ಬೈರಂಬಾಡದ ಹಾಲುಗುಂದ ಫಾರ್ಮರ್ಸ್ ಫ್ಯಾಮಿಲಿ ಕ್ಲಬ್‌ನಲ್ಲಿ ನಡೆದ 13ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಪಂದಿಕAಡ ದಿನೇಶ್ ಕುಶ ಉದ್ಘಾಟಿಸಿದರು. ಮೇಕೇರಿರ ರಘು ನಾಣಯ್ಯ, ನಾಪಂಡ ಸಿ. ಗಣೇಶ್, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ ಮತ್ತಿತರರು ಇದ್ದರು. 
ಕೊಡಗು

ಕೊಡವ, ಕೊಡವ ಭಾಷಿಕರು ಸಂಘಟಿತರಾದರೆ ಕೊಡವಾಮೆಯ ಉಳಿವು

ಮಡಿಕೇರಿ:
ಸಮಾಜದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ಬದಲಾವಣೆಗಳು ಕೊಡವಾಮೆಯನ್ನು ಲೀನಗೊಳಿಸುವುದರ ವಿರುದ್ಧ ಕೊಡವ ಹಾಗೂ ಕೊಡವ ಭಾಷಿಕರ ಸಂಘಟಿತವಾದ ನಡೆ ಮೂಲಕ ಕೊಡವಾಮೆಯನ್ನು ಉಳಿಸಲು ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಬೈರಂಬಾಡದ ಹಾಲುಗುಂದ ಫಾರ್ಮರ್ಸ್ ಫ್ಯಾಮಿಲಿ ಕ್ಲಬ್‌ನಲ್ಲಿ ಸೋಮವಾರ ನಡೆದ 13ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗತಿಕವಾದ ಬದಲಾವಣೆಯ ಇಂದಿನ ದಿನಮಾನಸದಲ್ಲಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳ ಪಾರಂಪರ್ಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂಘಟಿತರಾಗಿ ಮುನ್ನಡೆಯಬೇಕಿದೆ. ಕೊಡವಾಮೆಯನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸಂಘ-ಸAಸ್ಥೆ, ಸಮಾಜಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಜಿವಂತಿಕೆಯಿAದಷ್ಟೆ ಜನಾಂಗವನ್ನು ಗುರುತಿಸಿಕೊಳ್ಳಲು ಸಾಧ್ಯವಿದ್ದು ಇನ್ನುಳಿದಂತೆ ಎಲ್ಲವೂ ವೈಯಕ್ತಿಕವಾದದ್ದಾಗಿದೆ.
ಕ್ಲಬ್ ಸಂಸ್ಕೃತಿಯಿAದ ಪುಸ್ತಕ ಸಂಸ್ಕೃತಿಯೆಡೆಗೆ ಪ್ರತಿಯೊಬ್ಬರೂ ಮುಖಮಾಡಿದಾಗ ಮಾತ್ರ ಅನಾದಿಕಾಲದಿಂದ ಬಳುವಳಿಯಾಗಿ ಬಂದಿರುವ ಬಾಳೋಪಾಟ್, ಪುತ್ತರಿಪಾಟ್, ಮಂಗಲಪಾಟ್‌ನAತಹ ಜನಪದ ಹಾಡುಗಳಿಗೆ ಮತ್ತಷ್ಟು ಜೀವ ತುಂಬಿಸಿದAತಾಗುವುದು. ಪ್ರತಿಯೊಂದು ಸಂಘ-ಸAಸ್ಥೆ, ಸಮಾಜ, ಕ್ಲಬ್, ಅಸೋಸಿಯೇಶನ್‌ಗಳು ಕೊಡವ ಪದ್ಧತಿ, ಸಂಸ್ಕೃತಿಯನ್ನು ಕಲಿಸುವ ಕೇಂದ್ರಗಳಾಗಬೇಕೆAಬ ಉದ್ದೇಶದಿಂದ ಕೊಡವ ಪುಸ್ತಕ ಪತ್ತಾಯದಂತಹ ಯೋಜನೆಯನ್ನು ರೂಪಿಸಲಾಗಿದೆ. ಇಂತಹ ಕೇಂದ್ರಗಳಲ್ಲಿ ತಿಳಿದವರು ತಿಳಿದಿಲ್ಲದವರಿಗೆ ಕೊಡವ ಪಾಟ್, ಪಡಿಪು, ಪದ್ಧತಿಗಳನ್ನು ಕಲಿಸುವಂತಾಗಬೇಕು ಎಂದರು.
