ನಿರ್ವಹಣೆ ಕೊರತೆಯಿಂದ ಹದಗೆಟ್ಟಿರುವ ಭಾಗಮಂಡಲ-ನಾಪೋಕ್ಲು ರಸ್ತೆ
ಮಳೆಗಾಲ ಸಾಮಾನ್ಯವಾಗಿ ಜೂನ್‌ನಲ್ಲಿ ಶುರುವಾಗುವುದು ವಾಡಿಕೆ. ಹಾಗಾಗಿ ಕೊಡಗಿನಲ್ಲಿ ಏಪ್ರಿಲ್ ಅಂತ್ಯ ಮತ್ತು ಮೇ ತಿಂಗಳಿನಲ್ಲಿ ವಿವಿಧ ಇಲಾಖೆಗಳು ಮಳೆಗಾಲಕ್ಕೆ ಸಂಬAಧಿಸಿದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಈ ವರ್ಷ ಪ್ರಾಕೃತಿಕ ವಿಕೋಪ, ಪ್ರವಾಹಗಳನ್ನು ಎದುರಿಸಲು ನಡೆಸಿದ ರೀತಿಯ ಸಿದ್ಧತೆ ಮಳೆಗಾಲದ ಸಾಮಾನ್ಯ ಸಮಸ್ಯೆಗಳನ್ನು ಎದುರಿಸಲು ಯಾವ ಇಲಾಖೆಗಳೂ ಮಾಡಿಕೊಳ್ಳಲಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಮಳೆಗಾಲ ಆರಂಭಕ್ಕೂ ಮೊದಲು ರಸ್ತೆ ಬದಿಯಲ್ಲಿನ ಚರಂಡಿಗಳ ನಿರ್ವಹಣೆ, ಹೊಸ ಚರಂಡಿಗಳ ನಿರ್ಮಾಣ, ರಸ್ತೆಗೆ ಬಾಗಿಕೊಂಡಿರುವ ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸುವುದು, ದುರ್ಬಲ ಮರಗಳನ್ನು ಗುರುತಿಸಿ ತೆರವು ಮಾಡುವುದು ಮತ್ತಿತರ ಕೆಲಸಗಳನ್ನು ಮಾಡುವ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಆದರೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈ ಬಾರಿ ಅಂಥ ಯಾವುದೇ ಕೆಲಸ ನಡೆದಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಕಳೆದ ವಾರದ ಸಾಧಾರಣ ಮಳೆಗೆ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ರಸ್ತೆ ಮೇಲೆ ಬೀಳುವುದು ಸಾಮಾನ್ಯವಾಗಿತ್ತು. ವಿರಾಜಪೇಟೆ ಬಳಿ ಸ್ಕೂಟರ್ ಚಾಲಿಸುತ್ತಿದ್ದ ಮಹಿಳೆಯೊಬ್ಬರ ಮೇಲೆಯೇ ಮರ ಬಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಐಕೊಳ ಬಳಿ ಮಾರುತಿ ಓಮ್ನಿ ಮೇಲೆ ರಸ್ತೆ ಬದಿಯ ಮರ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ವಿದ್ಯುತ್ ಕಡಿತದÀ ಸಮಸ್ಯೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಂಡು ಬರುತ್ತಿತ್ತು. ರಸ್ತೆಗಳ ಪರಿಸ್ಥಿತಿಯಂತೂ ವಾಹನ ಚಾಲಕರು ಹಿಡಿಶಾಪ ಹಾಕಿಕೊಂಡು ತಿರುಗಾಡುವಂತಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
"
ಮಳೆಗಾಲ ಆರಂಭವಾಗುತ್ತಿದ್ದAತೆಯೇ ವಿದ್ಯುತ್ ವ್ಯತ್ಯಯ, ರಸ್ತೆಗಳ ಮೇಲೆ ಮರಗಳು ಉರುಳಿ ಬೀಳುವುದು ಹಾಗೂ ಗುಂಡಿಗಳಿAದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದು ಮಳೆಗಾಲದ ಪೂರ್ವಸಿದ್ಧತೆಯ ಕೊರತೆಯನ್ನು ತೋರಿಸುತ್ತದೆ. ಮಳೆ ಆರಂಭಕ್ಕೂ ಮುನ್ನ ಅಪಾಯಕಾರಿಯಾದ ಮರಗಳ ತೆರವು, ವಿದ್ಯುತ್ ಜಾಲದ ನಿರ್ವಹಣೆ ಮತ್ತು ರಸ್ತೆ ದುರಸ್ತಿ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕಿತ್ತು. ಜನಸಾಮಾನ್ಯರು ಪ್ರತಿವರ್ಷ ಇದೇ ಸಮಸ್ಯೆಗಳನ್ನು ಎದುರಿಸಬೇಕಾಗಿರುವುದು ಸಂಬAಧಪಟ್ಟ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಸಮನ್ವಯದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ತೊಂದರೆಯಾಗದAತೆ ಅಧಿಕಾರಿಗಳು ಕ್ರಮವಹಿಸಬೇಕು.
