ವಿರಾಜಪೇಟೆ: ನಗರದ ಎಫ್.ಎಂ.ಸಿ. ರಸ್ತೆಯ ಗಣೇಶ್ ವೈನ್ಸ್ ಮತ್ತು ಇತಿಹಾಸ ಪ್ರಸಿದ್ಧ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿ 
ಕೊಡಗು

ದೇಗುಲ, ಮದ್ಯದಂಗಡಿಯಲ್ಲಿ ಕಳ್ಳತನ

ವಿರಾಜಪೇಟೆ: ನಗರದ ಎಫ್.ಎಂ.ಸಿ. ರಸ್ತೆಯ ಗಣೇಶ್ ವೈನ್ಸ್ ಮತ್ತು ಇತಿಹಾಸ ಪ್ರಸಿದ್ಧ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಮುಖ್ಯ ರಸ್ತೆಯ ವೈನ್ ಶಾಪ್ ಬೀಗ ಮುರಿದು ಒಳಹೊಕ್ಕ ಕಳ್ಳ 8000 ನಗದು ಹಾಗೂ ಎರಡು ಮದ್ಯದ ಬಾಟಲ್ ಕಳವು ಮಾಡಿದ್ದಾನೆ.

ನಂತರ ಜೈನರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯ ಬೀಗ ಮುರಿದು ಹಣ ಕಳವು ಮಾಡಿದ್ದಾನೆ. ಅರ್ಚಕರು ನೋಡಿದಾಗ ಬೀಗ ಮುರಿದು ಕಳ್ಳತನವಾಗಿರುವುದು ಕಂಡು ಬಂದಿದೆ. ಸ್ಥಳಕ್ಕೆ ಬೆರಳಚ್ಚು ಹಾಗೂ ವಿಧಿ ವಿಜ್ಞಾನ ಕೇಂದ್ರದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮದ್ಯದಂಗಡಿ ಗುತ್ತಿಗೆ ಪಡೆದಿರುವ ಟಿ.ಟಿ. ಕಾವೇರಪ್ಪ ಅವರು ಕಳ್ಳತನ ಬಗ್ಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ವಿರಾಜಪೇಟೆ ನಗರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.