ಗುರುಪೂರ್ಣಿಮೆ ಅಂಗವಾಗಿ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಭಿಕರು. 
ಕೊಡಗು

ದೇಶ, ಧರ್ಮದ ಮೇಲಾಗುತ್ತಿರುವ ಆಘಾತಗಳು ಗಡಿಗೆ ಸೀಮಿತವಾಗಿಲ್ಲ

ಕುಶಾಲನಗರ:
ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅವು ನೇರವಾಗಿ ನಮ್ಮ ಮನೆಬಾಗಿಲಿಗೆ ಬಂದು ತಲುಪಿವೆ ಎಂದು ಜನಜಾಗೃತಿ ಸಮಿತಿಯ ಪ್ರಮುಖರಾದ ಗುರುರಾಜ್ ಹೇಳಿದರು. ಗುರುಪೂರ್ಣಿಮೆ ಅಂಗವಾಗಿ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ ಎಂಬ ವಿಷಯದ ಕುರಿತು ಮಾತನಾಡಿದರು.
ಷಡ್ಯಂತ್ರಗಳ ಮಾಧ್ಯಮದಿಂದ ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದೆ. ಇದರ ಮೂಲಕ ದೇಶದ ಭೂ-ರಾಜಕೀಯ ನಕ್ಷೆ ಮತ್ತು ಜನಸಂಖ್ಯಾ ಸ್ಫೋಟದ ಗಣಿತವನ್ನು ಬದಲಾಯಿಸುವ ಭೀಕರ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ.
ಹಿಂದೂ ಸಮಾಜ ತನ್ನ ಸಾಮರ್ಥ್ಯ ಮತ್ತು ಶತ್ರುವಿನ ಗುಪ್ತ ರಣ ನೀತಿ ಜಾಗೃತಗೊಳಿಸದ ಹೊರತು, ಈ ಎಲ್ಲಾ ದಿಕ್ಕುಗಳಿಂದ ಆಗುತ್ತಿರುವ ಆಘಾತಗಳನ್ನು ಪ್ರತಿರೋಧಿಸುವುದು ಅಸಾಧ್ಯ. ಆದ್ದರಿಂದ ಹಿಂದೂಗಳು ಕೇವಲ ಮೂಕ ಪ್ರೇಕ್ಷಕರಾಗಿರದೆ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಕ್ರಿಯವಾಗಿ ಮುಂದಾಗಬೇಕು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ 64 ಸ್ಥಳಗಳಲ್ಲಿ ಗುರು ಪೂರ್ಣಿಮಾ ಮಹೋತ್ಸವಗಳನ್ನು ಆಯೋಜನೆ ಮಾಡಲಾಗಿದೆ. ಮುಂಬರುವ ವಿಶ್ವಯುದ್ಧ ಮತ್ತು ತುರ್ತು ಪರಿಸ್ಥಿತಿಯ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಸಮಿತಿಯ ವತಿಯಿಂದ ಹಿಂದೂಗಳಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಾಮಕ ಮತ್ತು ಸ್ವ ರಕ್ಷಣಾ ತರಬೇತಿಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ ಎಂದರು.
ಪ್ರಮುಖರಾದ ಚಂದನ ಉಪಾಧ್ಯಾಯ ಮಾತನಾಡಿ ಧರ್ಮದಲ್ಲಿ ತಿಳಿಸಲಾದ ಅನುಷ್ಠಾನಗಳನ್ನು ಹಾಗೂ ಧರ್ಮದ ಕಾರ್ಯಗಳನ್ನು ಪೂರೈಸಲು ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಭಗವಂತನ ವಿವಿಧ ಅಂಗಾAಗಗಳಿAದ ಉದ್ಭವಿಸಿದ ವರ್ಣಗಳು ಪರಸ್ಪರ ಸಮಾನವಾಗಿವೆ. ಆದರೆ ಹಿಂದೂಗಳನ್ನು ಒಡೆಯುವ ಉದ್ದೇಶದಿಂದ ಬ್ರಿಟಿಷರು ಜಾತಿಭೇದವನ್ನು ಸೃಷ್ಟಿಸಿದರು ಎಂದರು.
ಶ್ರೀ ವ್ಯಾಸಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ, ಸ್ವರಕ್ಷಣೆಯ ಸುಲಭ ಪದ್ಧತಿಗಳ ಪ್ರತ್ಯಕ್ಷ ಪ್ರದರ್ಶನ ಹಾಗೂ ಸಮಿತಿಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯವನ್ನಾಧರಿಸಿದ ಕಿರುಚಿತ್ರ ಇದೇ ವೇಳೆ ಪ್ರದರ್ಶಿಸಲಾಯಿತು. ವಿವಿಧ ವಿಷಯಗಳ ಮೇಲಿನ ಗ್ರಂಥ-ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮ ವಿಷಯದ ಫಲಕ-ಪ್ರದರ್ಶನ ಏರ್ಪಡಿಸಲಾಗಿತ್ತು.