— ಅಫ್ಸಲ್, ಸಿದ್ದಾಪುರ ನಿವಾಸಿ
"
ರಸ್ತೆ ಬದಿಗಳಲ್ಲಿ ಅಪಾಯ ತಂದೊಡ್ಡುವ ಮರಗಳನ್ನು ಕಡಿಯದೆ ಭೂಮಿಗೆ ಮಳೆ ಬಿದ್ದ ತಕ್ಷಣ ಮಣ್ಣು ಸಡಿಲಗೊಂಡು ಇಂತಹ ಮರಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಬಿದ್ದು ಅಪಾರ ಹಾನಿಯನ್ನು ಮಾಡುತ್ತದೆ. ಬೇಸಿಗೆಯಲ್ಲಿ ರಸ್ತೆಗಳ ಸಂಪೂರ್ಣ ದುರಸ್ತಿಗೊಳಿಸದೆ ಮಳೆ ಬಂದೊಡನೆ ರಸ್ತೆಯ ಗುಂಡಿಗಳು ನೀರು ತುಂಬಿ ಕೆರೆಗಳಂತಾಗುತ್ತವೆ. ಇದೆಲ್ಲವೂ ಸಂಬAಧಪಟ್ಟ ಇಲಾಖೆ ಹಾಗೂ ಸಾರ್ವಜನಿಕರಿಗೆ ನೇರವಾಗಿ ತಿಳಿದಿರುವ ವಿಚಾರ. ಹಾಗಿದ್ದರೂ ಈ ವರ್ಷವಂತೂ ವಿಪರೀತ ವಿದ್ಯುತ್ ಸಮಸ್ಯೆಯಿಂದ ಜನ ಬೇಸತ್ತಿರುವುದು ನಿಜ. ವಾಹನ ಸವಾರರು ರಸ್ತೆಗಿಳಿಯುವುದೇ ಅಪಾಯಕರವೆನಿಸುತ್ತಿದೆ. ಸದ್ಯ ಮಳೆ ತುಸು ಬಿಡುವು ನೀಡಿದ್ದು ಸಂಬAಧ ಪಟ್ಟ ಇಲಾಖೆಗಳು ಬೇಗನೆ ಎಚ್ಚೆತ್ತುಕೊಂಡಲ್ಲಿ ಸಮಸ್ಯೆಗಳಿಗೆ ತುಸು ಪರಿಹಾರ ಸಿಗಬಹುದು.
— ಕೇಕಡ ಸತೀಶ, ಪ್ರಗತಿಪರ ಕೃಷಿಕ, ಕೊಟ್ಟೂರು
"
ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇದ್ದರೂ ಕಳೆದ ವಾರ ಸುರಿದ ಭಾರಿ ಮಳೆಗೆ ಹಲವು ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಎರಡರಿಂದ ಮೂರು ದಿನಗಳವರೆಗೆ ಇಲ್ಲದಂತಾಗಿತ್ತು. ಇನ್ನು ಕೆಲವು ಕಡೆ ವಾಹನಗಳ ಮೇಲೆ ಹಾಗೂ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ಥವಾಗಿತ್ತು. ಮಳೆಗಾಲ ಆರಂಭಕ್ಕೂ ಮುನ್ನ ಇಲಾಖೆಗಳು ಅಪಾಯಕಾರಿ ಮರಗಳ ತೆರವು ಕಾರ್ಯ ಮಾಡದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಇಲಾಖೆಗಳ ನಿರ್ಲಕ್ಷö್ಯ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಿದೆ.
