ಕಡಂಗದಲ್ಲಿ ಹೋಟೆಲ್, ಮೊಬೈಲ್ ಅಂಗಡಿ , ತರಕಾರಿ ಅಂಗಡಿ ಬೆಂಕಿಗೆ ಆಹುತಿಯಾಗುತ್ತಿರುವುದು.  
ಕೊಡಗು

ಕಡಂಗದಲ್ಲಿ ವಿವಿಧ ಮಳಿಗೆಗಳು ಬೆಂಕಿಗಾಹುತಿ

ವಿರಾಜಪೇಟೆ: ಇಲ್ಲಿನ ಕಡಂಗ ಪಟ್ಟಣದಲ್ಲಿ ಬುಧವಾರ ಹೋಟೆಲ್ ಸೇರಿ ವಿವಿಧ ಮಳಿಗೆಗಳು ಬೆಂಕಿಗಾಹುತಿಯಾಗಿದೆ.
ಕಡಂಗ ಪಟ್ಟಣದ ಹೃದಯ ಭಾಗದಲ್ಲಿರುವ ಹೋಟೆಲ್, ಮೊಬೈಲ್, ತರಕಾರಿ ಅಂಗಡಿಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಹೋಟೆಲ್ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಬೆಂಕಿಯ ಜ್ವಾಲೆ ಅಂಗಡಿ ಮಳಿಗೆಗಳಿಗೆ ಆವರಿಸಿದೆ. ಮೊಬೈಲ್ ಅಂಗಡಿಯಲ್ಲಿದ್ದ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಮತ್ತಿತರ ಬೆಲೆಬಾಳುವ ವಸ್ತುಗಳು, ಹೋಟೆಲ್ ಹಾಗೂ ತರಕಾರಿ ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಹಾನಿಗೊಂಡಿವೆ. ಬೆಂಕಿ ಅವಘಡದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.