ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬೋಜೇಗೌಡ, ಸುಭಾಷ್, ಉಮೇಶ್ ಇದ್ದರು.
- ದೆಹಲಿಯಲ್ಲಿ ಈಚೆಗೆ ನಡೆದ ಬಾಂಬ್ ಸ್ಪೋಟ ಖಂಡಿಸಿ
ಸೋಮವಾರಪೇಟೆ: ದೆಹಲಿಯಲ್ಲಿ ಈಚೆಗೆ ನಡೆದ ಬಾಂಬ್ ಸ್ಪೋಟ ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ಪುಟ್ಟಪ್ಪ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ಜಿಲ್ಲಾ ಸಂಯೋಜಕ ಬೊಜೇಗೌಡ ಮಾತನಾಡಿ, ಒಂದು ಕೋಮಿನ ಪುರುಷರಿಂದ ನಡೆಯುತ್ತಿದ್ದ ಭಯೋತ್ಪಾದನೆ ಇಂದು ವಿದ್ಯಾವಂತ ಅದೇ ಕೋಮಿನ ಮಹಿಳೆಯಿಂದಲೂ ಆಗುತ್ತಿದೆ. ಇದು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಲವ್ ಜಿಹಾದ್ ಮೂಲಕ ಹಿಂದು ಸಮಾಜವನ್ನು ಒಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜಿಹಾದಿ ಮನಸ್ಥಿತಿಯ ಜನರಿಂದ ಭಯೋತ್ಪಾದನೆ ಹುಟ್ಟುಹಾಕಲಾಗುತ್ತಿದೆ ಎಂದು ದೂರಿದರು.
ದೇಶದಲ್ಲಿ ಭಯೋತ್ಪಾಧನೆಯನ್ನು ಮಟ್ಟ ಹಾಕುವ ಕೆಲಸ ನಮ್ಮಿಂದ ಆಗಬೇಕು. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ದೇಶದ ಎಲ್ಲೆಡೆ ನೆಲೆಯೂರಿದ್ದಾರೆ. ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರಂತೆ, ದೇಶದೊಳಗಿನ ಭಯೋತ್ಪಾದಕರನ್ನು ಮಟ್ಟ ಹಾಕುವ ಕೆಲಸ ಪೊಲೀಸರಿಂದಾಗಬೇಕು. ತಪ್ಪಿದಲ್ಲಿ ಪ್ರಜ್ಞಾವಂತ ನಾಗರಿಕರು ಸೇರಿ ಭಯೋತ್ಪಾದಕರ ಮಟ್ಟ ಹಾಕುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಭಾಷ್ ತಿಮ್ಮಯ್ಯ, ತಾಲೂಕು ಸಂಯೋಜಕ ಎಂ.ಬಿ. ಉಮೇಶ್ ಇದ್ದರು.