ಪುಸ್ತಕ ಪತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಪಂದಿಕAಡ ದಿನೇಶ್ ಕುಶ, ಹಾಲುಗುಂದ ಗ್ರಾಮ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಇಲ್ಲಿ ಹಲವು ಕೊಡವ ಭಾಷಿಕರು ಅನ್ಯೋನ್ಯತೆಯಿಂದ ಜೀವಿಸುತ್ತಿದ್ದಾರೆ. ಎಲ್ಲರ ಅನುಕೂಲ ಹಾಗೂ ಕಷ್ಟ-ಸುಖದಲ್ಲಿ ಪಾಲ್ಗೊಳ್ಳುವಂತಾಗಲು ಫ್ಯಾಮಿಲಿ ಕ್ಲಬ್ ಸ್ಥಾಪಿಸಲಾಗಿದೆ. ಸುಮಾರು 90 ಸಂಸಾರಗಳು ಕ್ಲಬ್‌ನ ಸದಸ್ಯರಾಗಿರುತ್ತಾರೆ. ಹಾಲುಗುಂದದಲ್ಲಿ ಒಟ್ಟು ಏಳು ದೇವತೆಗಳು ಅನಾದಿಕಾಲದಿಂದಲೇ ನೆಲೆ ನಿಂತಿದ್ದು ಗ್ರಾಮದ ಸಮಸ್ತ ಕುಟುಂಬದವರ ಸಹಯೋಗದಿಂದ ಹಬ್ಬಾಚರಣೆಗಳು ನಡೆಯುತ್ತಿದೆ. ಅದರಂತೆ ಕ್ಲಬ್ ವತಿಯಿಂದ ಕೊಡವ ಸಂಸ್ಕೃತಿಯ ಏಳಿಗೆಗೆ ದುಡಿಯುತ್ತಿದೆ ಎಂದು ಹೇಳಿದರು.
ಪುಸ್ತಕ ಪತ್ತಾಯ ಅನಾವರಣಗೊಳಿಸಿ ಮಾತನಾಡಿದ ಊರು ತಕ್ಕ ಮೇಕೇರಿರ ರಘು ನಾಣಯ್ಯ, ಹಾಲುಗುಂದ ಗ್ರಾಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪುಸ್ತಕ ಪತ್ತಾಯ ತೆರೆದಿರುವುದು ಅತ್ಯಂತ ಹೆಮ್ಮೆಯ ವಿಚಾರ. ಇದರಿಂದ ಗ್ರಾಮದಲ್ಲಿ ಕೊಡವ ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳ ಪರಿಜ್ಞಾನ ಮೊಳಗಿ, ಮುಂದಿನ ದಿನಗಳಲ್ಲಿ ಕೊಡವ ಪದ್ಧತಿ, ಸಂಸ್ಕೃತಿಯ ಬೆಳವಣಿಗೆಗೆ ಮಾರ್ಗದರ್ಶನ ನೀಡಿದಂತಾಗಿದೆ ಎಂದರು.
ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಜ್ಜಿನಿಕಂಡ ಮಹೇಶ್ ನಾಚಯ್ಯರವರ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯ ವಿವಿಧೆೆಗಳಲ್ಲಿ ನಡೆದ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸ್ಮರಿಸಿಕೊಳ್ಳುವಂತಿದೆ ಎಂದು ಹೇಳಿದರು.
ಈ ವೇಳೆ ಮಹೇಶ್ ನಾಚಯ್ಯ ಅವರು ಫ್ಯಾಮಿಲಿ ಕ್ಲಬ್ ಅಧ್ಯಕ್ಷ ದಿನೇಶ್ ಕುಶರಿಗೆ ಅಕಾಡೆಮಿ ವತಿಯಿಂದ ಪುಸ್ತಕ ಪತ್ತಾಯದ ನೋಂದಣಿ ಪತ್ರ ಹಸ್ತಾಂತರಿಸಿದರು.
ಅಕಾಡೆಮಿ ಸದಸ್ಯರಾದ ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್, ಫ್ಯಾಮಿಲಿ ಕ್ಲಬ್ ಕಾರ್ಯಾಧ್ಯಕ್ಷ ಚೆಯ್ಯಂಡ ಭರತ್, ಉಪಾಧ್ಯಕ್ಷ ಅಪ್ಪಾರಂಡ ಸುಧೀರ್, ಕಾರ್ಯದರ್ಶಿ ಪೊಟ್ಟಂಡ ನಾಣಯ್ಯ, ಪಂದಿಕAಡ ಪ್ರಿಯಾ ಸೋಮಣ್ಣ, ಮಚ್ಚೇಟಿರ ಅರುಣ್ ಮತ್ತಿತರರು ಇದ್ದರು.