ಕುಶಾಲನಗರ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ಆಯೋಜಿಸಿದ್ದ ವಿವಿಧ ಕ್ರೀಡೆಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಶಿವಪ್ಪ ಚಾಲನೆ ನೀಡಿದರು. ಗರಗಂದೂರು ಸತೀಶ್, ಹೆಚ್.ಎಂ. ಮಧುಸೂದನ್, ಎಸ್. ಧರ್ಮೇಂದ್ರ, ಟಿ.ಎಸ್. ಶಾಂಬಶಿವಯ್ಯ, ಕೆ.ಎಸ್. ಮೂರ್ತಿ ಮತ್ತಿತರರು ಇದ್ದರು. 
ಕೊಡಗು

ವೀರಶೈವ ಸಮಾಜದ ಕ್ರೀಡಾಕೂಟಕ್ಕೆ ಚಾಲನೆ

ಕುಶಾಲನಗರ:
ಕ್ರೀಡೆಗಳಿಂದಾಗಿ ಸಾಮಾಜಿಕ ಹಾಗೂ ಆರೋಗ್ಯ ಸಂಬAಧಗಳು ವೃದ್ಧಿಯಾಗುತ್ತವೆ. ಪರಸ್ಪರರಲ್ಲಿ ಸ್ನೇಹ ಸೌಹಾರ್ದತೆ ಒಡಮೂಡುತ್ತವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಶಿವಪ್ಪ ಹೇಳಿದರು. ಕುಶಾಲನಗರ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾಜದ ಯುವಕರು, ಮಕ್ಕಳು ಹಾಗೂ ಮಹಿಳೆಯರಿಗಾಗಿ ಶನಿವಾರ ಆಯೋಜಿಸಿದ್ದ ವಿವಿಧ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಿಂದಾಗಿ ಪರಸ್ಪರ ಸ್ನೇಹ - ವಿಶ್ವಾಸ ವಿಕಸನಗೊಳ್ಳುತ್ತದೆ. ಕ್ರೀಡೆಗಳು ದೈಹಿಕ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ವೀರಶೈವ ಮಹಾಸಭಾ ಸಮುದಾಯದ ಮಂದಿ ಒಗ್ಗೂಡುವ ಮೂಲಕ ಸಮಾಜದ ಸಂಘಟನೆಗೆ ಒತ್ತು ನೀಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೈಗಾರಿಕಾ ಹಾಗೂ ವಾಣಿಜ್ಯ ಘಟಕದ ರಾಜ್ಯ ನಿರ್ದೇಶಕ ಗರಗಂದೂರು ಸತೀಶ್ ಮಾತನಾಡಿ, ಸುದೀರ್ಘ ಎರಡು ನೂರು ವರ್ಷಗಳ ಕಾಲ ಕೊಡಗಿನ ಲಿಂಗಾಯತ ರಾಜರು ಆಳ್ವಿಕೆ ನಡೆಸಿದ ಕೊಡಗಿನಲ್ಲಿ ಲಿಂಗಾಯಿತರು ಅಲ್ಪಸಂಖ್ಯಾತರಾಗಿರುವುದು ಬೇಸರದ ಸಂಗತಿ.
ಜಿಲ್ಲೆಯಲ್ಲಿ ಇರುವ ಮಂದಿ ಒಗ್ಗೂಡುವ ಮೂಲಕ ಸಂಘಟಿತರಾಗಬೇಕಿದೆ. ರಾಜಕೀಯವಾಗಿ ಅಸ್ತಿತ್ವ ಸ್ಥಾಪಿಸಬೇಕಿದೆ ಎಂದು ಹೇಳಿದರು.
ಕುಶಾಲನಗರ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ. ಮಧುಸೂದನ್, ಕಾರ್ಯದರ್ಶಿ ಎಸ್. ಧರ್ಮೇಂದ್ರ, ಕೊಡಗು ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಉದ್ಯಮಿ ಬಸವರಾಜು, ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಯುವ ಘಟಕದ ತಾಲೂಕು ಅಧ್ಯಕ್ಷ ಹೆಚ್.ಪಿ. ವಿನಯ್, ನಗರ ಯುವ ಘಟಕದ ಅಧ್ಯಕ್ಷ ಎಂ.ಸಿ. ಸಚಿನ್, ನಿರ್ದೇಶಕಿ ಮನುಜಗದೀಶ್, ಯಶೋಧ ಮಹದೇವಪ್ಪ, ವೀರಶೈವ ಸಮುದಾಯದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ನಂದೀಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಣೇಶ್, ಶಿಕ್ಷಕ ಎಸ್.ಪಿ ಪರಮೇಶ್, ಶುಭಶೇಖರ್, ಉದಯಕುಮಾರ, ಎಸ್. ಎಸ್. ವಿರೂಪಾಕ್ಷ, ಟಿ.ಎಸ್. ಸೌಭಾಗ್ಯ ಮೊದಲಾದವರಿದ್ದರು.
ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿತ ಕ್ರೀಡಾಕೂಟದಲ್ಲಿ ಯುವಕರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಮಕ್ಕಳಿಗೆ ಕಾಳು ಹೆರಕುವುದು, ಕಪ್ಪೆ ಕುಪ್ಪಳಿಸುವುದು, ಸ್ಟಿಕ್ಕರ್ ಅಂಟಿಸುವುದು, ಒಂಟಿಕಾಲು ಓಟ, ಬಲೂನು ಒಡೆಯುವುದು, ಕಾಲೇಜು ವಿದ್ಯಾರ್ಥಿಗಳಿಗೆ ನೂರು ಮೀ.ಓಟದ ಸ್ಪರ್ಧೆ, ನಿಂಬೆ ಚಮಚ, ನಿಧಾನ ಬೈಕ್ ಚಾಲನೆ, ಮಹಿಳೆಯರಿಗೆ ರಂಗೋಲಿ, ಪುರುಷರಿಗೆ ಭಾರದ ಗುಂಡು ಎಸೆತ ಸೇರಿದಂತೆ ಅನೇಕ ಸ್ಪರ್ಧೆಗಳು ನಡೆದವು.