ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪಾಲಕರ ಮತ್ತು ಉಪನ್ಯಾಸಕರ ಮಹಾಸಭೆಯಲ್ಲಿ ಪಿ.ಆರ್.ಸುನಿಲ್‌ಕುಮಾರ್,ಶ್ರೀಲತಾ, ವಿ.ಜಿ.ಲೋಕೇಶ್, ಸುನಿತಾ ಗಿರೀಶ್ ಇದ್ದರು. 
ಕೊಡಗು

ಮಕ್ಕಳಿಗೆ ಜ್ಞಾನದ ಸಂಸ್ಕಾರವನ್ನೂ ಕಲಿಸಿಕೊಡಿ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರಿಗೆ ಪ್ರಾಂಶುಪಾಲೆ ಶ್ರೀಲತಾ ಸಲಹೆ
ಸುಂಟಿಕೊಪ್ಪ: ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಏಕ ಚಿತ್ತದಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು, ನಾಳಿನ ದೇಶದ ಉತ್ತಮ ನಾಗರಿಕರಾಗಲು ವಿದ್ಯಾಥಿಗಳಿಗೆ ಜ್ಞಾನದ ಜತೆಯಲ್ಲಿ ಸಂಸ್ಕಾರವನ್ನು ದೊರಕಿಸಿಕೊಡಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಹೇಳಿದರು.
ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ ಮತ್ತು ಉಪನ್ಯಾಸಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಲ್ಲಿ ಸೂಕ್ತ ಕಲಿಕಾ ವಾತಾವರಣ ಸೃಷ್ಟಿಸಬೇಕು. ಕಾಲೇಜಿಗೆ ವಿದ್ಯಾರ್ಥಿಗಳು ಗೈರಾಗದಂತೆ ಎಚ್ಚರಿಕೆ ವಹಿಸಬೇಕು, ಸಂಸ್ಥೆಯನ್ನು ಜಿಲ್ಲೆಯಲ್ಲಿ ಒಂದು ಮಾದರಿ ಕಾಲೇಜಿಗೆ ರೂಪಿತಗೊಳಿಸಲು ಪೋಷಕರ ಬೆಂಬಲ ತೀರಾ ಅಗತ್ಯ ಎಂದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ರಾಮಬಾಣ. ವಿದ್ಯಾರ್ಥಿಗಳು ಶಿಸ್ತು ಬದ್ಧತೆಯಿಂದ ಕಲಿಕೆಯ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಉಪನ್ಯಾಸಕರಾದ ಸುನಿತಾ ಗಿರೀಶ್, ಈಶಾ, ಕವಿತಾ ಇದ್ದರು.