ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 16ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಮಾಡಲಾಯಿತು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಐಚಂಡ ರಶ್ಮಿ ಮೇದಪ್ಪ, ಪರದಂಡ ಸುಬ್ರಮಣಿ, ಮಾರ್ಚಂಡ ಗಣೇಶ್ ಪೊನ್ನಪ್ಪ ಮತ್ತಿತರರು ಇದ್ದರು.
ಕೊಡವಾಮೆಯ ಹಿರಿಮೆಗೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು ಉಡುಗೆ-ತೊಡುಗೆಯ ಜತೆಗೆ ಮನೆಯಲ್ಲಿ ಕೊಡವ ಭಾಷೆ, ಸಂಸ್ಕೃತಿಯನ್ನು ಉತ್ತಮ ಸಂಸ್ಕಾರದೊAದಿಗೆ ಬೆಳೆಸುವ ಮಹತ್ತರವಾದ ಜವಾಬ್ದಾರಿ ಹೊರಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನಿಂದ ಗುರುವಾರ ಆಯೋಜಿಸಿದ್ದ ಕಕ್ಕಡ ನಮ್ಮೆ ಆಚರಣೆ ಹಾಗೂ ಅಕಾಡೆಮಿಯ 16ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದಲ್ಲಿ ಪತ್ತಾಯ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಒಳ್ಳೆಯ ವಿಚಾರ, ಒಳ್ಳೆಯ ವಾತಾವರಣವನ್ನು ಕಾಯ್ದುಕೊಳ್ಳುವುದು ಸ್ತಿçÃಯರ ಕೈಯಲ್ಲಿದೆ. ಅಂತಹ ಮನೆಯಲ್ಲಿ ಕೊಡವಾಮೆ, ಕೊಡವ ಸಂಸ್ಕೃತಿ ಹಾಗೂ ಕೊಡವ ಸಂಸ್ಕಾರವು ತಣ್ಣನೆ ಬೆಳಗುತ್ತದೆ. ಪ್ರಸ್ತುತ ಬಹುತೇಕ ಸಂಘ-ಸAಸ್ಥೆ, ಸಮಾಜಗಳ ವ್ಯಾಪ್ತಿಯಲ್ಲಿ ಮಹಿಳೆಯ ಸಂಘಟನೆಗೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಸಂಘಟನೆಗಳಲ್ಲಿ ಸಂಸ್ಕೃತಿ-ಸAಸ್ಕಾರಗಳ ಬಗ್ಗೆ ಹೆಚ್ಚಿನ ಆದ್ಯತೆಯ ಮೇರೆಗೆ ತಿಳುವಳಿಕೆ ನೀಡುವಂತಾಗಬೇಕು. ಪ್ರತಿಯೊಬ್ಬರ ಮನೆ-ಮನಗಳಲ್ಲಿ ಹಿಂದಿನ ಕಾಲದ ಕೊಡವರ ಆತಿಥ್ಯದ ಗತವೈಭವ ಮರುಕಳಿಸುವಂತಾಗಬೇಕು. ಕೊಡಗಿನ ನೆಲದಲ್ಲಿ ಅತಿಥಿ ದೇವೋಭವ ಎಂಬುದು ಕೊಡವ ಸ್ತಿçÃಯರ ಸಂಸ್ಕಾರದಿAದ ಹುಟ್ಟಿ ಬಂದAತಹ ಸಂಸ್ಕೃತಿ ಎಂದು ಹೇಳಿದರು.
ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಮನೆ ಮನೆಗಳಲ್ಲಿ ಜ್ಞಾನದ ಬೆಳಕು ಹರಿಯಬೇಕೆಂದರೆ ಓದುವ ಅಭ್ಯಾಸ ಇಟ್ಟುಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನಾರ್ಜನೆಯೊಂದಿಗೆ ಸಾಹಿತ್ಯ ಚಿಂತನೆಗೆ ಕಾರಣವಾಗುತ್ತದೆ. ಕೊಡವ ಪುಸ್ತಕ ಪತ್ತಾಯದಂತಹ ಕಾರ್ಯಕ್ರಮದಿಂದ ನಾಡಿನಾದ್ಯಂತ ಓದುವ ಹವ್ಯಾಸ ವೃದ್ಧಿಸುವುದರ ಮೂಲಕ ಕೊಡವ ಸಾಹಿತ್ಯ ಬೆಳೆಯಲಿ ಎಂದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವಾಮೆಯ ಮೂಲ ಕೃಷಿ. ಪ್ರಸ್ತುತ ಕೃಷಿಯಿಂದ ಧನ ಲಾಭದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಸಂಸ್ಕೃತಿಯ ಜಿವಂತಿಕೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕೃಷಿಗೆ ಆದ್ಯತೆ ನೀಡುವಂತಾಗಬೇಕು. ಕೊಡವ ಅಕಾಡೆಮಿಯಂತಹ ಘನತೆವೆತ್ತ ಸರ್ಕಾರಿ ಸಂಸ್ಥೆಯ ಮೂಲಕ ಗದ್ದೆ ಕೃಷಿಗೆ ರಾಜ್ಯ ಸರ್ಕಾರ ಧನಸಹಾಯ ನೀಡಿ ಸಹಕರಿಸಬೇಕು ಎಂದು ಹೇಳಿದರು.
