿಯ ತೊಂದರೆಯಾದರೆ ಸ್ಪಂದಿಸಲು ಸಂಘಟನೆಗಳ ಅವಶ್ಯಕತೆ ಇದೆ. ವಿಕಸಿತ ಭಾರತ ಅಭಿವೃದ್ಧಿ ಹೊಂದಿದ ಭಾರತವಾಗಿ ಮಾರ್ಪಾಡು ಮಾಡಲು ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪುಗೊಳಿಸಿದೆ. ಸಂಸ್ಥೆಗಳು ಕಾರ್ಮಿಕರ ನೋಂದಾವಣೆ ಮಾಡಿಕೊಂಡು ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು. ಸಂಘಟನೆಗಳು ಒಟ್ಟಾಗಿ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಾಗ ಅದು ಈಡೇರುವ ಸಾಧ್ಯತೆ ಹೆಚ್ಚಿರುತ್ತದೆ. ಕನ್ನಡದ ಹೆಸರಿನಲ್ಲಿ ಕನ್ನಡಾಂಬೆಯ ಆಶೀರ್ವಾದದಿಂದ ಆರಂಭಗೊAಡಿರುವ ಈ ಸಂಘಟನೆಯು ಹೆಸರಿಗೆ ತಕ್ಕಂತೆ ಪೂರಕವಾಗಿ ನಡೆದುಕೊಂಡು ಪ್ರಗತಿ ಸಾಧಿಸುವಂತಾಗಬೇಕೆAದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಳಲೆ ಸೆಂಟರ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಅಳಮೆಂಗಡ ಬೋಸ್ ಮಂದಣ್ಣ ಮಾತನಾಡಿ, ಚಾಲಕರು ಸಮಯ ಪ್ರಜ್ಞೆ ಹೊಂದಿರಬೇಕು. ತುರ್ತು ಸಂದರ್ಭದಲ್ಲಿ ಗ್ರಾಹಕರು ಕರೆ ಮಾಡಿದಾಗ ತಲುಪಲು ಸಾಧ್ಯವಿಲ್ಲದಿದ್ದಲ್ಲಿ ನೇರವಾಗಿ ವಿಚಾರ ತಿಳಿಸಬೇಕು. ಪ್ರತಿಯೊಬ್ಬ ವಾಹನ ಚಾಲಕರು ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರಬೇಕು. ವಾಹನ ಚಾಲಕರು ಗ್ರಾಹಕರೊಂದಿಗೆ ಸ್ನೇಹ ಸಂಬAಧ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬಾಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಮುಕ್ಕಾಟೀರ ಜಾನಕಿ ಕಾವೇರಪ್ಪ, ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ನೆಲ್ಲಿರ ಚಲನ್, ಬಾಳಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪೋಡಮಾಡ ಬಿ. ಸುಕೇಶ್ ಭೀಮಯ್ಯ, ಅದೇಂಗಡ ಎಂ. ವಿನು ಉತ್ತಪ್ಪ, ಚೆಕ್ಕೇರ ಸೂರ್ಯ ಅಯ್ಯಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ ಅದೇಂಗಡ ವಿನು ಚಂಗಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಬಾಳಲೆ ಎಪಿಸಿಎಂಎಸ್ ಅಧ್ಯಕ್ಷ ಅರಮಣಮಾಡ ಸಿ. ಸುಗುಣ ಗಣಪತಿ, ಬಾಳಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕೊಕ್ಕೆಂಗಡ ಸ್ಮಿತಾ ಮತ್ತಿತರರು ಇದ್ದರು.
ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ರಾಜ್ಯಧ್ಯಕ್ಷÀ ಜಿ. ನಾರಾಯಣ ಸ್ವಾಮಿ ನಿರ್ದೇಶನದಲ್ಲಿ ರಚನೆಯಾದ ಬಾಳಲೆ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಗಿರೀಶ್, ಗೌರವಾಧ್ಯಕ್ಷ ಸತೀಶ್, ಉಪಾಧ್ಯಕ್ಷ ಇಲಿಯಾಸ್, ಪ್ರಧಾನ ಕಾರ್ಯದರ್ಶಿ ವಿನಯ್, ಖಜಾಂಚಿ ಚಂದು ಕಾರ್ಯನಿರ್ವಹಿಸಲಿದ್ದಾರೆ.