ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ವಿಜಯಲಕ್ಷಿö್ಮÃ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಆರ್ಕಿಡ್ ಮತ್ತು ಅಣಬೆ ಬೆಳೆಗಳ ಬಗ್ಗೆ ತರಬೇತಿ ಕಾರ್ಯಗಾರಕ್ಕೆ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಚಾಲನೆ ನೀಡಿದರು. ಡಾ. ಜಡೇಗೌಡ, ಅಂಬಿಕಾ, ಶಿವಮೂರ್ತಿ, ಚಿಮ್ಮಣಮಾಡ ಕೃಷ್ಣ ಗಣಪತಿ ಮತ್ತಿತರರು ಇದ್ದರು. 
ಕೊಡಗು

ಆರ್ಕಿಡ್ ಮತ್ತು ಅಣಬೆ ಬೆಳೆಗಳ ಬಗ್ಗೆ ತರಬೇತಿ

ಗೋಣಿಕೊಪ್ಪಲು:
ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ವಿಜಯಲಕ್ಷಿö್ಮÃ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ರೈತ ಮತ್ತು ರೈತ ಮಹಿಳೆಯರಿಗೆ ಆರ್ಕಿಡ್ ಮತ್ತು ಅಣಬೆ ಬೆಳೆಗಳ ಬಗ್ಗೆ ಸೋಮವಾರ ಒಂದು ದಿನದ ತರಬೇತಿ ಕಾರ್ಯಗಾರ ನಡೆಯಿತು. ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರ್ಕಿಡ್ ಹೂವಿನ ಗಿಡಗಳ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರೊಫೆಸರ್ ಡಾ. ಜಡೇಗೌಡ ಮಾಹಿತಿ ನೀಡಿ, ಕೊಡಗು ಆರ್ಕಿಡ್ ಹೂವಿನ ಬೆಳೆಗೆ ಸಮೃದ್ಧವಾದ ಪರಿಸರವನ್ನು ಹೊಂದಿದ್ದು 120ಕ್ಕೂ ಹೆಚ್ಚು ತಳಿಗಳು ಕೊಡಗಿನಲ್ಲಿವೆ. ಬ್ರಹ್ಮಗಿರಿ ಮತ್ತು ಪುಷ್ಪಗಿರಿಧಾಮಗಳಲ್ಲಿ ಹೆಚ್ಚಾಗಿ ಇವು ಕಂಡುಬರುತ್ತವೆ. ಕೊಡಗಿನ ಮನೆಯಂಗಳದಲ್ಲಿ ಇದನ್ನು ಬೆಳೆಯುವುದರ ಮೂಲಕ ಮಾರಾಟ ಮಾಡಲು ಸಹ ಅವಕಾಶಗಳಿವೆ ಎಂದರು.
ಅಣಬೆ ಕೃಷಿ ತಜ್ಞರಾದ ಅಂಬಿಕಾ ಅಣಬೆ ಕೃಷಿ ಮತ್ತು ಅದಕ್ಕಿರುವ ಮಾರುಕಟ್ಟೆ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಕೂಡಿಗೆ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಕ ಶಿವಮೂರ್ತಿ ಮಾತನಾಡಿ ಕೃಷಿಯನ್ನು ವಾಣಿಜ್ಯ ವ್ಯವಸ್ಥೆಗೆ ಪರಿವರ್ತಿಸಿಕೊಂಡರೆ ಗ್ರಾಮಾಂತರ ಭಾಗದ ರೈತಾಪಿ ವರ್ಗಕ್ಕೆ ಆದಾಯ ತಂದುಕೊಡುವ ಮಾರ್ಗವಾಗಿ ಮಾರ್ಪಾಡು ಮಾಡಿಕೊಳ್ಳುವುದರ ಜತೆಗೆ ಸರ್ಕಾರದ ಸಹಾಯಧನವನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದೆಂದರು.
ಬಾಳೆಲೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ, ಕೃಷಿ ಇಲಾಕಾಧಿಕಾರಿಗಳಾದ ಮೀರಾ, ಬಾಳೆಲೆ ವಿಜಯಲಕ್ಷಿö್ಮÃ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರತಿಭಾ ಉತ್ತಪ್ಪ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಶಿಕ್ಷಕ ರಾಘವೇಂದ್ರ, ಪ್ರಮುಖರಾದ ಅಡ್ಡಂಗಡ ಪೊನ್ನಮ್ಮ, ಚಂದ್ರಾವತಿ ಮತ್ತಿತರರು ಇದ್ದರು.