ಸೋಮವಾರಪೇಟೆ ಸಮೀಪದ ಸಾಂದೀಪಿನಿ ಶಾಲೆಯಲ್ಲಿ ನಡೆದ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಉದ್ಘಾಟಿಸಿದರು. ರಮೇಶ್, ವಿಜೇತ್, ಜ್ಯೋತಿ ಇದ್ದರು. 
ಕೊಡಗು

ಜನಪದ ಸಂಸ್ಕೃತಿಗೆ ಜಿಲ್ಲೆಯ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • folk culture
ಸೋಮವಾರಪೇಟೆ: ಕೊಡಗು ಜಿಲ್ಲೆಯ ಜನಪದ ಕಲೆಗಳು ಅದರ ಶ್ರೀಮಂತ ಸಂಸ್ಕೃತಿ, ವೀರ ಪರಂಪರೆ ಹಾಗೂ ಪ್ರಕೃತಿಯೊಂದಿಗಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂದೀಪಿನಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಸಾಂದೀಪನಿ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ಡಿ.ಜೆ. ಪದ್ಮನಾಭ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಡಗಿನ ಜನಪದ ಕಲೆಗಳ ಕುರಿತು ಅವರು ಉಪನ್ಯಾಸ ನೀಡಿದರು.
ಕೊಡಗು ಜಿಲ್ಲೆಯ ಜನಪದ ಸಂಸಕ್ಕತಿ ಅನೇಕ ಪೀಳಿಗೆಗಳಿಂದ ಬೆಳೆದು ಬಂದಿರುವ ಮಹತ್ವದ ಪರಂಪರೆಯಾಗಿದೆ. ಇಲ್ಲಿ ವಿವಿಧ ಜನಾಂಗಗಳು ತಮ್ಮದೇ ಆದ ಜನಪದ ಹಾಡುಗಳು, ನೃತ್ಯಗಳು ಮತ್ತು ಆಚರಣೆಗಳ ಮೂಲಕ ಈ ಸಂಸಕ್ಕತಿಯನ್ನು ಸಮೃದ್ಧಗೊಳಿಸುತ್ತಿವೆ. ಬೋಳಕಾಟ್, ಕೋಲಾಟ್, ಉಮ್ಮತಾಟ್ ಮತ್ತು ಕತ್ತಿ ಆಟ್ ಕೊಡಗಿನ ಪ್ರಮುಖ ಜನಪದ ನೃತ್ಯ ಪ್ರಕಾರಗಳಾಗಿವೆ ಎಂದು ಹೇಳಿದರು.
ಕೊಡಗಿನ ಜನಪದ ಲೋಕದಲ್ಲಿ ಹಾಡುಗಳಿಗೆ ಕೂಡ ವಿಶೇಷ ಸ್ಥಾನವಿದೆ. ಸೊಬನೇ ಹಾಡುಗಳು ಕೊಡಗಿನ ಜನಪದ ಪರಂಪರೆಯ ಪ್ರಮುಖ ಭಾಗವಾಗಿದ್ದು, ಹಬ್ಬಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಹಾಗೆಯೇ ಒಕ್ಕಲಿಗ ಜನಾಂಗದ ಸಿಡಿಯಾಟ್, ಸುಗ್ಗಿ ಕುಣಿತ, ಯರವ ಜನಾಂಗದ ಹಾಡುಗಳು ಹಾಗೂ ಕುರುಬ ಸಮುದಾಯದ ನೃತ್ಯಗಳು ಕೊಡಗಿನ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿವೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ ವಿವಿಧ ದತ್ತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಿದೆ. ಸಾಹಿತ್ಯ, ಸಂಸ್ಕೃತಿ ಮತ್ತು ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಕಾರ್ಯದರ್ಶಿ ಜ್ಯೋತಿ ಅರುಣ್, ಸಾಂದೀಪಿನಿ ಪ್ರೌಢಶಾಲೆಯ ವ್ಯವಸ್ಥಾಪಕಿ ಹರಿಣಿ, ಪ್ರಭಾರ ಮುಖ್ಯೋಪಾಧ್ಯಾಯಿನಿ ಮಹದೇವಮ್ಮ, ತಾಲೂಕು ಕಾರ್ಯದರ್ಶಿ ಎ.ಪಿ. ವೀರರಾಜ್, ಖಜಾಂಚಿ ಕೆ.ಪಿ. ದಿನೇಶ್, ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಸಂಘಟನಾ ಕಾರ್ಯದರ್ಶಿ ವಸಂತಿ ರವೀಂದ್ರ ಸೇರಿದಂತೆ ಹಲವು ಗಣ್ಯರು ಇದ್ದರು.