ಶನಿವಾರಸಂತೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಚ ನೀಡಿ ಶಿಕ್ಷಕರು ಸ್ವಾಗತಿಸಿದರು. 
ಕೊಡಗು

ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಶಿಕ್ಷಕರು

ಶನಿವಾರಸಂತೆ: ಬೇಸಿಗೆ ರಜೆ ಮುಗಿಸಿ ಸೋಮವಾರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಶನಿವಾರಸಂತೆ ಕ್ಲಸ್ಟರ್ ವ್ಯಾಪ್ತಿಯಲ್ಲಿ 5 ಸರ್ಕಾರಿ ಶಾಲೆಗಳು, 2 ಅನುದಾನಿತ ಹಾಗೂ 6 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 12 ಶಾಲೆಗಳಿವೆ. ಸೋಮವಾರದಿಂದ ತರಗತಿಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಮಕ್ಕಳು ಶಾಲೆಗೆ ಆಗಮಿಸಿದಾಗ ಶಿಕ್ಷಕರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಶನಿವಾರಸಂತೆ ಸರ್ಕಾರಿ ಶಾಲೆಗೆ ಈ ವರ್ಷ 40 ಮಕ್ಕಳು ದಾಖಲಾಗಿರುವ ಮೂಲಕ ಸದರಿ ಶಾಲೆಯ ದಾಖಲಾತಿ 200 ಗಡಿ ದಾಟಿದೆ. ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಸೇರಿದಂತೆ ಕ್ಷೀರ ಭಾಗ್ಯ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮ ಸೋಮವಾರದಿಂದಲೇ ಪ್ರಾರಂಭವಾಗಿದೆ.