ಶ್ರೀ ಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ 7ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಮತ್ತು ರಾಧಾ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ದಾಸಂಡ ರಮೇಶ್, ಶಿವಪ್ಪ, ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ, ರಾಮಚಂದ್ರ, ಪ್ರಕಾಶ್, ಚೇತನ್, ಸತೀಶ್, ಸಿಜು, ರವಿ, ಚಂದ್ರ ಇತರರು ಇದ್ದರು.  
ಕೊಡಗು

ಕೃಷ್ಣ, ರಾಧೆ ವೇಷದಲ್ಲಿ ಮಿಂಚಿದ ಚಿಣ್ಣರು

ಸುಂಟಿಕೊಪ್ಪ : ಶ್ರೀ ಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ 7ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ 7ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಾಮಿ ಮತ್ತು 3ನೇ ವರ್ಷದ ಕೃಷ್ಣ ಮತ್ತು ರಾಧಾ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು.
ಕೃಷ್ಣ ಜನ್ಮಾಷ್ಟಾಮಿ ಅಂಗವಾಗಿ ಗಣಪತಿ ಹಾಗೂ ಗೋಪಾಲ ಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕರಾದ ನರಸಿಂಹ ಉಪದ್ಯಾಯ ನೇತೃತ್ವದಲ್ಲಿ ಪ್ರಸನ್ನ ಭಟ್ ಮತ್ತು ಸಂತೋಷ್ ಹೆಬ್ಬಾರ್ ಅವರು ಹೋಮ-ಹವನ ಹಾಗೂ ಧಾರ್ಮಿಕ ಕಾರ್ಯ ನೆರವೇರಿಸಿದರು.
5 ವರ್ಷದೊಳಗಿನ ಮತ್ತು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧಾ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ನಿಧಿಯಾ ಸಂದಿಪ್, ಈತಿಕ್ಷ ಮತ್ತು ಜ್ಞಾನವಿಕ ಪಟೇಲ್ ಮೊದಲ 3 ಸ್ಥಾನಗಳಿಗೆ ಭಜನರಾದರು. 5 ವರ್ಷ ಮೇಲ್ಪಟ್ಟ ಮಕ್ಕಳ ಸ್ಪರ್ಧೆಯಲ್ಲಿ ಪ್ರತಿಕ್ಷಾ ಪೂಜಾರಿ, ಆರಾಧ್ಯಾ ಮತ್ತು ದಿಕ್ಷಾ ಮೊದಲ 3 ಸ್ಥಾನಗಳಿಗೆ ಭಾಜನರಾದರು. ಸ್ಪರ್ಧೆ ತೀರ್ಪುಗಾರರಾಗಿ ಕವಿತಾ ಪ್ರಭಾಕರ್, ರಾಮಚಂದ್ರ ಮತ್ತು ಬಿ.ಸಿ.ದಿನೇಶ್ ನಿರ್ವಹಿಸಿದರು. ಸ್ಪರ್ಧೆಗೆ 2 ವಿಭಾಗಗಳಿಂದ 46 ಮಕ್ಕಳು ಸ್ಪರ್ಧಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ಮತ್ತು ಗೋಪಾಲಕೃಷ್ಣ ದೇವಸ್ಥಾನದ ಸಮಿತಿಯ ಅಧ್ಯಕ್ಷ ದಾಸಂಡ ರಮೇಶ್, ಕಾರ್ಯದರ್ಶಿ ಶಿವಪ್ಪ ಕಾರ್ಯಕ್ರಮದ ಆಯೋಜಕ ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ, ರಾಮಚಂದ್ರ, ಪ್ರಕಾಶ್, ಚೇತನ್, ಸತೀಶ್, ಸಿಜು, ರವಿ, ಚಂದ್ರ ಇತರರು ಇದ್ದರು.