ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಅಪ್ಪಚ್ಚು ರಂಜನ್, ವಿ.ಪಿ.ಶಶಿಧರ್, ಎಂ.ಎಚ್.ನಜೀರ್‌ಅಹಮದ್, ಹಂಡ್ರಂಗಿ ನಾಗರಾಜು ,ಪ್ರದೀಪ್‌ಕುಮಾರ್ ಇತರರಿದ್ದರು. 
ಕೊಡಗು

ಭಾರತೀಯ ಸೈನಿಕರ ಪರಾಕ್ರಮ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಪುಲ್ವಾಮದಲ್ಲಿ ಹುತಾತ್ಮರಾದ ಸೈನಿಕರಿಗೆ
  • ಕೊಡಗು ಜಿಲ್ಲಾ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟ
ಕುಶಾಲನಗರ: ಪುಲ್ವಾಮದಲ್ಲಿ ಹುತಾತ್ಮರಾದ ಸೈನಿಕರಿಗೆ ಕೊಡಗು ಜಿಲ್ಲಾ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಲ್ಲಿನ ಎಪಿಸಿಎಂಎಸ್ ಸುವರ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಗ್ರನ ಸಂಚಿಗೆ ಬಲಿಯಾದ 40 ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಪುಲ್ವಾಮ ಘಟನೆ ಬಳಿಕ 250 ಉಗ್ರರನ್ನು ಸದೆಬಡಿದು ಭಾರತೀಯ ಸೈನಿಕರ ಪರಾಕ್ರಮ ತೋರಿಸಿರುವುದು ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆ ಎಂದರು.
ಗ್ಯಾರಂಟಿ ಯೋಜನೆಗಳ ಸಮಿತಿಯ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಭದ್ರತೆ ಹಾಗೂ ಸುರಕ್ಷತೆ ವಿಚಾರದಲ್ಲಿ ದೇಶದ ಗಡಿಗಳನ್ನು ಕಾಯುವ ಸೈನಿಕರ ಸೇವೆ ಹಾಗೂ ತ್ಯಾಗ ಅನನ್ಯವಾದುದು. ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮ ಸಾರ್ವಜನಿಕರಿಂದ ನಡೆಯುವಂತಾಗಬೇಕು ಎಂದು ಆಶಿಸಿದರು.
ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ದೇಶ ಸೇವೆಗಾಗಿ ತಮ್ಮ ಇಡೀ ಬದುಕು ಹಾಗೂ ಭವಿಷ್ಯವನ್ನು ಪಣಕ್ಕಿಡುವ ಯೋಧರ ಸೇವೆಗೆ ಬೆಲೆ ಕಟ್ಟಲಾಗದು ಎಂದರು.
ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಮಾತನಾಡಿ, ದೇಶ ಸೇವೆಯಲ್ಲಿ ಕೃಷಿಕ, ಸೈನಿಕ ಹಾಗೂ ಶಿಕ್ಷಕನ ಪಾತ್ರ ಅಪಾರವಾದುದು ಎಂದು ಹೇಳಿದರು.
ಕುಶಾಲನಗರದ ಹಿರಿಯ ನಾಗರಿಕ ಎಂ.ಎಚ್.ನಜೀರ್ ಅಹಮದ್, ವೃತ್ತ ನಿರೀಕ್ಷಕ ಪ್ರದೀಪ್‌ಕುಮಾರ್ ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಬಿ.ರಾಜು ಸೈನಿಕರ ಕುರಿತು ಹಾಡು ಹಾಡಿದರು.
ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಮಹೇಶ್ ಅಮೀನ್ ವಂದೇ ಮಾತರಂ ಗೀತೆ ಹಾಡಿದರು. ಕೊಡಗು ಜಿಲ್ಲಾ ಅರೆಸೇನಾಪಡೆಯ ನಿವೃತ್ತ ಯೋಧರ ಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ಉಪಾಧ್ಯಕ್ಷ ಪುಲಿಯಂಡ ಚೆಂಗಪ್ಪ, ಕಾರ್ಯದರ್ಶಿಗಳಾದ ಎಂ.ಎನ್.ರವೀಂದ್ರ, ಬಿ.ಎನ್.ರಾಜಶೇಖರ, ಸಂಚಾಲಕ ನೂರೇರಾ ಭೀಮಯ್ಯ, ಜಿ.ಕೆ.ದಿನೇಶಕುಮಾರ್, ಪುಟ್ಟೇಗೌಡ, ಹರೀಶ್‌ಕುಮಾರ್‌ಗೌಡ ಇದ್ದರು.
ಸಭೆ ಬಳಿಕ ಕುಶಾಲನಗರದ ಕಾರು ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಹಿರಿಯ ನಿವಾಸಿ ಜಿ.ಎಲ್.ನಾಗರಾಜು ಹಾಗೂ ಹರಪಳ್ಳಿ ರವೀಂದ್ರ ಚಾಲನೆ ನೀಡಿರು.