ನಾಪೋಕ್ಲು - ಬೆಟ್ಟಗೇರಿ ಮುಖ್ಯ ರಸ್ತೆಯ ಕೊಟ್ಟ ಮುಡಿಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮಳೆ ನೀರು ಸಂಪೂರ್ಣ ರಸ್ತೆಯನ್ನು ಆವರಿಸಿ ವಾಹನ ಸಂಚಾರಕ್ಕೆ ದುಸ್ತರವಾಯಿತು. 
ಕೊಡಗು

ಮಳೆಯಿಂದ ವಾಹನ ಸಂಚಾರಕ್ಕೆ ತೊಂದರೆ

ಕಿರಣ್ ಗೌಡ.ಜಿ
ನಾಪೋಕ್ಲು: ನಾಪೋಕ್ಲು - ಬೆಟ್ಟಗೇರಿ ಮುಖ್ಯ ರಸ್ತೆಯ ಕೊಟ್ಟ ಮುಡಿಯಲ್ಲಿ ಬುಧವಾರ ಸುರಿದ ಮಳೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮಳೆಯ ನೀರು ಸಂಪೂರ್ಣವಾಗಿ ರಸ್ತೆ ಮೇಲೆ ಆವರಿಸಿದ ಪರಿಣಾಮ ಹಳೇ ತಾಲೂಕು ಭಾಗಗಳಲ್ಲಿ ವಾಹನ ಚಾಲಕರ ಬವಣೆ ಹೇಳತೀರದಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸಮಸ್ಯೆ ತಂದಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಸರು ನೀರು ತುಂಬಿಕೊಂಡು ಕೆರೆಯಂತಾಗಿವೆ.
ಎಲ್ಲಿಯೂ ಚರಂಡಿ ವ್ಯವಸ್ಥೆ ಇಲ್ಲ ಕಾರಣ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ.
ರಸ್ತೆಗಳು ಕಾವೇರಿ ಪ್ರವಾಹದಿಂದ ನದಿಯಂತಾಗಿದೆ. ಒಟ್ಟಿನಲ್ಲಿ ಪಟ್ಟಣದಲ್ಲಿ ನದಿ ಇಲ್ಲದಿದ್ದರೂ ನದಿಯಲ್ಲಿ ಸಾಗಿದ ಅನುಭವವಾಗುತ್ತಿದೆ ಎಂದು ವಾಹನ ಚಾಲಕರು ಅವಲತ್ತುಕೊಂಡಿದ್ದಾರೆ.