— ಬಿ.ವಿ. ನವ್ಯಶ್ರೀ, ರಾಮನಗರ, ವಿರಾಜಪೇಟೆ
"
ಮಳೆಗಾಲಕ್ಕೆ ಮೊದಲು ರಸ್ತೆ ಬದಿಯ ಚರಂಡಿ ದುರಸ್ತಿ, ರಸ್ತೆಗೆ ಬಾಗಿಕೊಂಡಿರುವ ಮರಗಳ ರೆಂಬೆ ಕತ್ತರಿಸುವುದು, ವಿದ್ಯುತ್ ಮಾರ್ಗಗಳ ದುರಸ್ತಿ ಹೀಗೆ ಸಿದ್ಧತಾ ಕೆಲಸಗಳನ್ನು ಮಾಡಿಕೊಳ್ಳಬೇಕು. ಆದರೆ ಈ ಯಾವುದೇ ಕೆಲಸವನ್ನು ಸಂಬAಧಿಸಿದ ಇಲಾಖೆಗಳು ಮಾಡಲೇ ಇಲ್ಲ. ಮಳೆ ಶುರುವಾಗಲು ತಡವಾದಾಗಾಲೂ ಎಚ್ಚೆತ್ತುಕೊಂಡು ನಿರ್ವಹಣಾ ಕಾಮಗಾರಿಗಳನ್ನು ನಡೆಸಬೇಕಿತ್ತು. ರಸ್ತೆ ಬದಿಯ ಚರಂಡಿಗಳಲ್ಲಿ ಶುಚಿಗೊಳಿಸದ ಕಾರಣ ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದೆ. ಇದರಿಂದ ಈಗ ರಸ್ತೆಯೇ ಹಾಳಾಗುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಇದಕ್ಕೆ ಸಾಕ್ಷಿ ಹೇಳುತ್ತಿದೆ.
— ಶ್ರೀನಾಥ್ ನಾಯಕ್, ರಿಕ್ಷಾ ಚಾಲಕ, ಭಾಗಮಂಡಲ
"
ಕೊಡಗಿನಲ್ಲಿ ಮಳೆಗಾಲ ಹೇಗಿರುತ್ತದೆ ಎನ್ನುವುದು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗೊತ್ತಿರುತ್ತದೆ. ಈ ವರ್ಷವೇನೋ ಮಳೆ ಕಡಿಮೆ ಇದೆ. ಆದರೆ ಪ್ರವಾಹ, ಪ್ರಾಕೃತಿಕ ವಿಕೋಪ ಎದುರಿಸಲು ನಡೆಸಿದ ಸಿದ್ಧತೆ ಸಾಮಾನ್ಯ ಮಳೆಗಾಲಕ್ಕೆ ಮಾಡಿಕೊಳ್ಳಲೇ ಇಲ್ಲ. ಇದರ ಪರಿಣಾಮ ಈಗ ಜಿಲ್ಲೆಯ ಜನತೆ ಎದುರಿಸಬೇಕಾಗಿದೆ. ಕಳೆದ ವಾರದ ಸಾಧಾರಣ ಮಳೆಗೇ ವಿದ್ಯುತ್ ಕಡಿತ ಎದುರಿಸಬೇಕಾಯಿತು. ರಸ್ತೆಗಳು ಈಗಾಗಲೇ ಹಾಳಾಗಿ ಹೋಗಿವೆ.
— ಗುಡ್ಡೇರ ತೇಜ ಸತೀಶ್, ಮುಕ್ಕೋಡ್ಲು ಗ್ರಾಮ
"
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವ ರಸ್ತೆಗಳನ್ನು ಗುರುತಿಸಿ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಕಳೆದ ನಾಲ್ಕು ವರ್ಷಗಳಿಂದ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಮಳೆಗಾಲದ ಸಂದರ್ಭ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
— ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