ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ 136ನೇ ಜಯಂತಿ ಅಂಗವಾಗಿ ಹೊಸಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಸಹಾರ ತಂಡಕ್ಕೆ ಗಣ್ಯರು ಟ್ರೋಫಿ ಹಸ್ತಾಂತರಿಸಿದರು. ಸಿ.ಎಲ್. ವಿಶ್ವ, ಆರ್.ಕೆ. ಚಂದ್ರು, ಮುರಳಿ ಮಾದಯ್ಯ ಮತ್ತಿತರರು ಇದ್ದರು. 
ಕೊಡಗು

ಟೀಂ ಸಹರಾ ಚಾಂಪಿಯನ್

ಸುನಿಲ್ ಪೊನ್ನೇಟಿ
ಕುಶಾಲನಗರ:
ಕ್ರೀಡಾಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಫೂರ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ನಂಜರಾಯಪಟ್ಟಣ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎಲ್. ವಿಶ್ವ ಹೇಳಿದರು. ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ 136ನೇ ಜಯಂತಿ ಅಂಗವಾಗಿ ಹೊಸಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಗ್ರಾಮ ಮೊದಲಿನಿಂದಲೂ ಸಾಮರಸ್ಯದ ಕ್ರೀಡೆಗಳಿಗೆ ಹೆಸರುವಾಸಿ ಎಂದು ಇದೇ ವೇಳೆ ಹೇಳಿದರು. ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಆರ್.ಕೆ. ಚಂದ್ರು ಮಾತನಾಡಿ, ಗ್ರಾಮದ ಯುವಕರನ್ನು ಒಗ್ಗೂಡಿಸಿ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ, ಪಿಯುಸಿ ವಿದ್ಯಾರ್ಥಿಗಳಿಗೆ ಕೂಡ ಕ್ರೀಡಾಕೂಟ ಆಯೋಜಿಸುವ ಚಿಂತನೆಯಿದೆ ಎಂದು ತಿಳಿಸಿದರು.
ನಂಜರಾಯಪಟ್ಟಣ ಸಹಕಾರ ಸಂಘದ ಅಧ್ಯಕ್ಷ ಮುರಳಿ ಮಾದಯ್ಯ ಮಾತನಾಡಿದರು. ಒಟ್ಟು 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಟೀಂ ಸಹಾರ ಮತ್ತು ಕರೆಂಟ್ ಶಾಕರ್ಸ್ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಬಿಲಾಲ್ ಮತ್ತು ಸುಮೇರ್ ಮಾಲೀಕತ್ವದ ಸಹಾರ ತಂಡ ಪ್ರಥಮ, ಕರೆಂಟ್ ಶಾಕರ್ಸ್ ದ್ವಿತೀಯ, ವೈಲ್ಡ್ ಕ್ಯಾಟ್ ತಂಡ ತೃತೀಯ, ರೈಸಿಂಗ್ ಸ್ಟಾರ್ ನಾಲ್ಕನೇ ಬಹುಮಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಕ್ಷಿತ್ ಮಾವಜಿ, ಜೈ ಭೀಮ್ ಬ್ರದರ್ಸ್ನ ಅರುಣೇಶ್, ನಿತನ್, ಯೋಗೇಶ ಮನೋಜ್, ಪ್ರತಾಪ್, ಅನುಪಮಾ, ಪದ್ಮಿನಿ, ರಕ್ಷಿತ್, ಇರ್ಷಾದ್, ಮಂಜು, ಉದಯಕುಮಾರ್, ಬಿಲಾಲ್, ಕಬೀರ್, ನಡುಮನೆ ಚಿಂತು, ಮನೇಶ್, ಮ್ಯಾಥ್ಯು, ಮೋಹನ್ ಮತ್ತಿತರರು ಇದ್ದರು. ವಿಜೇಶ್ ಮತ್ತು ಅಜಯ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.