ರೈತರು ರಸಗೊಬ್ಬರ ಖರೀದಿಸಬೇಕಾದರೆ ಎಫ್‌ಐಡಿ ಹೊಂದಿರುವುದನ್ನು ಸರ್ಕಾರ ಕಡ್ಡಾಯ ಮಾಡಿದೆ.  
ಕೊಡಗು

ರಸಗೊಬ್ಬರದ ಮೇಲೂ ಯುದ್ಧದ ಕಾರ್ಮೋಡ

ಸುನಿಲ್ ಪೊನ್ನೇಟಿ
ಮಡಿಕೇರಿ:
ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ ರಸಗೊಬ್ಬರದ ಮೇಲೂ ಬಿದ್ದಿದೆ. ಹಾಗಾಗಿ ರಸಗೊಬ್ಬರ ವಿತರಣೆ ಮೇಲೆ ವಿಶೇಷ ನಿಗಾ ಇರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇನ್ನು ಮುಂದೆ ರೈತರು ರಸಗೊಬ್ಬರ ಖರೀದಿಸಬೇಕಾದರೆ ಎಫ್‌ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಇಷ್ಟು ಮಾತ್ರವಲ್ಲದೆ ರೈತರ ಭೂಮಿ ಎಫ್‌ಐಡಿಗೆ ಜೋಡಿಸಿದ್ದರೆ ಮಾತ್ರ ಕೆ. ಕಿಸಾನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ.
ಕೃಷಿಗೆ ಅಗತ್ಯವಿರುವ ರಸಗೊಬ್ಬರ ತಯಾರಿಕೆಗೆ ಕಚ್ಚಾ ಸಾಮಗ್ರಿ ವಿದೇಶದಿಂದಲೇ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಯುದ್ಧದಿಂದ ರಸಗೊಬ್ಬರ ತಯಾರಿಕೆ ಕಚ್ಚಾ ಸಾಮಗ್ರಿಯ ಆಮದಿನಲ್ಲಿ ಭಾರಿ ಸಮಸ್ಯೆಯಾಗಿದೆ. ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದ್ದು ರಸಗೊಬ್ಬರ ವಿತರಣೆಯ ಮೇಲೆ ವಿಶೇಷ ನಿಗಾ ಇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ರೈತರು ರಸಗೊಬ್ಬರ ಖರೀದಿಗೆ ಸಂಬAಧಿಸಿದAತೆ ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡಬೇಕು ಎಂದಾದರೆ ಮೊದಲು ಎಫ್‌ಐಡಿ ಹೊಂದುವುದನ್ನು ಕಡ್ಡಾಯ ಮಾಡಲಾಗಿದೆ. ಅದಾದ ನಂತರ ಎಫ್‌ಐಡಿಗೆ ರೈತರು ತಮ್ಮ ಭೂಮಿಯನ್ನು ಕಡ್ಡಾಯವಾಗಿ ಜೋಡಿಸಬೇಕಿದೆ. ಇದರ ಆಧಾರದ ಮೇಲೆ ಹಾಕಿದ ಬೆಳೆಗಳಿಗೆ ರಸಗೊಬ್ಬರವನ್ನು ರೈತರಿಗೆ ಕೆ. ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುವುದು ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ದಂಧೆ ಮಾಡುತ್ತಿರುವುದಕ್ಕೆ ಬ್ರೇಕ್ ಹಾಕುವುದು ಮತ್ತು ರೈತರು ಸಹ ಮಿತವ್ಯಯದಿಂದ ರಸಗೊಬ್ಬರ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕಾಗಿ ಕೆ. ಕಿಸಾನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ರೈತರ ಭೂಮಿ, ಹಾಕಿದ ಬೆಳೆಯ ಆಧಾರದಲ್ಲಿ ಬೇಕಾಗುವ ಪ್ರಮಾಣದ ರಸಗೊಬ್ಬರ ಮಾತ್ರ ಕೆ. ಕಿಸಾನ್ ತಂತ್ರಜ್ಞಾನದ ಮೂಲಕವೇ ರೈತರಿಗೆ ರಸಗೊಬ್ಬರ ವಿತರಣೆ ಆಗಲಿದೆ.
ರೈತರು ಈಗಾಗಲೇ ಎಫ್‌ಐಡಿ ಹೊಂದಿದ್ದಲ್ಲಿ ಅಥವಾ ಹೊಂದಿರದೇ ಇದ್ದಲ್ಲಿ ತಮ್ಮ ಎಲ್ಲಾ ಪಹಣಿ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಸಮೀಪದ ರೈತ ಸಂಪರ್ಕ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಬೇಕು. ಎಫ್‌ಐಡಿ ಹೊಂದಿದ್ದಲ್ಲಿ ಎಲ್ಲಾ ಸರ್ವೆ ನಂಬರ್ ಆ ಎಫ್‌ಐಡಿಗೆ ಲಿಂಕ್ ಮಾಡಿಸಿಕೊಳ್ಳಲು ಮತ್ತು ಎಫ್‌ಐಡಿ ಹೊಂದಿರದೆ ಇದ್ದಲ್ಲಿ ಹೊಸದಾಗಿ ಎಫ್‌ಐಡಿ ಸೃಜಿಸಿಕೊಳ್ಳಬೇಕು ಇದಕ್ಕಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬೇಕಾಗುತ್ತದೆ.
ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾAಶದ ಮೂಲಕ ರೈತರ ಎಫ್‌ಐಡಿ ನಮೂದಿಸಿ ಮಾರಾಟ ಮಾಡಬೇಕು ಎನ್ನುವ ಸೂಚನೆ ನೀಡಲಾಗಿದೆ. ರಸಗೊಬ್ಬರ ಮಾರಾಟಗಾರರು ತಮ್ಮ ಎಲ್ಲಾ ಒ ಫಾರಂ ನವೀಕರಣಗೊಳಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಮಾರಾಟ ಮಾಡಿದಲ್ಲಿ ಹಾಗೂ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬAದಲ್ಲಿ ಪರವಾನಗಿ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ರಸಗೊಬ್ಬರ ಮಾರಾಟದ ಮೇಲೆ ನಿಯಂತ್ರಣ ಹೇರುವುದಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್ ಸಹ ಮಾಡಲಾಗಿದೆ. ಪ್ರತಿಯೊಂದರ ವಹಿವಾಟಿನ ಮೇಲೂ ಮೇಲೆಯೂ ನಿಗಾ ಇರಿಸಲಾಗುತ್ತದೆ. ವಿತರಣೆಯಾದ ರಸಗೊಬ್ಬರ ಯಾರಿಗೆ ವಿತರಣೆಯಾಗಿದೆ ಮತ್ತು ಬಳಕೆಯಾಗಿದೆ ಎನ್ನುವುದನ್ನು ಪರಾಮರ್ಶೆ ಮಾಡಲಾಗುತ್ತದೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯವಾಗಿದೆ.
"

