ಸುಂಟಿಕೊಪ್ಪದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ ೨ ದಿನಗಳ ತರಬೇತಿ ಕಾರ್ಯಕ್ರಮವನ್ನು ಶೇಖರ್ ಉದ್ಘಾಟಿಸಿದರು. ಸುಮನ್ ಮ್ಯಾಥ್ಯೂ, ನೀತು, ಷಡಕ್ಷರಿ ಇತರರಿದ್ದರು.
- ಶಿಕ್ಷಕರ ತರಬೇತಿ ಕಾರ್ಯಗಾರಕ್ಕೆ ಚಾಲನೆ
ಮಡಿಕೇರಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ನಾವು ಪ್ರತಿಷ್ಠಾನ ಸಂಸ್ಥೆ ಕೊಡಗು ಸಹಯೋಗದಲ್ಲಿ ಸುಂಟಿಕೊಪ್ಪದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ ೨ ದಿನಗಳ ತರಬೇತಿ ಕಾರ್ಯಕ್ರಮವನ್ನು ಸಂವಿಧಾನ ಪ್ರಸ್ತಾವನೆ ಓದುವ ಮೂಲಕ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್ ಮಾತನಾಡಿ, ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಲು ವಿದ್ಯಾರ್ಥಿಗಳ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನಾಯಕತ್ವದ ಗುಣಗಳು ಬೆಳೆಸಲು ಸಕ್ರೀಯ ನಾಗರಿಕರನ್ನಾಗಿ ರೂಪಿಸಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಪ್ರಕೃತಿಯೊಂದಿಗೆ ಸಾಮರಸ್ಯ, ಹದಿ ಹರೆಯದ ಗಂಡು ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಯ ಇತರ ೧೭ ವಿಷಯಗಳನ್ನೊಳಗೊಂಡ ಸಮಾಜ ವಿಜ್ಞಾನ ಶಿಕ್ಷಕರ ಮೂಲಕ ೭ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಚಟುವಟಿಕೆಯ ಮೂಲಕ ತಿಳಿಸಲಾಗುತ್ತದೆ. ಈ ವಿಷಯಗಳನ್ನು ಸಿ.ಎಂ.ಸಿ.ಎ(ಚಿಲ್ಟ್ರನ್ ಮುಮೆಂಟ್ ಫಾರ್ ಸಿವಿಕ್ ಅವೆರ್ನೆಸ್) ಸಹಯೋಗದಲ್ಲಿ ತಯಾರಿಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಯೋಜಕರಾದ ನೀತು, ಶಾಲೆಯ ಪ್ರಾಂಶುಪಾಲರಾದ ಷಡಕ್ಷರಿ, ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ತರಬೇತುದಾರರಾದ ಅನಿತಾ ಮತ್ತು ಜಿಲ್ಲೆಯ ಎಲ್ಲಾ ಸಮಾಜ ಶಿಕ್ಷಕರು ಮತ್ತು ನಾವು ಸಂಸ್ಥೆಯ ಶಿಲ್ಪ, ಸುಬಾನ್ ಉಪಸ್ಥಿತರಿದ್ದರು.