ಪಟ್ಟಣ ವ್ಯಾಪ್ತಿಯಲ್ಲಿ ಅಧ್ವಾನಗೊಂಡ ರಸ್ತೆಯಿಂದಾಗಿ ಜನರು ಹೈರಾಣಾಗಿದ್ದು, ಪಾದಾಚಾರಿಗಳು, ಪ್ರಯಾಣಿಕರು, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ. 
ಕೊಡಗು

ಗುಂಡಿಬಿದ್ದ ರಸ್ತೆಯಲ್ಲಿ ಸಂಚಾರ ಸರ್ಕಸ್

ಪ್ರಮುಖ ಮುಖ್ಯಾಂಶಗಳು

  • ನಾಪೋಕ್ಲು ಪಟ್ಟಣದಲ್ಲಿ ಸಾರ್ವಜನಿಕರ ಪರದಾಟ
  • ಪಾದಚಾರಿಗಳಿಗೆ ಕೆಸರಿನ ಮಜ್ಜನ
ನಾಪೋಕ್ಲು : ಪಟ್ಟಣ ವ್ಯಾಪ್ತಿಯಲ್ಲಿ ಅಧ್ವಾನಗೊಂಡ ರಸ್ತೆಯಿಂದಾಗಿ ಜನರು ಹೈರಾಣಾಗಿದ್ದು, ಪಾದಾಚಾರಿಗಳು, ಪ್ರಯಾಣಿಕರು, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣ ಸೇರಿದಂತೆ ಇಲ್ಲಿನ ಬೇತು ರಸ್ತೆ, ಹಳೇ ತಾಲೂಕು ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು ಸಂಚಾರ ದುಸ್ತರವಾಗಿದೆ. ಮಳೆಗಾಲಕ್ಕೂ ಮುನ್ನ ಅಧ್ವಾನಗೊಂಡ ರಸ್ತೆಗಳ ದುರಸ್ತಿಯಾಗಲಿದೆ ಎಂಬ ಆಶಾಭಾವನೆಯಿಂದ ಸವಾರರು ಸಂಚರಿಸುತ್ತಿದ್ದರು. ಆದರೆ, ಈಗ ಜನಪ್ರತಿನಿಧಿಗಳ ಭರವಸೆ ಭರವಸೆಯಾಗೇ ಉಳಿದಿದ್ದು, ಮಳೆ ಸುರಿಯುತ್ತಿರುವ ಪರಿಣಾಮ ಹೊಂಡಗಳಲ್ಲಿ ನೀರು ನಿಲ್ಲುತ್ತಿದೆ. ಪರಿಣಾಮ ವಾಹನ ಚಾಲಕರು ಹರಸಾಹಸ ಪಡುವಂತಾಗಿದೆ.
ಇತ್ತ ಪಾದಚಾರಿಗಳು ಕೆಸರಿನ ಸಿಂಚನದಲ್ಲಿ ತೆರಳುವಂತಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಗಾಯಗೊಂಡಿರುವ ಹಲವು ನಿದರ್ಶನ ಇವೆ.