ಪುಸ್ತಕ ಪತ್ತಾಯ ದಾನಿಗಳಾದ ಕೊಡಗು ಎಜುಕೇಶನ್ ಮತ್ತು ಸೋಷಿಯಲ್ ಟ್ರಸ್ಟ್ನ ಮಾರ್ಚಂಡ ಗಣೇಶ್ ಪೊನ್ನಪ್ಪ ಹಾಗೂ ನಿವೃತ್ತ ಶಿಕ್ಷಕಿ, ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ಮಳವಂಡ ಪೂವಮ್ಮ ಮಾತನಾಡಿದರು.
ಕಕ್ಕಡ ತಿಂಗಳ ಮಹತ್ವ ಹಾಗೂ ಇಂದಿನ ಸ್ಥಿತಿಗತಿಯ ಬಗ್ಗೆ ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ಮೂವೆರ ರೇಖ ಪ್ರಕಾಶ್ ವಿಚಾರಮಂಡಿಸಿದರು.
ಈ ವೇಳೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ಪೊಮ್ಮಕ್ಕಡ ಪರಿಷತ್ತಿಗೆ ಅಕಾಡೆಮಿ ವತಿಯಿಂದ ನೀಡಲಾಯಿತು.
ಅಕಾಡೆಮಿ ಸದಸ್ಯರಾದ ನಾಪಂಡ ಸಿ. ಗಣೇಶ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕಾವೇರಪ್ಪ , ಪೊಮ್ಮಕ್ಕಡ ಪರಿಷತ್ತಿನ ಹಿರಿಯರಾದ ಮಂಡೇಪAಡ ತ್ಯಾಗಿ ರವಿ, ಪಟ್ರಪಂಡ ಗೀತಾ, ತೀತಿರ ಊರ್ಮಿಳ ಸೋಮಯ್ಯ, ಕಡೇಮಡ ಕವಿತ ರಮೇಶ್, ಅಜ್ಜಮಡ ಶಾಂತಿ, ಬೊಳ್ಳಾಜಿರ ರಾಧ ಕರುಂಬಯ್ಯ, ಕೆಚ್ಚೆಟ್ಟಿರ ಕಾಮುಣಿ, ಚೇನಂಡ ಶಿಲ್ಪ, ಮೊಣ್ಣಂಡ ವಿನು, ಅಜ್ಜಮಡ ಸಾವಿತ್ರಿ, ಸುಳ್ಳಿಮಡ ಶಿಲ್ಪ ಕರವಂಡ ಸರಸು ಪೆಮ್ಮಯ್ಯ ಇನ್ನಿತರರು ಪಾಲ್ಗೊಂಡಿದ್ದರು.
ಕಕ್ಕಡ ನಮ್ಮೆಯ ಪ್ರಯುಕ್ತ ಪೊಮ್ಮಕ್ಕಡ ಪರಿಷತ್ತಿನ ಮಹಿಳೆಯರು ಸ್ವತಃ ತಯಾರಿಸಿ ತಂದಿದ್ದ ಕಕ್ಕಡ ಕೋಳಿ ಕರಿ, ಪಂದಿಕರಿ, ಕಕ್ಕಳೆ ಞಂಡ್ ಕರಿ, ಮಾಂಗೆಕರಿ, ಚೆಕ್ಕೆ ಪಲ್ಯ, ಬೈಂಬಳೆ ಪಲ್ಯ, ತರಕಾರಿ ಕರಿ, ಕಡಂಬುಟ್ಟ್, ಪಾಪುಟ್ಟ್, ಬೊಳ್‌ತ ಕೂಳ್, ನೈಕೂಳ್, ಒಟ್ಟಿ, ತರಾವರಿ ಉಪ್ಪಿನ ಕಾಯಿ, ಮದ್ದ್ ಪಾಯಸ, ಮದ್ದ್ ಪುಟ್ಟ್ ಸೇರಿದಂತೆ ಇನ್ನೂ ಹಲವು ವಿಧದ ಖಾದ್ಯಗಳು ಗಮನ ಸೆಳೆದವು.