ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ನಂಜನಗೂಡು ಉಪಾಧ್ಯಾಯರ ಸಹಕಾರ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಶಿವಕುಮಾರ್, ಸವರಿಯಪ್ಪ, ಸುರೇಂದ್ರಕುಮಾರ್, ಇಂದ್ರೇಶ್, ದಯಾನಂದ, ಸಿದ್ದೇಶ್, ಲೀಲಾ ಕೆ.ಸುಬ್ಬೆಗೌಡ ಇತರರು ಇದ್ದರು.
ತಾಲೂಕಿನ ಉಪಾಧ್ಯಾಯರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಸುಮಾರು 86 ಲಕ್ಷ ರೂ. ಲಾಭಾಂಶ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.
ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ನಂಜನಗೂಡು ಉಪಾಧ್ಯಾಯರ ಸಹಕಾರ ಸಂಘದ ನಿಯಮಿತ 73ನೇ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿದರು.
ನಂತರ ಮಾತಾನಾಡಿ, 74 ವರ್ಷಗಳಿಂದಲೂ ಎ ಶ್ರೇಣಿಯಲ್ಲಿ ಮುಂದುವರಿದಿರುವ ನಂಜನಗೂಡು ಉಪಾಧ್ಯಾಯರ ಸಹಕಾರ ಸಂಘದಲ್ಲಿ ಈಗ 970 ಸದಸ್ಯರಿದ್ದು, 65 ಪ್ರೌಢಶಾಲಾ ಶಿಕ್ಷಕರು ಸದಸ್ಯರಾಗಿದ್ದಾರೆ. ಪ್ರತಿ ಸದಸ್ಯರಿಗೆ 8 ಲಕ್ಷ ರೂ. ಸಾಲ ನೀಡುವ ಸಹಕಾರ ಸಂಘವಾಗಿ ಬೆಳೆದಿದೆ ಎಂದು ವೆುಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಸತೀಶ್ ದಳವಾಯಿ ಮಾತನಾಡಿ, ರಾಜ್ಯದಲ್ಲಿ ನಮ್ಮ ನಂಜನಗೂಡು ತಾಲೂಕು ಸಹಕಾರ ಸಂಘ ಎಲ್ಲರ ಸಹಕಾರದಿಂದ ಎ ಶ್ರೇಣಿಯಲ್ಲಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಂಘದ ಕಾರ್ಯದರ್ಶಿ ಶಿವಕುಮಾರ್, ನಿರ್ದೇಶಕರಾದ ಸವರಿಯಪ್ಪ, ಸುರೇಂದ್ರಕುಮಾರ್, ಇಂದ್ರೇಶ್, ದಯಾನಂದ, ಸಿದ್ದೇಶ್, ಲೀಲಾ ಕೆ.ಸುಬ್ಬೆಗೌಡ, ಸದಾಶಿವ, ಎಚ್.ಪಿ.ನಾರಾಯಣ, ಜನ್ಮತೀ, ಕೆ.ಬಿ.ಮಂಜುಳಾ ಮಹದೇವಮೂರ್ತಿ, ಕೆ.ನರಸಿಂಹಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗನಾಥನ್, ಕಾರ್ಯದರ್ಶಿ ಕಲ್ಪನಾ, ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಎಚ್.ಎಸ್.ಮಹೇಶ್, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ರಾಜಸ್ವಾಮಿ, ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಧರ್ಮ ರತ್ನಾಕರ, ರಾಜ್ಯ ಪರಿಷತ್ ಸದಸ್ಯ ನೌಕರರ ಸಂಘದ ಹನುಮಂತರಾಜು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರವಿಕುಮಾರ್, ನಾರಾಯಣ, ಗೋಪಿ, ಗಣೇಶ್ ಇತರರು ಇದ್ದರು.