ಕೊಡಗು ಜಿಲ್ಲೆಗೆ ಆಗಮಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರನ್ನು ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಸ್ವಾಗತಿಸಲಾಯಿತು. ಹೆಚ್.ವಿ. ಶಿವಪ್ಪ, ಶಾಂಭಶಿವಯ್ಯ, ಎಚ್. ಪಿ. ಉದಯ ಕುಮಾರ್, ಹೆಚ್.ಎಂ. ಮಧುಸೂಧನ್, ಕೆ. ಎಸ್. ಮೂರ್ತಿ ಮತ್ತಿತರರು ಇದ್ದರು.
ಕೊಡಗು ಜಿಲ್ಲೆಗೆ ಬುಧವಾರ ಆಗಮಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರನ್ನು ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಕೊಡಗಿನ ಪ್ರವೇಶ ದ್ವಾರ ಕುಶಾಲನಗರದ ಕಾವೇರಿ ನದಿ ದಂಡೆಯ ಕಾವೇರಿ ಪ್ರತಿಮೆ ಬಳಿ ಸ್ವಾಗತಿಸಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕನಾಗಿ ಬಸವಣ್ಣನವರನ್ನು ಘೋಷಿಸಿರುವುದು ಸರಿಯಷ್ಟೆ. ಅದರೆ ಇದೂವರೆಗೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಬಸವ ಭವನ ನಿರ್ಮಾಣ ಮಾಡುವ ಸಂಬAಧ ರಾಜ್ಯ ಸರ್ಕಾರ ಸೂಕ್ತವಾದ ಭೂಮಿಯೊಂದಿಗೆ ಪೂರಕ ಅನುದಾನವನ್ನು ಬಿಡುಗಡೆಗೊಳಿಸಬೇಕು.
ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ರಾಜರ ಗದ್ದುಗೆ, ಕೋಟೆ ಅರಮನೆಗಳ ಸಂರಕ್ಷಣೆಗೆ ವಿಶೇಷ ಒತ್ತು ನೀಡಬೇಕೆಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಉಪಾಧ್ಯಕ್ಷ ಎಚ್. ಪಿ. ಉದಯ ಕುಮಾರ್, ಕುಶಾಲನಗರ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ. ಮಧುಸೂಧನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಎಸ್. ಮೂರ್ತಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಹಕ್ಕೆ ಮೋಹನ್, ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಪ್ರಮುಖರಾದ ಕೆ.ಪಿ. ಪರಮೇಶ್, ಎಂ. ಎಸ್.ಗಣೇಶ್, ಎಂ. ಎಸ್. ಲೋಕೇಶ್, ಟಿ.ಜಿ. ಪ್ರೇಮ್ ಕುಮಾರ್, ಎಪಿಸಿಎಂಎಸ್ ಅಧ್ಯಕ್ಷರಾದ ಹೆಚ್. ಬಿ. ಚಂದ್ರಪ್ಪ, ತೊರೆನೂರು ಸಹಕಾರ ಸಂಘದ ಅಧ್ಯಕ್ಷರಾದ ಟಿ. ಬಿ.ಜಗದೀಶ್, ಶಿವಲಿಂಗಪ್ಪ, ಬಿ.ಬಿ. ಲೋಕೇಶ್ ಮತ್ತಿತರರು ಇದ್ದರು.