ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಆಸ್ಪತ್ರೆ ವ್ಯವಸ್ಥೆಗಳ ಬಗ್ಗೆ ರೋಗಿಗಳ ಬಳಿ ವಿಚಾರಿಸಿದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಇದ್ದರು.
ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಕೆಲವೊಂದು ನ್ಯೂನತೆಗಳನ್ನು ಹೊರತುಪಡಿಸಿ ಇಲ್ಲಿನ ವ್ಯವಸ್ಥೆಗಳಿಗೆ ತೃಪ್ತಿ ವ್ಯಕ್ತಪಡಿಸಿದರು. ಹಿಂದಿನ ಬಾರಿ ಭೇಟಿ ನೀಡಿದ್ದ ಸಂದರ್ಭ ಕಂಡುಬAದಿದ್ದ ಸಮಸ್ಯೆಗಳ ಪೈಕಿ ಬಹುತೇಕ ಸಮಸ್ಯೆಗಳು ಪರಿಹಾರ ಆಗಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು. ಹಾಜರಾತಿ ಸೇರಿದಂತೆ ಕೆಲವೊಂದು ದಾಖಲೆಗಳಲ್ಲಿ ಲೋಪ ಕಂಡುಬAದಿದ್ದು, ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.
ಕಳೆದ 2 ದಿನಗಳಿಂದ ಮಡಿಕೇರಿಯಲ್ಲಿ ಬೀಡುಬಿಟ್ಟಿರುವ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಶನಿವಾರ ನಗರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿದರು. ಲೋಪಗಳನ್ನು ಹುಡುಕಿ ಮುಂದೆ ಸರಿಪಡಿಸಿಕೊಳ್ಳುವಂತೆ ಸೂಚನೆ ಕೊಟ್ಟರು. ಮುಂದೆ ಇಂಥ ತಪ್ಪುಗಳು ಪುನರಾವರ್ತನೆ ಆದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು. ನ್ಯಾ. ಕೆ.ಎನ್. ಫಣೀಂದ್ರ ನೇರವಾಗಿ ಕಚೇರಿಗಳಿಗೆ ಭೇಟಿ ಕೊಟ್ಟರೆ ಅವರೊಂದಿಗೆ ಇದ್ದ ಲೋಕಾಯುಕ್ತ ಅಧಿಕಾರಿಗಳು ಆಸುಪಾಸಿನ ಪರಿಸ್ಥಿತಿಗಳನ್ನು ಅವಲೋಕಿಸಿ ಉಪಲೋಕಾಯುಕ್ತರಿಗೆ ವರದಿ ನೀಡಿದರು.
ಆರಂಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) ತೆರಳಿದ ಉಪಲೋಕಾಯುಕ್ತರು ಚಿಕಿತ್ಸೆಗಾಗಿ ಆಗಷ್ಟೇ ಬಂದು ಕಾಯುತ್ತಿದ್ದ ರೋಗಿಗಳನ್ನು ಮಾತನಾಡಿಸಿ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಶೌಚಗೃಹ, ಪ್ರಯೋಗಾಲಯ, ವಾರ್ಡ್ಗಳಿಗೂ ಖುದ್ದಾಗಿ ಭೇಟಿ ಕೊಟ್ಟು ಕೊರತೆಗಳ ಅವಲೋಕ ನಡೆಸಿದರು. ಆಸ್ಪತ್ರೆಯಲ್ಲಿ ಸ್ವಚ್ಚತೆ, ಊಟ, ಕುಡಿಯುವ ನೀರು, ಚಿಕಿತ್ಸೆ, ವೈದ್ಯರ ಸ್ಪಂದನೆ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದುಕೊಂಡರು. ಶೌಚಗೃಹ ಹೊರತುಪಡಿಸಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಎಲ್ಲಾ ಕಡೆ ರೋಗಿಗಳು ಮತ್ತು ರೋಗಿಗಳ ಸಂಬAಧಿಕರಿAದ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು. ಆಸ್ಪತ್ರೆಯಲ್ಲಿ ಕೇವಲ ಎರಡು ಶೌಚಗೃಹಗಳಿದ್ದು ಅವುಗಳು ಸ್ವಚ್ಛವಾಗಿಲ್ಲ ಎಂದು ಕೆಲವರು ಆರೋಪಿಸಿದರು. ಆಸ್ಪತ್ರೆಯ ಹೊಸ ಕಟ್ಟಡ ಆದ ನಂತರ ಹೆಚ್ಚುವರಿ ಶೌಚಗೃಹ ಲಭ್ಯವಾಗುತ್ತದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದರು.
