ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಕೊಡಗು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದಲ್ಲಿ ನಡೆಯಿತು. ಕೆ.ಹೆಚ್. ಅಣ್ಣ ಷರೀಫ್, ಎಂ.ಎ. ಅಬ್ದುಲ್ ರಜಾಕ್, ಖಾದರ್ ಪರಂಗಿಪೇಟೆ, ಅಬೂಬಕ್ಕರ್ ಮದ್ದ, ಅಮೀನ್ ಮೊಹಿಸಿನ್ ಮತ್ತಿತರರು ಇದ್ದರು. 
ಕೊಡಗು

ಎಸ್‌ಡಿಟಿಯು ಪದಾಧಿಕಾರಿಗಳ ಪದಗ್ರಹಣ

ಮಡಿಕೇರಿ:
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಕೊಡಗು ಜಿಲ್ಲಾಧ್ಯಕ್ಷರಾಗಿ ಕೆ.ಹೆಚ್. ಅಣ್ಣ ಷರೀಫ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ. ಅಬ್ದುಲ್ ರಜಾಕ್ ಆಯ್ಕೆಯಾಗಿದ್ದಾರೆ. ಕುಶಾಲನರದಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಮಿಕ ಮಾಹಿತಿ ಶಿಬಿರಕ್ಕೂ ಮೊದಲು ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಇಬ್ರಾಹಿಂ ಹೊಸ ತೋಟ, ಕಾರ್ಯದರ್ಶಿಯಾಗಿ ಅಲಿ ಕೂಡಿಗೆ, ಸದಸ್ಯರಾಗಿ ಅಲ್ತಾಫ್ ಕೊಂಡAಗೇರಿ, ಮೊಹಿದ್ದೀನ್ ಮಡಿಕೇರಿ, ಇಲ್ಯಾಸ್ ಕುಶಾಲನಗರ, ಹಸೀನಾ ಮಡಿಕೇರಿ ಹಾಗೂ ಅಜೀಜ್ ಕುಶಾಲನಗರ ಆಯ್ಕೆಯಾದರು.
ನೂತನ ಜಿಲ್ಲಾ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ ಎಸ್‌ಡಿಟಿಯು ರಾಜ್ಯ ಸಂಚಾಲಕ ಅಥಾವುಲ್ಲ ಜೋಕಟ್ಟೆ ಕಾರ್ಮಿಕರ ಹೋರಾಟ ಮತ್ತು ತ್ಯಾಗದ ಫಲವಾಗಿ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ ಹಾಗೂ ಕಾನೂನು ವಿವಿಧ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿ ಸ್ವಾತಂತ್ರö್ಯ ನಂತರ ಹಲವು ರಾಜಕೀಯ ಪಕ್ಷಗಳು ವಿವಿಧ ಕಾರ್ಮಿಕ ಯೂನಿಯನ್ ಗಳನ್ನು ಹುಟ್ಟು ಹಾಕಿದವು. ಆದರೆ ಇಂದಿಗೂ ಕಾರ್ಮಿಕರು ವಿವಿಧ ರೀತಿಯ ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ.
ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಮನಗಂಡು ದುಡಿಯುವ ಕೈಗಳಿಗೆ ನ್ಯಾಯ ಎಂಬ ಧ್ಯೇಯದೊಂದಿಗೆ ಕಳೆದ 15 ವರ್ಷಗಳ ಹಿಂದೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಅಸ್ತಿತ್ವಕ್ಕೆ ತರಲಾಯಿತು ಎಂದರು.
ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ ಮಾತನಾಡಿ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಮಾಹಿತಿ ನೀಡಿದರು.
ಎಸ್‌ಡಿಟಿಯು ರಾಜ್ಯ ಸಹ ಸಂಚಾಲಕ ಖಾದರ್ ಪರಂಗಿಪೇಟೆ, ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ಎಂ.ಕೆ. ಮನ್ಸೂರ್ ಅಲಿ, ಕುಶಾಲನಗರದ ಮಾಜಿ ಸೈನಿಕÀ ಮೊಹಮ್ಮದ್ ನಬಿ, ಗುತ್ತಿಗೆದಾರÀ ಝಕ್ರಿಯ, ಕಾರ್ಮಿಕರ ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಮತ್ತಿತರರು ಇದ್ದರು.