ಸಂಪಾಜೆ ಗ್ರಾಮದಲ್ಲಿ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಳ ವಿಜೃಂಭಣೆಯಿಂದ ನಡೆಯಿತು.  
ಕೊಡಗು

ವಿಜೃಂಭಣೆಯ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಳ

ಪ್ರಮುಖ ಮುಖ್ಯಾಂಶಗಳು

  • ಸಂಪಾಜೆ ಗ್ರಾಮ
  • ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಳ
ನಾಪೋಕ್ಲು: ಸಂಪಾಜೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಳ, ಪಂಜುರ್ಲಿ ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಕೊನೆ ಕಡಿಯುವುದು, ದೈವಸ್ಥಾನದಲ್ಲಿ ಗಣಹೋಮ, ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, ಮೇಲೇರಿಗೆ ಅಗ್ನಿಸ್ಪರ್ಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೋಲ ಆರಂಭಗೊಂಡಿತು. ಅರಂತೋಡುಸ್ವರಲಯ ಸಿಂಗಾರಿ ಮೇಳ ತಂಡದಿಂದ ಚಂಡೆ ವಾದ್ಯ ನಡೆಯಿತು.
ರಾತ್ರಿ ದೈವದ ಕುಲ್ಪಾಟ ನಡೆಯಿತು. ಭಾನುವಾರ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ಬಳಿಕ ಪ್ರಸಾದ ವಿತರಣೆ ನೆರವೇರಿತು. ಪೂರ್ವಾಹ್ನ ಮಾರಿಕಳ ಪ್ರವೇಶ, ಮಾರಿಕಳದಿಂದ ಬಂದ ನಂತರ ಹರಕೆಯ ಸುರುಗಿಗಳನ್ನು ಒಪ್ಪಿಸುವುದು, ಪ್ರಸಾದ ವಿತರಣೆ ನಡೆಯಿತು.
ದೈವಸ್ಥಾನದ ಗೌರವಾಧ್ಯಕ್ಷ ರಾಜರಾಮ ಕೀಲಾರು, ಅದೀಪ ಕೃಷ್ಣ ,ಮಹಾವಿಷ್ಣು ದೈವಸ್ಥಾನದ ಅಧ್ಯಕ್ಷ ಕೆ.ಆರ್.ಜಗದೀಶ್ ರೈ, ಮುಕ್ತೇಸರ ಕರುಣಾಕರ, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಕೋಶಾಧಿಕಾರಿ ಬಿ.ಆರ್.ಪದ್ಮಯ್ಯ, ಗೌರವ ಸಲಹೆಗಾರರಾದ ಶ್ರೀಧರ ಮಾದೆಪಾಲು, ಉದಯ ಶಂಕರ ಕುಕ್ಕೆಟಿ, ಜಯಾನಂದ ಸಂಪಾದಿ, ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕಡೆಪಾಲ, ವಿ.ವಿ.ಬಾಲನ್,ದೈವಸ್ಥಾನದ ಪ್ರಧಾನ ಪೂಜಾರಿ ನಾರಾಯಣ ಮಣಿಯಾಣಿ, ಉಪ ಪೂಜಾರಿ ಕುಂಜಿ ರಾಮನ್ ಮಣಿಯಾಣಿ, ಕಚೇರಿ ನಿರ್ವಾಹಕ ಬಿ. ಶಿವರಾಮ ಇತರರಿದ್ದರು.
30-ಎನ್ ಪಿ ಕೆ-1.
ಸಂಪಾಜೆ ಗ್ರಾಮದಲ್ಲಿ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಳ ವಿಜೃಂಭಣೆಯಿಂದ ನಡೆಯಿತು.
30-ಎನ್ ಪಿ ಕೆ-2.
ಮಹಾವಿಷ್ಣುಮೂರ್ತಿ ದೈವದ ಕುಲ್ಪಾಟ.