ತಲಕಾವೇರಿಗೆ ಆಗಮಿಸಿದ್ದ ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀ ಪಾದರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. 
ಕೊಡಗು

ತಲಕಾವೇರಿಗೆ ಅದಮಾರು ಮಠದ ಶ್ರೀ ಭೇಟಿ

ಮಡಿಕೇರಿ:
ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲಕ್ಕೆ ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀ ಪಾದರು ಮಂಗಳವಾರ ಭೇಟಿ ನೀಡಿದ್ದರು. ತಮ್ಮ ಶಿಷ್ಯರೊಂದಿಗೆ ಆಗಮಿಸಿದ್ದ ಶ್ರೀಗಳು ಎರಡೂ ಕ್ಷೇತ್ರಗಳಲ್ಲೂ ತೀರ್ಥ ಸ್ನಾನ ಮಾಡಿದರು. ನಂತರ ಶ್ರೀ ಕ್ಷೇತ್ರ ತಲಕಾವೇರಿಯ ಅರ್ಚಕ ಪ್ರಶಾಂತ್ ಆಚಾರ್ ಮನೆಯಲ್ಲಿ ತಮ್ಮ ಪಟ್ಟದ ದೇವರ ಪೂಜೆ ನೆರವೇರಿಸಿದರು.
ಶ್ರೀ ಭಂಡೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನದಲ್ಲಿ ಶ್ರೀಗಳನ್ನು ದೇವಾಲಯದ ಅರ್ಚಕರಾದ ಹರೀಶ್ ಪುನೀಚಿತ್ತಾಯ, ವಿಕ್ರಂ ಭಟ್, ಸತೀಶ್ ಭಟ್ ಪೂರ್ಣಕುಂಭದೊAದಿಗೆ ಸ್ವಾಗತಿಸಿದರು. ಪ್ರಮುಖರಾದ ಎಸ್.ಎಸ್. ಸಂಪತ್ ಕುಮಾರ್, ಪ್ರಶಾಂತ್ ಆಚಾರ್, ಪುರುಷೋತ್ತಮ್ ಭಟ್, ಸುಧಾಕರ್ ಭಟ್ ಮತ್ತಿತರರು ಈ ಸಂದರ್ಭ ಇದ್ದರು.