ಸುಂಟಿಕೊಪ್ಪದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಪೊಲೀಸ್ ವಸತಿಗೃಹಗಳ ಸಮುಚ್ಛಯ 
ಕೊಡಗು

ಸುಂಟಿಕೊಪ್ಪ ಪೊಲೀಸ್ ವಸತಿಗೃಹ ಉದ್ಘಾಟನೆಗೆ ಸಜ್ಜು

ಸುಂಟಿಕೊಪ್ಪ:
ಸುಂಟಿಕೊಪ್ಪದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಬಹಳ ದಿನಗಳ ಬೇಡಿಕೆ ಆಗಿದ್ದ ಸುಸಜ್ಜಿತ ವಸತಿಗೃಹಗಳ ಸಮುಚ್ಛಯ ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಸ್ತುತ ದಿನಗಳ ಅಗತ್ಯತೆಗೆ ಅನುಗುಣವಾಗಿ ನಿರ್ಮಾಣ ಗೊಂಡಿರುವ ವಸತಿ ಗೃಹಗಳಲ್ಲಿ ಎರಡು ಬೆಡ್ ರೂಮ್, ಒಂದು ಹಾಲ್, ಹಾಗೂ ಅಡುಗೆ ಕೋಣೆಗಳು ಇವೆ. ಒಟ್ಟು 12 ವಸತಿಗೃಹಗಳು ಈ ಸಮುಚ್ಛಯದಲ್ಲಿ ನಿರ್ಮಾಣ ಆಗಿದೆ. ಈ ವಸತಿಗೃಹಗಳ ಸಮುಚ್ಛಯ ನಿರ್ಮಾಣಕ್ಕೆ ಕಳೆz ವರ್ಷ ಶಂಕುಸ್ಥಾಪನೆ ನೆರವೇರಿತ್ತು.
ಈ ಹಿಂದಿನ ಬ್ರಿಟಿಷರ ಕಾಲದ ವಸತಿಗೃಹ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಇಲಾಖೆ ನೌಕರರು ಗಾಳಿ ಮಳೆಗೆ ಪರದಾಡುವಂತಾಗಿತ್ತು. ಇದನ್ನು ಮನಗಂಡು ಎರಡು ಕೋಟಿ ರೂ. ವೆಚ್ಚದಲ್ಲಿ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿರುವ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸ್ವಾದೀನದಲ್ಲಿರುವ ಜಾಗದಲ್ಲಿ ನೂತನ ªಸತಿ ಗೃಹಗಳನ್ನು ನಿರ್ಮಿಸಲು 2024ರಲ್ಲಿ ನ.30 ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕೆ. ರಾಮರಾಜನ್ ಶಂಕುಸ್ಥಾಪಣೆ ನೆರವೇರಿಸಿದ್ದರು.
ಸುಂಟಿಕೊಪ್ಪ ಠಾಣೆಯಲ್ಲಿ ಉಪನಿರೀಕ್ಷಕರು, ಸಹಾಯಕ ಉಪನಿರೀಕ್ಷಕರು, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್‌ಗಳು ಸೇರಿದಂತೆ 32 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರ ನೂತನ ವಸತಿಗೃಹದ ಸದುಪಯೋಗ ಪಡೆಯಲಿದ್ದಾರೆ. ಇದರ ಉದ್ಘಾಟಣೆ ಈ ತಿಂಗಳಾAತ್ಯಕ್ಕೆ ನೆರವೇರಲಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಉಳಿದ ಜಾಗದಲ್ಲಿ ವಸತಿ ಗೃಹ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಶಾಕಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.