ವಿರಾಜಪೇಟೆಯಲ್ಲಿ ಕಟ್ಟಡ ಸಾಮಗ್ರಿಗಳ ನೂತನ ಮಳಿಗೆಯನ್ನು ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ವಾಟೇರಿರ ಬೋಪಣ್ಣ ಉದ್ಘಾಟಿಸಿದರು. ಕಂಜಿತಂಡ ಮಂದಣ್ಣ, ಕೊಕ್ಕಂಡ ಎ.ಬಿದ್ದಪ್ಪ, ಚೇನಂಡ ಈ.ಗೀರಿಶ್ ಪೂಣಚ್ಚ, ಮೂಕೊಂಡ ಪಿ.ಸುಬ್ರಮಣಿ, ಅಂಜಪರವಂಡ ಅನೀಲ್ ಮಂದಣ್ಣ, ಕೂತಂಡ ಸಚೀನ್ ಕುಟ್ಟಯ್ಯ, ಪುಲಿಯಂಡ ಎ.ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ, ಪುಟ್ಟಿಚಂಡ ವೀಣಾ ಮಹೇಶ್, ಕೆ.ಆರ್. ವಿನೋದ್ ಇದ್ದರು. 
ಕೊಡಗು

ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳಕ್ಕೆ 8 ಸಾವಿರಕ್ಕೂ ಹೆಚ್ಚು ಸದಸ್ಯತ್ವ

ವಿರಾಜಪೇಟೆ: ಸಹಕಾರ ವಲಯದಲ್ಲಿ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸಿರುವ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಷನ್) ಸಂಸ್ಥೆಯು ತನ್ನ ಗ್ರಾಹಕರಿಗೆ ಉತ್ಕೃಷ್ಟ ಬೆಲೆಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕಟ್ಟಡ ಸಾಮಗ್ರಿಗಳ ಮಳಿಗೆಗಳನ್ನು ಗಣ್ಯರ ಸಮ್ಮುಖದಲ್ಲಿ ಇತ್ತೀಚೆಗೆ ಲೋಕಾರ್ಪಣೆ ಮಾಡಲಾಯಿತು.
ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ಅಧ್ಯಕ್ಷ ವಾಟೇರಿರ ಬೋಪಣ್ಣ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಸಂಸ್ಥೆಯು ತನ್ನ 75 ವರ್ಷಗಳನ್ನು ಪೂರೈಸಿದೆ. ಕೊಡಗು ಜಿಲ್ಲಾದ್ಯಂತ ಸುಮಾರು 8000 ಸದಸ್ಯರನ್ನು ಹೊಂದಿದೆ. ಸಂಸ್ಥೆಯು ಗ್ರಾಹಕರಿಗೆ ಕೃಷಿ ಪರಿಕರಗಳು ಹಾಗೂ ಗೊಬ್ಬರ, ಹತ್ಯಾರು ವಿಭಾಗಗಳ ಮಳಿಗೆಗಳನ್ನು ಆರಂಭಿಸಿ ಉತ್ತಮ ಮಾದರಿಯಲ್ಲಿ ತನ್ನ ವ್ಯವಹಾರಗಳನ್ನು ಮಾಡುತ್ತಾ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಫೆಡರೇಷನ್ ಬ್ರಾೃಂಡ್ ಅಕ್ಕಿಯನ್ನು ಸಾರ್ವಜನಿಕವಾಗಿ ಪರಿಚಯಿಸಿ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರಿಗೆ ಸಂಸ್ಥೆಯ ನಿರ್ದೇಶಕರ ಸಲಹೆಯಂತೆ ಮನೆ ಮತ್ತು ಕಟ್ಟಡ ನಿರ್ಮಾಣ ಮಾಡಲು ಉತ್ತಮ ದರ್ಜೆಯ ಗುಣಮಟ್ಟದ ಸಾಮಗ್ರಿಗಳನ್ನು ಒಂದೇ ಸೂರಿನಲ್ಲಿ ಗ್ರಾಹರಿಕೆ ನೀಡಲು ಉದ್ದೇಶಿಸಲಾಗಿದ್ದು. ಇದೀಗ ಉದ್ಘಾಟನೆಗೊಂಡು ಕನಸು ಸಹಕಾರಗೊಂಡಿದೆ. ಗ್ರಾಹಕರು ಸದುಪಯೋಗ ಪಡಿಸಿಕೊಂಡು ಸಂಸ್ಥೆಯ ಏಳಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಸ್ಥೆಯ ಹಿರಿಯ ನಿರ್ದೇಶಕ ಮುಲ್ಲೆಯಂಗಡ ಎಂ.ಕುಟ್ಟಪ್ಪ ಮಾತನಾಡಿ, ಸಂಸ್ಥೆಯು ಕೃಷಿಕರಿಗೆ ಸಹಕಾರಿಯಾಗಲು ಕೃಷಿಯೇತರ ಸಾಮಗ್ರಿಗಳನ್ನು ಒದಗಿಸುತ್ತಾ ತನ್ನ ಕಾರ್ಯ ವ್ಯಾಪ್ತಿಯನ್ನು ವೃದ್ಧಿಸಿದೆ. ಆಧುನಿಕತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ವಿವಿಧ ಕ್ಷೇತ್ರದಲ್ಲಿ ತನ್ನ ಸೇವೆ ಮಾಡಲು ಮುಂದಾಗಿ ಇದೀಗ ಬಹು ನಿರೀಕ್ಷಿತ ಕಟ್ಟಡ ಸಾಮಗ್ರಿಗಳ ಮಳಿಗೆಯನ್ನು ಆರಂಭಿಸಿ ಉತ್ತಮ ಸೇವೆಗೆ ಸಜ್ಜುಗೊಂಡಿದೆ. ಗ್ರಾಹಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ತಾತಂಡ ಎಂ.ಕಾವೇರಪ್ಪ, ನಿರ್ದೇಶಕರಾದ ಕಂಜಿತಂಡ ಮಂದಣ್ಣ, ಕೊಕ್ಕಂಡ ಎ.ಬಿದ್ದಪ್ಪ, ಚೇನಂಡ ಈ.ಗೀರಿಶ್ ಪೂಣಚ್ಚ, ಮೂಕೊಂಡ ಪಿ.ಸುಬ್ರಮಣಿ, ಅಂಜಪರವಂಡ ಅನಿಲ್ ಮಂದಣ್ಣ, ಕೂತಂಡ ಸಚೀನ್ ಕುಟ್ಟಯ್ಯ, ಪುಲಿಯಂಡ ಎ.ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ, ಪುಟ್ಟಿಚಂಡ ವೀಣಾ ಮಹೇಶ್, ಕೆ.ಆರ್.ವಿನೋದ್ ಮತ್ತು ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಎಂ.ಚಂದ್ರಕಾಂತ್ ಹಾಗೂ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.