ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಮನು ಪೆಮ್ಮಯ್ಯ ಕೂಡಿಗೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಗುವೊಂದಕ್ಕೆ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಸ್ಕರ್, ಎಚ್.ಪಿ.ಮಂಜುನಾಥ್, ದೀಪಿಕಾ ಇದ್ದರು.
- ರೋಟರಿ ವತಿಯಿಂದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಕುಶಾಲನಗರ : ಕೂಡಿಗೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರೋಟರಿ ವತಿಯಿಂದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.
ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಮನು ಪೆಮ್ಮಯ್ಯ ಕೂಡಿಗೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಗುವೊಂದಕ್ಕೆ ಪೋಲಿಯೋ ಲಸಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ಪೋಲಿಯೋವನ್ನು ಜಗತ್ತಿನಾದ್ಯಂತ ನಿರ್ಮೂಲನೆ ಮಾಡುವುದೇ ರೋಟರಿ ಇಂಟರ್‌ನ್ಯಾಷನಲ್ ಪ್ರಮುಖ ಗುರಿಯಾಗಿದ್ದು 1985 ರಿಂದಲೂ ಸಂಸ್ಥೆ ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರತವಾಗಿದೆ ಎಂದರು.
ಕುಶಾಲನಗರ ರೋಟರಿ ಕ್ಲಬ್ ಸದಸ್ಯ ಡಾ.ಹರಿಶೆಟ್ಟಿ ಮಾತನಾಡಿ, 2014ರಲ್ಲಿ ಭಾರತವನ್ನು ಪೋಲಿಯೋಮುಕ್ತ ದೇಶವೆಂದು ಘೋಷಿಸಿದರು. ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಇನ್ನೂ ಪೋಲಿಯೋ ಕಂಡು ಬಂದಿರುವುದರಿಂದ ನಾವು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್, ರೋಟರಿ ಕಾರ್ಯದರ್ಶಿ ಎಚ್.ಪಿ.ಮಂಜುನಾಥ್, ಆರೋಗ್ಯಾಧಿಕಾರಿ ದೀಪಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭ ಪೋಲಿಯೋ ಲಸಿಕೆ ಅಭಿಯಾನದಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಕ್ಯಾಪ್‌ಗಳನ್ನು ವಿತರಿಸಲಾಯಿತು.
ಮೂರು ದಿನಗಳ ಕಾಲ ಲಸಿಕೆ ಅಭಿಯಾನ ನಡೆಯಲಿದ್ದು ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ , ಅಮ್ಮ ಕ್ಲಿನಿಕ್, ಕುಶಾನನಗರ ಸರ್ಕಾರಿ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಲಸಿಗೆ ಬೂತ್‌ಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಹೆಬ್ಬಾಲೆಯಲ್ಲಿ ಅಭಿಯಾನ: ಹೆಬ್ಬಾಲೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜಂಟಿ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಇಂಟಕ್ ಅಧ್ಯಕ್ಷ ನಾಪಂಡ ಮುತ್ತಪ್ಪ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ನಡೆಯುತ್ತಿದ್ದು ಸಾರ್ವಜನಿಕರು, ಹೆತ್ತವರು, ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ, ಸದಸ್ಯ ಮಂಜುನಾಥ, ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ಸದಸ್ಯ ರವಿ ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಬಹುತೇಕ ಸಾರ್ವಜನಿಕರು ಪಾಲ್ಗೊಂಡಿದ್ದರು.
ಚಿಕ್ಕತ್ತೂರು : ಕುಶಾಲನಗರ ಸಮೀಪ ಚಿಕ್ಕತ್ತೂರು ಸರ್ಕಾರಿ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಯಿತು. ಬೆಳಗ್ಗೆ ಎಂಟರಿಂದ ಸಂಜೆ ಐದರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಚಿಕ್ಕತ್ತೂರು ಮತ್ತು ಸುಂದರನಗರ ಗ್ರಾಮದ ಪಾಲಕರು ಮಕ್ಕಳ ಸಮೇತ ಹಾಜರಿದ್ದು ಲಸಿಕೆ ಕೊಡಿಸಿದರು. ಚಿಕ್ಕತ್ತೂರು ವಾರ್ಡ್ ಸದಸ್ಯ ದಿನೇಶ್, ಸುಂದರ ನಗರ ವಾರ್ಡ್ ಸದಸ್ಯ ಕೆ. ಬಿ . ಶಂಷುದ್ದೀನ್, ಸುಂದರ ನಗರ ಟಿ .ಎಚ್.ಒ.ಸೌಮ್ಯಾ, ಅಂಗನವಾಡಿ ಶಿಕ್ಷಕಿ ಬೋಜಮ್ಮ, ಚಿಕ್ಕತ್ತೂರು ಅಂಗನವಾಡಿ ಶಿಕ್ಷಕಿ ಸುಶೀಲಾ, ಆಶಾ ಕಾರ್ಯಕರ್ತೆ ಸುಮಿತ್ರಾ ಭಾಗವಹಿಸಿದ್ದರು.
ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಇಂಟಕ್ ಅಧ್ಯಕ್ಷ ನಾಪಂಡ ಮುತ್ತಪ್ಪ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
21ಏಓ03 ಚಿಕ್ಕತ್ತೂರು ವಾರ್ಡ್ ಸದಸ್ಯ ದಿನೇಶ್, ಸುಂದರನಗರ ವಾರ್ಡ್ ಸದಸ್ಯ ಕೆ. ಬಿ . ಶಂಷುದ್ದೀನ್, ಸುಂದರ ನಗರ ಟಿ .ಎಚ್. ಓ .ಸೌಮ್ಯ, ಅಂಗನವಾಡಿ ಶಿಕ್ಷಕಿ ಬೋಜಮ್ಮ, ಚಿಕ್ಕತ್ತೂರು ಅಂಗನವಾಡಿ ಶಿಕ್ಷಕಿ ಸುಶೀಲ, ಆಶಾ ಕಾರ್ಯಕರ್ತೆ ಸುಮಿತ್ರ ಭಾಗವಹಿಸಿದ್ದರು.