ವಿರಾಜಪೇಟೆ: ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಅನಾವರಣಗೊಳಿಸಲು ಮತ್ತು ಸೂಕ್ತ ವೇದಿಕೆ ಒದಗಿಸಲು ನೂತನ ಕ್ರೀಡಾ ಸಂಸ್ಥೆಯೊಂದು ವಿರಾಜಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜು.19ರಂದು ಕ್ರೀಡಾ ಉತ್ಸವ ಆಯೋಜಿಸಲಾಗಿದೆ.
ಕ್ರೀಡಾ ಆಯೋಜಕರಾದ ತಿರುಶ್, ಸಚಿನ್, ಇರ್ಷಾದ್ ಮತ್ತು ಸಂತೋಷ್ ನೇತೃತ್ವದಲ್ಲಿ ಚಾಂಪಿಯನ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ವಿರಾಜಪೇಟೆ ನಗರದಲ್ಲಿ ಯು.ಬಿ.ಸಿ ಕೊಡಗು ಬ್ಯಾಡ್ಮಿಂಟನ್ ಫೀಸ್ಟ್ ನಡೆಯಲಿದೆ ಎಂದು ಕ್ರೀಡಾ ಉತ್ಸವದ ಆಯೋಜಕ ತಿರುಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾಟಗಳು ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು, ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಕ್ಷೇತ್ರಕ್ಕೆ ಒದಗಿಸುವ ನಿಟ್ಟಿನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕೀಡಾ ಉತ್ಸವನ್ನು ಆಯೋಜಿಸಲಾಗುತ್ತಿದೆ. ಕ್ರೀಡಾ ಉತ್ಸವ ಪುರುಷರ ವಿಭಾಗ ಓಪನ್ ಡಬಲ್ಸ್, ಮೆನ್ಸ್ ಬಿಗಿನರ್ಸ್ ಇಂಟರ್ಮೀಡಿಯಟ್, ಮೆನ್ಸ್ 35 ವರ್ಷ ಮೇಲ್ಪಟ್ಟು, ಮೆನ್ಸ್ 80 ವರ್ಷ ಮೇಲ್ಪಟ್ಟು ಮತ್ತು ಮಹಿಳಾ ವಿಭಾಗದಲ್ಲಿ ವುಮೆನ್ಸ್ ಡಬಲ್ಸ್ ವಿವಿಧ ವಿಭಾಗಗಳಲ್ಲಿ ಪಂದ್ಯಾಟಗಳು ನಡೆಯಲಿದೆ.
ಭಾಗವಹಿಸುವ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಭೋಜನ ಮತ್ತು ಸಂಜೆಯ ಉಪಾಹಾರ ಏರ್ಪಡಿಸಲಾಗಿದೆ. ಕ್ರೀಡಾ ಉತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳು 1000 ರೂ. ಮುಂಗಡವಾಗಿ ಪಾವತಿ ಮಾಡಬೇಕು. ಹೊಸರ ನೋಂದಾಯಿಸಲು ಆಯೋಜಕರನ್ನು ಸಂಪರ್ಕಿಸಬಹುದು.