ಮಡಿಕೇರಿಯ ತನಲ್ ಆಶ್ರಮದಲ್ಲಿ ನಡೆದ ಎಂಟನೇ ವಾರ್ಷಿಕ ಮಹಾಸಭೆ ಸಂದರ್ಭ ಸಂಸ್ಥೆಗಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಮೊಹಮ್ಮದ್ ಅಲಿ, ಮೊಹಮ್ಮದ್ ಮುಸ್ತಫ, ಬಾಳೆಯಡ ದಿವ್ಯಾ, ಕರಾಮತ್ತುಲ್ಲಾ ಖಾನ್, ಮುಹೀನ ಅಬೂಬಕ್ಕರ್, ಅಬ್ದುಲ್ಲಾ ಮತ್ತಿತರರು ಇ ದ್ದರು.
ನೈಜ ಧರ್ಮ ವಿಶ್ವಾಸಿಯ ಬದುಕು ಇತರರ ಕಷ್ಟ ಸಂಕಷ್ಟಗಳಿಗೆ ಪರಿಹಾರವಾಗುವ ರೀತಿಯಲ್ಲಿ ಇರಬೇಕು ಎಂದು ಕೇರಳದ ವಡಗರ ವಿಭಾಗದ ತನಲ್ ಟ್ರಸ್ಟ್ ಪ್ರತಿನಿಧಿ ಮೊಹಮ್ಮದ್ ಅಲಿ ಹೇಳಿದರು. ಮಂಗಳವಾರ ಮಡಿಕೇರಿಯ ತನಲ್ ಆಶ್ರಮದಲ್ಲಿ ನಡೆದ ಎಂಟನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸ್ವರ್ಗ ಎಂಬುದು ಇದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅದನ್ನು ಅನಭವಿಸಬೇಕಾದರೆ ನಿರಾಶ್ರಿತ, ನಿರ್ಗತಿಕ ಹಾಗೂ ಅನಾಥರ ಸೇವೆ ಮಾಡುವ ಮೂಲಕ ಗಳಿಸಬೇಕು. ತನಲ್ ಸೇವಾ ಕೇಂದ್ರಗಳ ಅಧೀನದಲ್ಲಿ ದೇಶಾದ್ಯಾಂತ ಮೂರು ಲಕ್ಷದಷ್ಟು ಜನರು ಆಶ್ರಯ ಪಡೆದಿದ್ದಾರೆ. ಸಾವಿರದ ಮುನ್ನೂರ ಮೂವತ್ತು ಶಾಲೆಗಳು ತನಲ್ ಆದೀನದಲ್ಲಿ ಕಾರ್ಯಚರಿಸುತ್ತಿದೆ. ಇನ್ನೂ ಅನೇಕ ಜನ ಹಸಿವು ದಾರಿದ್ರ‍್ಯದಿಂದ ಬದುಕು ಸವೆಸುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷ ಮೊಹಮ್ಮದ್ ಮುಸ್ತಫ ಮಾತನಾಡಿ ತನಲ್ ಆಶ್ರಮದ ಪ್ರಾರಂಭ ಹಾಗೂ ಅದರ ಕಾರ್ಯಚಟುವಟಿಕೆಗ ಬಗ್ಗೆ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯಾ, ಕೋಶಾಧಿಕಾರಿ ಕರಾಮತ್ತುಲ್ಲಾ ಖಾನ್, ಮುಹೀನ ಅಬೂಬಕ್ಕರ್, ಅಬ್ದುಲ್ಲಾ ಇದ್ದರು.
ತನಲ್ ಆಶ್ರಮ ಸಮಿತಿಯಲ್ಲಿ ಪ್ರಾರಂಭದಿAದ ಸೇವೆ ಸಲ್ಲಿಸುತ್ತಿರುವ ಬಾಬು ಚಂದ್ರ ಉಳ್ಳಾಗಡ್ಡಿ, ವಿವೇಕಾನಂದ ಸಂಸ್ಥೆಯಿAದ ನಿರಂತರವಾಗಿ ಶುಷ್ರೂಷೆ ಹಾಗೂ ಸೇವೆಯನ್ನು ಸಲ್ಲಿಸುತ್ತಿರುವ ಮೌನ ಹಾಗೂ ಶೋಭಾ ಅವರನ್ನು ಈ ಸಂಧರ್ಭದಲ್ಲಿ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭ ತನಲ್ ಆಶ್ರಮದ ನೂತನ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿಯಾಗಿ ಬಾಳೆಯಡ ದಿವ್ಯಾ ಕೋಶಾಧಿಕಾರಿಯಾಗಿ ಖರಾಮತ್ತುಲ್ಲಾ ಖಾನ್ ಮುಂದುವರಿದಿದ್ದಾರೆ. ಕಾರ್ಯಕಾರಿ ಸಮಿತಿಗಾಗಿ ಐವರು ಮಹಿಳೆಯರು ಸೇರಿದಂತೆ ಒಟ್ಟು ಹದಿಮೂರು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.