ಮಡಿಕೇರಿಯ ಪೇಟೆ ಶ್ರೀ ರಾಮಮಂದಿರ ದಸರಾ ಸಮಿತಿಯ 2026-27ನೇ ಸಾಲಿಗೆ ಆಯ್ಕೆ ಆದ ಪದಾಧಿಕಾರಿಗಳು. ಸುನಿಲ್ ಮುತ್ತಪ್ಪ, ಪ್ರಮೋದ್ ಶೆಟ್ಟಿ, ಚೇತನ್ ಪೂಜಾರಿ, ಜಿ.ಜಿ. ವಿಘ್ನೇಶ್, ಹೇಮಂತ್ ಹಾಗೂ ಅಯ್ಯಪ್ಪ ಮತ್ತಿತರರು ಇದ್ದರು.
ಮಡಿಕೇರಿಯ ಪೇಟೆ ಶ್ರೀ ರಾಮಮಂದಿರ ದಸರಾ ಸಮಿತಿಯ 2026-27ನೇ ಸಾಲಿನ ಅಧ್ಯಕ್ಷರಾಗಿ ಸುನಿಲ್ ಮುತ್ತಪ್ಪ ಆಯ್ಕೆ ಆದರು. ಗೌರವ ಅಧ್ಯಕ್ಷ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಜಿ. ವಿಘ್ನೇಶ್, ಖಜಾಂಚಿಗಳಾಗಿ ಹೇಮಂತ್ ಹಾಗೂ ಅಯ್ಯಪ್ಪ ಇವರುಗಳು ಆಯ್ಕೆ ಮಾಡಲಾಯಿತು.
ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದು, ಶ್ರೀ ರಾಮನ ಸೇವಾ ಕಾರ್ಯಗಳನ್ನು ವ್ಯಾಪಕವಾಗಿ ಜನರಿಗೆ ತಲುಪಿಸುವುದು ಹಾಗೂ ಯುವಜನರನ್ನು ಸಂಘಟನೆಯೊAದಿಗೆ ಜೋಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ನೂತನ ಪದಾಧಿಕಾರಿಗಳು ಭರವಸೆ ನೀಡಿದರು.
ಮುಂದಿನ ಕಾರ್ಯಕ್ರಮಗಳು, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳು, ಸಂಘಟನೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸದಸ್ಯರ ಜವಾಬ್ದಾರಿಗಳ ಕುರಿತು ಇದೇ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು
ನೂತನ ಆಡಳಿತ ಮಂಡಳಿ ಅವಧಿಯಲ್ಲಿ ಸಂಘಟನೆಯು ಇನ್ನಷ್ಟು ಅಭಿವೃದ್ಧಿ ಹೊಂದಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಿದೆ ಎಂಬ ವಿಶ್ವಾಸ ಸಭೆಯಲ್ಲಿ ವ್ಯಕ್ತವಾಯಿತು.