ರೈತರು ರಸಗೊಬ್ಬರ ಪಡೆಯಲು ಎಫ್‌ಐಡಿ ಕಡ್ಡಾಯವಾಗಿ ಹೊಂದಿರಬೇಕು. ಈಗಾಗಲೇ ಮಾಡಿಸಿಕೊಂಡಿದ್ದರೆ ಸರಿ, ಇಲ್ಲದಿದ್ದರೆ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು. ರೈತರ ಎಲ್ಲ ಭೂಮಿಯ ಪಹಣಿಯನ್ನು ಸಹ ಎಫ್‌ಐಡಿಗೆ ಜೋಡಿಸುವುದು ಕಡ್ಡಾಯ. ಇದರ ಆಧಾರದಲ್ಲೇ ರಸಗೊಬ್ಬರವನ್ನು ಕೆ. ಕಿಸಾನ್ ತಂತ್ರಜ್ಞಾನದ ಮೂಲಕ ವಿತರಣೆ ಮಾಡಲಾಗುತ್ತದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುವ ರಸಗೊಬ್ಬರ ವಿತರಣೆಯಾಗಿರುವ ದೃಢೀಕರಣವನ್ನಾಧರಿಸಿ ರಾಜ್ಯಕ್ಕೆ ಹಂತಹAತವಾಗಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಎಫ್‌ಐಡಿ ಕಡ್ಡಾಯ ಮಾಡಿ ಆದೇಶ ನೀಡಿದೆ.