ವೈದ್ಯಕೀಯ ಅಧೀಕ್ಷಕರ ಕಚೇರಿಗೆ ತೆರಳಿದ ಉಪಲೋಕಾಯುಕ್ತರು ಅಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು. ಹಾಜರಾತಿ ಪುಸ್ತಕ ಮತ್ತು ದಿನವಹಿ ನಗದು ಪುಸ್ತಕವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳು ವಿವರಣೆ ನೀಡಲು ಮುಂದಾದಾಗ, ಬರೀ ವಿವರಣೆ ಕೊಡುತ್ತೀರಿ. ಈ ಬಗ್ಗೆ ಕಳೆದ ಬಾರಿ ಬಂದಿದ್ದಾಗ ಎಚ್ಚರಿಕೆ ಕೊಟ್ಟರೂ ಪ್ರಯೋಜನ ಆಗಿಲ್ಲ. ಕರ್ತವ್ಯಕ್ಕೆ ಬಂದ ಕೂಡಲೇ ಹಾಜರಾತಿ ಹಾಕಬೇಕು. ಇಲ್ಲದಿದ್ದರೆ ನೀವುಗಳು ಕೆಲಸ ಮಾಡಿರುವುದು ಹೇಗೆ ಗೊತ್ತಾಗುವುದು ? ಎಂದು ಪ್ರಶ್ನಿಸಿದರು.
ದಾಖಲೆಗಳಲ್ಲಿ ಕೆಲವು ಕಡೆ ವೈಟ್ನರ್ ಹಾಕಿರುವುದನ್ನು ಗಮನಿಸಿ ವೈಟ್ನರ್ ಯಾಕೆ ಹಾಕಬೇಕು ? ಇದು ಏನೋ ಮುಚ್ಚಿಡುವ ಪ್ರಯತ್ನ ಎಂದು ವೈದ್ಯಕೀಯ ಅಧೀಕ್ಷಕ ಡಾ. ಹೆಚ್.ಕೆ. ಸೋಮಶೇಖರ್ ಅವರಿಗೆ ಹೇಳಿದರು. ವೈದ್ಯಕೀಯ ಅಧೀಕ್ಷಕರು ನೀವೇ ಸಹಿ ಹಾಕಿಲ್ಲ. ಮಾದರಿ ಆಗಬೇಕಾದವರೇ ಹೀಗೆ ಮಾಡಿದರೆ ಹೇಗೆ ?ಎಂದು ಕೇಳಿದರು. ಆಸ್ಪತ್ರೆ ಸುತ್ತ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಮುಖ್ಯಸ್ಥರು ಪ್ರತಿದಿನ ಒಂದು ಸುತ್ತು ಪರಿಶೀಲಿಸಬೇಕು. ಅಂದAದಿನ ಕೆಲಸ ಅಂದAದೇ ಮಾಡಬೇಕು ಎಂದು ಸಲಹೆ ನೀಡಿದರು. ರೋಗಿಗಳು ಕಾಯುವ ಕಡೆಗಳಲ್ಲಿ ಹಾಕಿರುವ ಹಾಳಾದ ಕುರ್ಚಿಗಳ ಬದಲಾವಣೆಗೆ ಸೂಚನೆ ನೀಡಿದರು.